ಮೈಸೂರು ,
ರಾಜ್ಯದಲ್ಲಿ ಮಾದರಿ ನಗರಿ ಜಿಲ್ಲೆ ಎಂದು ಹೇಳಲಾಗಿದ್ದ ಮೈಸೂರಿನಲ್ಲಿ ಕೊರೋನ ಸೋಂಕಿನಿಂದ ಮೃತರ ಸಂಖ್ಯೆ ಶರವೇಗದಲ್ಲಿ ಹೋಗಲು ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಮೈಸೂರು ನಗರದಲ್ಲಿ ಇಂದು ಕೂಡ ಕೊರೊನ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ಹೇಳಲಾಗಿದ್ದು ಸಂಜೆ ವೇಳೆಗೆ ದೃಢಪಡಲಿದೆ. ಇಂದು ಮೈಸೂರಿನಲ್ಲಿ ನಲವತ್ತಕ್ಕೂ ಹೆಚ್ಚು ಕೊರೊನಾ ಸೋಂಕಿತರು ದೃಢ ಪಡುವ ಸಾಧ್ಯತೆಗಳು ಕಂಡು ಬಂದಿದೆ. ಟಿ. ನರಸೀಪುರ ತಾಲೂಕಿಗೆ ಹೆಚ್ಚಾಗಿ ಹರಡುತ್ತಿದ್ದು ಅಲ್ಲೂ ಕೂಡ ಇಂದು ಕೆಲವರಿಗೆ ಕೊರೊನ ಸೋಂಕು ದೃಢ ಪಡುವ ಸಾಧ್ಯತೆಯಿದೆ, ಬೆಂಗಳೂರಿನಿಂದ ತಂಡೋಪತಂಡವಾಗಿ ಗ್ರಾಮಗಳಿಗೆ ಸಾರ್ವಜನಿಕರು ಬರುತ್ತಿರುವುದರಿಂದ ನರಸೀಪುರದಲ್ಲಿ ಸೋಂಕು ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ..
ಮೈಸೂರಿನಲ್ಲಿ ಒಂದು ಕಡೆ ಸೀಲ್ಡೌನ್ ಗೆ ಹಾಕಲಾಗಿರುವ ಬ್ಯಾರಿಕೇಡ್ ಅನ್ನು ತೆಗೆದು ಮತ್ತೊಂದು ಕಡೆಗೆ ಹಾಕುವುದರಲ್ಲಿ ಸಂಬಂಧಪಟ್ಟ ಇಲಾಖೆ ನಿರತವಾಗಿದೆ.
ಆದರೆ ಮೈಸೂರು ನಗರದ ಇಂದಿನ ಪರಿಸ್ಥಿತಿ ಗಲ್ಲಿಗಲ್ಲಿಗೂ ಕೆಲವೇ ರಸ್ತೆಗಳ ಅಂತರದಲ್ಲಿ ಕೊರೊನಾ ಸೋಂಕು ಹರಡುತ್ತಿರುವುದು ತಿಳಿದುಬಂದಿದೆ.
ಮೈಸೂರು ನಗರದಲ್ಲಿ ಯಾವ ಮೊಹಲ್ಲಾ ಅಥವಾ ಬಡಾವಣೆಗಳಲ್ಲಿ ಇರಲಿಲ್ಲವೋ ಆ ಸ್ಥಳಗಳಲ್ಲೆಲ್ಲ ಸೋಂಕು ಹೆಚ್ಚಾಗುತ್ತಿದೆ.