ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರು ಸಂಸ್ಥಾನದ 25ನೇ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 101ನೇಜಯಂತಿ ಅಂಗವಾಗಿ ಚಾಮರಾಜೇಂದ್ರ ವೃತ್ತದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಪ್ರತಿಮೆ ನಿರ್ಮಿಸಿದ ಶಿಲ್ಪಿ ಅರುಣ್ ರವರಿಗೆ ಸನ್ಮಾನಿಸಲಾಯಿತು, ಇದೇ ಸಂಧರ್ಭದಲ್ಲಿ ಸನ್ಮಾನ ಸ್ವೀಕರಿಸಿ ಶಿಲ್ಪಿ ಅರುಣ್ ರವರು ಮಾತನಾಡಿ ನಮ್ಮ ತಾತನವರಾದ ಶಿಲ್ಪಿ ಬಸವಣ್ಣರವರು ಶಿಲ್ಪಕಲೆ ಮತ್ತು ಶಿಲ್ಪವಿನ್ಯಾಸ ವೃತ್ತಿಯನ್ನು ಕುಲಕಸುಬಾಗಿ ನಿರ್ವಹಿಸಿಕೊಂಡು ಬಂದಿದ್ದನ್ನು ನಾನು 5ನೇ ತಲೆಮಾರಿನವನಾಗಿ ಪಾಲಿಸುತ್ತಿದ್ದೇನೆ, 1953ನೇ ಇಸವಿಯಲ್ಲಿ ಶಿಲ್ಪಕಲೆ ಕೆಲಸವಿಲ್ಲದ ಕಾರಣ ಜೀವನನಿರ್ವಹಣೆಗೆ ಬಾಂಬೆಗೆ ಹೋಗಲು ಮುಂದಾದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕರೆದು ಅರಮನೆ ಆವರಣ ಒಳಗಿರುವ ಗಾಯತ್ರಿ ದೇವಸ್ಥಾನ ಕೆತ್ತನೆಕಾರ್ಯ ನಿರ್ಮಾಣ ಕೆಲಸ ನೀಡಿದರು, ನಾಲ್ವಡಿ ರವರ ಕೃಪಕಟಾಕ್ಷ ನಾವು ಶಿಲ್ಪಿಗಳಾಗಿ ಮೈಸೂರಿನಲ್ಲಿ ಉಳಿಯಲು ಕಾರಣವಸಯಿತು ದೇವಸ್ಥಾನ ಕೆತ್ತನೆ ಕೆಲಸ ನಿರ್ವಹಿಸಿದೆವು, ನಾನು ಎಂ.ಬಿ.ಎ ಪಧವಿಧರನಾಗಿದ್ದರೂ ಸಹ ಪಾರಂಪರಿಕತೆ ಉಳಿಸುವ ಶಿಲ್ಪಕಲೆ ಕ್ಷೇತ್ರದಲ್ಲೆ ವೃತ್ತಿ ಕುಲಕಸುಬಿನ ಜೀವನ ಕಟ್ಟುಕೊಂಡಿರುವುದು ಆತ್ಮತೃಪ್ತಿಯಿದೆ, ಅದರಂತೆಯೇ ಇಂದು ಜಯಚಾಮರಾಜೇಂದ್ರ ಒಡೆಯರ್ ರವರ ಪ್ರತಿಮೆ ಕೆತ್ತನೆ ಕಾರ್ಯ ಶ್ರಮಿಸಲು ಅವಕಾಶ ಸಿಕ್ಕಿತು ನಂತರ ರಾಮಕೃಷ್ಣಪರಮಹಂಸರ ಪ್ರತಿಮೆ ಪುರಭವನದ ಮುಂದಿರುವ ಅಂಬೇಡ್ಕರ್ ಪ್ರತಿಮೆ ಸೇರಿದಂತೆ ನೂರಾರು ಪ್ರತಿಮೆ ಶಿಲ್ಪಕಲೆ ಕೆತ್ತನೆ ಮಾಡಲಾಗಿದೆ ಎಂದರು.
ನಂತರ ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮಿದೇವಿ ರವರು ಮಾತನಾಡಿ ಸರ್ದಾರ್ ವಲ್ಲಭಾಯಿ ಪಟೇಲ್ ರವರು 565 ರಾಜರ ಸಂಸ್ಥಾನ ಸಾಮ್ರಾಜ್ಯಗಳನ್ನ ಭಾರತ ಏಕೀಕರಣ ಮಾಡಲು ಮನವಿ ಮಾಡಿದಾಗ ಮೊದಲು ಪ್ರಜಾಪ್ರಭುತ್ವಕ್ಕೆ ಸಹಕಾರ ಕೊಟ್ಟು ಬೆಂಬಲ ನೀಡಿದವರೇ ನಮ್ಮ ಜಯಚಾಮರಾಜೇಂದ್ರ ಒಡೆಯರ್ ರವರು ಎಂಬುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಚಾರ, ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾಗಿ ವಿಶ್ವಹಿಂದೂ ಪರಿಷತ್ ಪ್ರಪ್ರಥಮ ಅಧ್ಯಕ್ಷರಾಗಿದ್ದರು, ಭಾರತದಲ್ಲಿ ಮೈಸೂರು ಸಾಂಸ್ಕೃತಿಕ ಹಿರಿಮೆಯಾಗಿ ಗುರುತಿಸಿಕೊಂಡಿದೆ ಎಂದರೇ ಜಯಚಾಮರಾಜೇಂದ್ರ ಒಡೆಯರ್ ರವರೇ ಮುಖ್ಯ ಕಾರಣ ಎಂದರು,
ಮಾಜಿನಗರ ಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ, ಬಿಜೆಪಿ ಮುಹಿಳಾ ಮುಖಂಡರಾದ ಲಕ್ಷ್ಮಿದೇವಿ, ವಕೀಲರಾದ ಗೋಕಲ್ ಗೋವರ್ಧನ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಯುವಮುಖಂಡರಾದ ಅಜಯ್ ಶಾಸ್ತ್ರಿ, ಪ್ರಶಾಂತ್ ಭಾರದ್ವಾಜ್, ಗಗನ್, ಚಕ್ರಪಾಣಿ, ಮಧು, ಮೋಹನ್ ಹಾಗೂ ಇನ್ನಿತರರು ಇದ್ದರು