ಮೈಸೂರು: ಕೊರೊನಾ ಎಫೆಕ್ಟ್ 2 ದಿನ ನ್ಯಾಯಾಲಯ ಬಂದ್

ಗೌರವಾನ್ವಿತ ಎಲ್ಲಾ ನನ್ನ ವಕೀಲ ಬಂಧುಗಳಲ್ಲಿ ವಿನಂತಿ ನಮ್ಮ ಸಂಘದ ಒಬ್ಬರು ಸದಸ್ಯರಿಗೆ ಕರೋನ ವೈರಾಣು ಸೋಂಕು ತಗಲಿದೆ ಎಂದು ತಿಳಿದುಬಂದಿದೆ ಆದ್ದರಿಂದ ಈ ದಿನ ಬುಧವಾರ ಮತ್ತು ನಾಳೆ ಗುರುವಾರ ಎರಡು ದಿನಗಳು ಹೊಸ ಮತ್ತು ಹಳೆಯ ಕಟ್ಟಡದ ಎಲ್ಲಾ ಕೋರ್ಟುಗಳ ಕಾರ್ಯಕಲಾಪಗಳು ನಡೆಯುವುದಿಲ್ಲ. ಕಾರಣ ಎರಡು ಕೋರ್ಟುಗಳನ್ನು ಸ್ವಚ್ಛ ಗೊಳಿಸಬೇಕಾಗಿದೆ ಈ ಸಂಬಂಧ ಮೈಸೂರು ಡಿಎಚ್ಒ ರವರಿಂದ ಹಾಗೂ ಪ್ರಧಾನ ಮತ್ತು ಜಿಲ್ಲಾ ನ್ಯಾಯಾಧೀಶರಿಂದ ಮಾಹಿತಿ ಬಂದಿದ್ದು ವಕೀಲರು ಕೋರ್ಟುಗಳಿಗೆ ಯಾರು ಬರಬಾರದು ಎಂದು ವಿನಂತಿಸಿಕೊಳ್ಳುತ್ತೇನೆ. ಸಂಬಂಧಪಟ್ಟ ಕೇಸುಗಳನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಗುತ್ತದೆ. ಎಸ್ ಆನಂದ ಕುಮಾರ್ ಅಧ್ಯಕ್ಷರು ಮೈಸೂರು ವಕೀಲರ ಸಂಘ ಮೈಸೂರು