ಮೈಸೂರು: ಕೋರೋನ +ve ವ್ಯಕ್ತಿಗಳಿಗೆ ಮನೆಯಲ್ಲೇ ಗೃಹ ಬಂಧನಕ್ಕೆ D.C. ಅನುಮತಿ

ಯಾವ ವ್ಯಕ್ತಿಗೆ ಕೋವಿಡ್ ಪರೀಕ್ಷೆ ದೃಢಪಟ್ಟಿದೆಯೋ ಅವರಿಗೆ ಈ ಕೆಳಕಂಡ ನಿಬಂಧನೆಗೊಳಪಟ್ಟು “ ಮನೆಯಲ್ಲೇ ಪ್ರತ್ಯೇಕವಾಗಿರುವುದಕ್ಕೆ ಅನುಮತಿ ನೀಡಲಾಗಿದೆ : ಕೋವಿಡ್ ಸೋಂಕಿನ ಲಕ್ಷಣ ರಹಿತರು ಲಕ್ಷಣ ಅಥವಾ ಸೌಮ್ಯ ಲಕ್ಷಣಗಳಿವೆಯೋ ಅಂಥವರಿಗೆ ಮಾತ್ರ ಮನೆಯಲ್ಲಿ ಪ್ರತ್ಯೇಕವಾಗಿರಲು ಅನುಮತಿ ನೀಡಲಾಗುವುದು . ಅವರಿಗೆ ಮನೆಯಲ್ಲಿ ಪ್ರತ್ಯೇಕವಾಗಿರುವ ಶಿಷ್ಠಾಚಾರದ ಬಗ್ಗೆ ತಿಳುವಳಿಕೆ ನೀಡಲಾಗುವುದು . ಮನೆಯಲ್ಲಿ ಪ್ರತ್ಯೇಕವಾಗಿರಿಸುವಿಕೆಗೆ ಮನೆಯು ಸೂಕ್ತವಾಗಿದೆಯೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ , ಮನೆಯಲ್ಲಿ ಪ್ರತ್ಯೇಕವಾಗಿರುವ ಇಡೀ ಅವಧಿಯಲ್ಲಿ ವ್ಯಕ್ತಿಯನ್ನು ದೈನಂದಿನ ಅನುಸರಣೆ ಮಾಡಲು ಅನುಕೂಲವಾಗುವಂತೆ ಟೆಲಿ ಕನ್‌ಸಟ್ಟೇಷನ್ಸ್ ಸಂಪರ್ಕವನ್ನು ಸ್ಥಾಪಿಸಲಾಗುವುದು . ಯಾವ ವ್ಯಕ್ತಿಗೆ ಕೋವಿಡ್ ಪರೀಕ್ಷೆ ದೃಢಪಟ್ಟಿದೆಯೋ ಅವರಿಗೆ ಈ ಕೆಳಕಂಡ ನಿಬಂಧನೆಗೊಳಪಟ್ಟು “ ಮನೆಯಲ್ಲೇ ಪ್ರತ್ಯೇಕವಾಗಿರುವುದಕ್ಕೆ ಅನುಮತಿ ನೀಡಲಾಗಿದೆ : ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯು ಪ್ರತಿ ದಿನ ವೈದ್ಯರಿಗೆ / ಆರೋಗ್ಯ ಅಧಿಕಾರಿಗಳಿಗೆ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ಮಾಡುವುದು . • ಇಂತಹ ವ್ಯಕ್ತಿಗಳು ಪಲ್ಸ್ ಆಕ್ಸಿಮೀಟರ್ , ಡಿಜಿಟಲ್ ಥರ್ಮಾ ಮೀಟರ್ ಮತ್ತು ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು ಹೊಂದಿರಬೇಕು . ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯನ್ನು ಬಿಡುಗಡೆಮಾಡುವುದು , ಪ್ರಸ್ತುತ ಕೋವಿಡ್ -19 ಬಿಡುಗಡೆ ರಾಜ್ಯ ಸರ್ಕಾರದ ಶಿಷ್ಠಾಚಾರದಂತೆ ಇರುತ್ತದೆ . ಮನೆಯಲ್ಲಿ ಪ್ರತ್ಯೇಕವಾಗಿರಿಸುವುದು ಕುಟುಂಬದ ಸದಸ್ಯರಿಗೆ , ಅಕ್ಕ – ಪಕ್ಕದಮನೆಯವರಿಗೆ , ಚಿಕಿತ್ಸೆ ನೀಡುವ ವೈದ್ಯರಿಗೆ ಹಾಗೂ ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ತಿಳಿದಿರತಕ್ಕದ್ದು . ವ್ಯಕ್ತಿಯ ಮನೆಯಲ್ಲಿ ಆರೋಗ್ಯ ತಂಡದಿಂದ ನಡೆಸಲಾಗುವ ಪ್ರಾಥಮಿಕ ಪರಿಶೀಲನೆ ಹಾಗೂ ಟಯೇಜ್ • ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯು ತನ್ನ ಮನೆಯಲ್ಲಿ ಇತರರಿಂದ ಪ್ರತ್ಯೇಕವಾಗಿ ಒಂದು ಕೊಠಡಿಯಲ್ಲಿರುವುದು . • ಮನೆಯಲ್ಲಿ ಪ್ರತ್ಯೇಕವಾಗಿರಿಸುವಿಕೆಗೆ ಮನೆಯು ಸೂಕ್ತವಾಗಿದೆಯೆ ಹಾಗೂ ವ್ಯಕ್ತಿಯ ಟ್ರಯೇಜ್ ಪರಿಶೀಲಿಸಲು ಆರೋಗ್ಯ ತಂಡ ಮನೆಗೆ ಭೇಟಿ ನೀಡುತ್ತಾರೆ . • ಹಾಗೂ ಈ ಲಕ್ಷಣಗಳಿಗಾಗಿ ವಿಚಾರಿಸುತ್ತಾರೆ : ಜ್ವರ , ಶೀತ , ಕೆಮ್ಮು , ಗಂಟಲು ನೋವು , ಉಸಿರಾಟದ ತೊಂದರೆ ಇತ್ಯಾದಿ .
ಆರೋಗ್ಯ ಸಿಬ್ಬಂದಿಗಳು ಈ ಕೆಳಕಂಡ ಅಂಶಗಳಿಗಾಗಿ ಪರಿಶೀಲನೆ ಮಾಡುತ್ತಾರೆ ( ಟ್ರಯೇಚ್ ) . ಶರೀರದ ತಾಪಮಾನದ ಅಳತೆ ನಾಡಿಮಿತಕ್ಕಾಗಿ ಪಲ್ಸ್ ಆಕ್ಸಿಮೆಟ್ರಿ ರಕ್ತದಲ್ಲಿನ ಸಕ್ಕರೆಯ ಅಂಶ ಪತ್ತೆಗಾಗಿ ಗ್ಲಕೋ ಮೀಟರ್ ರಕ್ತದ ಒತ್ತಡದ ಮಾಪಕದಂತೆ ರಕ್ತದ ಒತ್ತಡದ ದಾಖಲೆ ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಚಾರಣೆ • ಟೆ – ಮಾನಿಟರಿಂಗ್ ಸಂಪರ್ಕ ಕೇಂದ್ರಕ್ಕೆ ವ್ಯಕ್ತಿಯನ್ನು ಸಂಪರ್ಕಿಸುವುದು ಮನೆಯಲ್ಲಿ ಪ್ರತ್ಯೇಕವಾಗಿರಿಸಲು ಅರ್ಹತೆಗಳು ವ್ಯಕ್ತಿಯು ಲಕ್ಷಣ ರಹಿತ / ಸೌಮ್ಯವಾದ ಲಕ್ಷಣಗಳಿವೆ ಎಂದು ಚಿಕಿತ್ಸೆ ನೀಡುವ ವೈದ್ಯಾಧಿಕಾರಿ ವೈದ್ಯರು ಪರೀಕ್ಷೆ ನಡೆಸಿದ ದೃಢಪಡಿಸುವರು . • ಇಂತಹ ವ್ಯಕ್ತಿಗಳು ಮನೆಯಲ್ಲಿ ಪ್ರತ್ಯೇಕವಾಗಿರಲು ಅಗತ್ಯವಿರುವ ಸೌಲಭ್ಯಗಳನ್ನು ಮನೆಯಲ್ಲಿ ಹೊಂದಿರುತಕ್ಕದ್ದು . • 24 * 7 ಅವಧಿಗೆ ಅಂದರೆ ಯಾವಾಗಲೂ ಆರೈಕೆ ನೀಡಲು ಒಬ್ಬರು ಆರೈಕೆದಾರರು ಇರತಕ್ಕದ್ದು . * ಸತತ ಸಂಪರ್ಕವಿರುವುದು ಪೂರ್ವಭಾವಿ ಅಗತ್ಯವಾಗಿರುತ್ತದೆ . ಸೌಮ್ಯ ಸ್ವರೂಪದ ಜ್ವರ < 38 ° C ( < 100.4 ° F ) ಆಮ್ಲಜನಕದ ಪರ್ಯಾಪ್ತತೆಯು > 95 % ಇರತಕ್ಕದ್ದು . . ಮನೆಯಲ್ಲಿ ಪ್ರತ್ಯೇಕವಾಗಿರಿಸಲು ಅರ್ಹತೆಗಳು * ವಯಸ್ಸು 60 ವರ್ಷಕ್ಕಿಂತ ಕಡಿಮೆ ಇರತಕ್ಕದ್ದು . • ಇತರ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದ ಒತ್ತಡ , ಸಕ್ಕರೆ ಕಾಯಿಲೆ , ಬೊಜ್ಜು , ಥೈರಾಯಿಡ್ ಕಾಯಿಲೆಗಳಿದ್ದು , ಹಾಗೂ ವೈದ್ಯಾಧಿಕಾರಿಗಳು | ವೈದ್ಯರ ಮೌಲ್ಯ ಮಾಪನದಂತೆ , ಈ ಆರೋಗ್ಯ ಸಮಸ್ಯೆಗಳು ನಿಯಂತ್ರಣಲ್ಲಿದ್ದು , ಮನೆಯಲ್ಲಿಯೇ ನಿರ್ವಹಿಸಬಹುದಾದರೆ , • ಇತರ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲದಿದ್ದಲ್ಲಿ ವ್ಯಕ್ತಿಯ ಸ್ವಯಂ- ಪ್ರತ್ಯೇಕವಾಗಿರುವ ಬಗ್ಗೆ ಸಹಿ ಮಾಡಿರುವ ಒಂದು ಮುಚ್ಚಳಿಕೆ ಪತ್ರವನ್ನು ನೀಡಿದಾಗ , * ವ್ಯಕ್ತಿಯು ತನ್ನ ಆರೋಗ್ಯ ಸ್ಥಿತಿಯನ್ನು ಉಸ್ತುವಾರಿ ಮಾಡಲು ಒಪ್ಪಿದಾಗ . * ಹೆರಿಗೆಯ ನಿರೀಕ್ಷಿತ ದಿನಾಂಕಕ್ಕೆ 4 ವಾರಗಳೊಳಗೆ ಇರುವ ಗರ್ಭಿಣಿಯರಿಗೆ ಮನೆಯಲ್ಲಿ ಪ್ರತ್ಯೇಕವಾಗಿರುವುದಕ್ಕೆ ಅನುಮತಿ ಇರುವುದಿಲ್ಲ , .
ಹೆಚ್ಚಿನ ಆರೋಗ್ಯ ಸಲಹೆಯನ್ನು ಯಾವಾಗ ಪಡೆಯಬೇಕು ಈ ಕೆಳಕಂಡ ಲಕ್ಷಣಗಳು ಹಾಗೂ ಚಿಣ್ಣೆಗಳು ಕಂಡು ಬಂದ ಕೂಡಲೇ * ಉಸಿರಾಟದ ತೊಂದರೆ * ಬೆರಳ ತುದಿಯ ಆಸ್ಟಿ ಮೀಟರ್‌ನಲ್ಲಿ ಆಮ್ಲಜನಕದ ಪರ್ಯಾಪ್ತತೆ ಶೇಕಡಾ 94 ಅಥವಾ ಅದಕ್ಕಿಂತ ಕಡಿಮೆ . * 24 ಗಂಟೆಗಳ ಕಾಲ ಅಥವಾ ಅದಕ್ಕೂ ಹೆಚ್ಚು ಕಾಲ ಸತತ ಜ್ವರ 38 ( ( 100.40 F ) ಎದೆಯಲ್ಲಿ ಸತತವಾದ ನೋವು ! ಒತ್ತಡ * ಮಾನಸಿಕ ಅಸ್ಪಷ್ಟತೆ ಅಥವಾ ಪ್ರತಿಕ್ರಯಿಸಲು ಅಸಮರ್ಥತೆ * ಮಂದವಾದ ಮಾತು ನಡುಕ * ಮುಖ ಅಥವಾ ಕೈಕಾಲುಗಳಲ್ಲಿ ನಿಶ್ಯಕ್ತತೆ ಅಥವಾ ಜೋಮು ಹಿಡಿಯುವಿಕೆ ಮುಖ } ತುಟಿಗಳು ನೀಅಗಟ್ಟುವಿಕೆ ವ್ಯಕ್ತಿಯು ಗಂಭೀರವೆಂದು ಪರಿಗಣಿಸಬಹುದಾದ ಇತರ ಯಾವುದೇ ಲಕ್ಷಣಗಳು ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆಯಂತೆ ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯನ್ನು ಮೇಲ್ವಿಚಾರಣೆ ಮಾಡುವ ಆರೋಗ್ಯ ಸಿಬ್ಬಂದಿಗಳಿಗೆ ಸೂಚನೆಗಳು ವ್ಯಕ್ತಿಯು ಮನೆಯಲ್ಲಿ ಕಟ್ಟುನಿಟ್ಟಾಗಿ ಪ್ರತ್ಯೇಕವಾಗಿರುವುದನ್ನು ಖಾತರಿಪಡಿಸಿಕೊಳ್ಳಿ . * ವ್ಯಕ್ತಿಯು ಮನೆಯಲ್ಲಿ ಪ್ರತ್ಯೇಕವಾಗಿರುವ ಬಗ್ಗೆ ನೋಟಿಸ್ ಅನ್ನು ಮನೆಯ ಮುಖ್ಯದ್ವಾರದ ಮೇಲೆ ಅಂಟಿಸುವುದು . * 17 ದಿನಗಳವರೆಗೆ ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯ ಕೈಮೇಲೆ ಮುದ್ರೆ ಹಾಕುವುದು . ಕ್ವಾರೆಂಟೈನ್ ವಾಚ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ದೈನಂದಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿಕೊಳ್ಳುವಂತೆ ಸೂಚಿಸುವುದು . ವ್ಯಕ್ತಿಯು ಮನೆಯಲ್ಲಿ ಪ್ರತ್ಯೇಕವಾಗಿರುವ ಬಗ್ಗೆ ಕನಿಷ್ಠ ಇಬ್ಬರು ಅಕ್ಕಪಕ್ಕದವರಿಗೆ ಮಾಹಿತಿ ನೀಡುವುದು . . ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯನ್ನು ಮೇಲ್ವಿಚಾರಣೆ ಮಾಡುವ ಆರೋಗ್ಯ ಸಿಬ್ಬಂದಿಗಳಿಗೆ ಸೂಚನೆಗಳು * ವಾರ್ಡ್ ಗ್ರಾಮ / ಬೂತ್ ಮಟ್ಟದಲ್ಲಿ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಮಟ್ಟದಲ್ಲಿ ಮೂರು ಸದಸ್ಯರ ಸಮಿತಿಯನ್ನು ರಚಿಸಿ , ಸದರಿ ವ್ಯಕ್ತಿಯು ಮನೆಯಲ್ಲಪ್ರತ್ಯೇಕತೆಯ ನಿಯಮಗಳನ್ನು ಪಾಲಿಸುವುದನ್ನು ಅನುಸರಣೆ ಮಾಡುವುದು . * ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯು ಶಿಷ್ಟಾಚಾರ ಉಲ್ಲಂಘಿಸಿರುವುದು ಕಂಡುಬಂದಲ್ಲ ವಿಪತ್ತು ನಿರ್ವಹಣಾ ಕಾಯಿದೆಯ ಅಡಿಯಲ್ಲಿ ಹಾಗೂ ಐ ಪಿ ಸಿ ನಿಯಮಗಳ ಅನ್ವಯ ಅಂತಹವರನ್ನು ಕೊರೊನಾ ಆರೈಕೆ ಕೇಂದ್ರಕ್ಕೆ ವರ್ಗಾಯಿಸುವುದು . ದೈನಂದಿನ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಟೆಅಮಾನಿಟರಿಂಗ್ ‘ ಸಂಪರ್ಕದಲ್ಲಿರುವಂತೆ ಸೂಚಿಸಿ . * ಆಪ್ತಮಿತ್ರ ಸಹಾಯವಾಣಿ ( 14.410 ) ಯ ಮೂಲಕ ಸದರಿ ವ್ಯಕ್ತಿಗಳ ಪ್ರತಿದಿನ ದೂರವಾಣಿ ಕರೆ ಮಾಡಲಾಗುವುದು . .

ಮೈಸೂರು ಮುಂದಿನ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ಪಾಸಿಟಿವ್ ಇರುವವರನ್ನು ಗೃಹ ಬಂಧನದಲ್ಲಿ ಇಟ್ಟು ಚಿಕಿತ್ಸೆ ನೀಡಬೇಕಾಗುವುದು ಪರಿಸ್ಥಿತಿ ಬರುವುದು ಹತ್ತಿರವಾಗಿದೆ, ಎಂದು ಜಿಲ್ಲಾಧಿಕಾರಿಯವರು ಪರೋಕ್ಷವಾಗಿ ತಿಳಿಸಿದ್ದಾರೆ

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಮೈಸೂರಿನಲ್ಲಿ ಇನ್ನೂ ಪಾಸಿಟಿವ್ ಪ್ರಕರಣ ಜಾಸ್ತಿ ಆಗುತ್ತವೆ. ಹೀಗಾಗಿ ಬೆಂಗಳೂರಿನಿಂದ ಬರುವ ಪ್ರವಾಸಿಗರನ್ನು ನಿಷೇಧಿಸಬೇಕೆಂಬ ಒತ್ತಾಯ ಇದೆ. ಇದನ್ನು ಕೂಡ ಪರಿಶೀಲಿಸುತ್ತಿದ್ದೇವೆ. ಬೆಂಗಳೂರಿಂದ ಬರುವವರ ತಪಾಸಣೆ. ನಿಷೇಧ ಕಷ್ಟ ಸಾಧ್ಯ ಇದೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಇನ್ನೂ ಕೊರೋನಾ ಪ್ರಕರಣ ಜಾಸ್ತಿ ಆಗುತ್ತವೆ. ತೆಗೆಯುತ್ತಿರುವ ಸ್ಯಾಂಪಲ್ ನಲ್ಲಿ ಹೆಚ್ಚು ಪಾಸಿಟಿವ್ ಬರುತ್ತಿವೆ. ಡೆತ್ ಕೂಡ ಜಾಸ್ತಿ ಆಗುತ್ತಿವೆ. ರೆಸಾರ್ಟ್ ಗಳಿಗೆ ಬರುತ್ತಿರುವ ಪ್ರವಾಸಿಗರ ನಿಷೇಧದ ಬಗ್ಗೆ ಗಂಭೀರವಾಗಿ ಚರ್ಚೆ ಮಾಡ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಅಭೀರಾಂ ಜೀ ಶಂಕರ ಮಾಹಿತಿ ನೀಡಿದ್ದಾರೆ

ಸರ್ಕಾರಿ ಅಧಿಕಾರಿಗಳಿಗೆ ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿ ಅಭಿರಾಂ ಜೀ ಶಂಕರ್, ಸರ್ಕಾರಿ ಅಧಿಕಾರಿಗಳಿಗೆ ಕೊರೊನಾ ಹೆಚ್ಚುತ್ತಿದೆ ಅಂತ ಕಚೇರಿಗಳನ್ನ ಬಂದ್ ಮಾಡಲು ಆಗಲ್ಲ. ಈಗ ಎಲ್ಲಾ ಕಡೆ ರೈತರು ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಮಯ. ಒಂದಲ್ಲಾ ಒಂದು ಕೆಲಸಕ್ಕೆ ರೈತರು ಬರುತ್ತಿರುತ್ತಾರೆ‌. ನಾವು ಅವರನ್ನ ಬರಬೇಡಿ ಅಂತ ಹೇಳಲು ಆಗಲ್ಲ. ಆದರೆ ಅನವಶ್ಯಕವಾಗಿ ಎಲ್ಲಿಗೂ ಹೋಗಬೇಡಿ. ಸುಖಾಸುಮ್ಮನೆ ಕಚೇರಿಗಳಿಗೆ ಅಲೆದಾಡಬೇಡಿ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ಎಲ್ಲರಿಗೂ ಹೆಚ್ಚು ಓಡಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.