ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಹಾಯಕ ಇಂಜಿನಿಯರ್ (AE)ಆಗಿ ಕಾರ್ಯ ನಿರ್ವಹಿಸುತ್ತಿರುವ ನಟೇಶ್ ಅವರಿಗೆ ಕೋವಿಡ್ ಪಾಸಿಟೀವ್ ದೃಢ ಪಟ್ಟಿದ್ದು ಅವರು ಹೋಮ್ ಐಸೋಲೇಷನ್ ನಲ್ಲಿ ಇರುತ್ತಾರೆ ಎಂದು ತಿಳಿಸಲಾಗಿದೆ. ಮೂಡಾ ಕಚೇರಿಯನ್ನು ಇವತ್ತಿನ ಮಟ್ಟಿಗೆ ಸೀಲ್ಡೌನ್ ಮಾಡಲಾಗಿದೆ.
ಮೂಡಾ ಕಚೇರಿಯ ಸುತ್ತಮುತ್ತ ಕಾಲೇಜುಗಳಿದ್ದು ಹಾಗೂ ವಿಶ್ವವಿದ್ಯಾನಿಲಯದ ಕಚೇರಿ, ಮೆಡಿಕಲ್ ಕಾಲೇಜು ವಿದ್ಯಾರ್ಥಿ ನಿಲಯ ಇರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ ಎಂದು ಹೇಳಲಾಗಿದೆ.