ಮೈಸೂರು ,ಕೋವಿಡ್-19: .50 ಖಾಸಗಿ ಆಸ್ಪತ್ರೆ 50

Share

ಕೋವಿಡ್-19: ಖಾಸಗಿ ಆಸ್ಪತ್ರೆಗಳು ಶೇ.50 ಖಾಸಗಿ
ಮೈಸೂರು, ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ಖಾಸಗಿ ಆಸ್ಪತ್ರೆಗಳ ಹಾಸಿಗೆಯಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಜಿಲ್ಲಾಧಿಕಾರಿ ಬಿ.ಶರತ್ ಅವರು ಆದೇಶಿಸಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾದ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆಗಳು, ಸಾಮಾನ್ಯ ಬೆಡ್ಸ್, ಆಕ್ಸಿಜನ್ ಬೆಡ್ಸ್, ಹೆಚ್.ಡಿ.ಯು ಬೆಡ್ಸ್ ಹಾಗೂ ಐ.ಸಿ.ಯು ವಾರ್ಡ್‍ಗಳಾಗಿ ವಿಂಗಡಿಸಿ ಶೇ.50 ರಷ್ಟನ್ನು ಎಲ್ಲಾ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಎ.ಬಿ.ಆರ್.ಕೆ ಅಡಿಯಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.
ಬೆಡ್ ಫೆಸಿಲಿಟಿ ಅಪ್ಲಿಕೇಷನ್ ಅಲಾಟ್‍ಮೆಂಟ್ ಇಂಡಿಯಕೌನ್ಸಿಲ್ ಪೋರ್ಟಲ್‍ನ ಬಗ್ಗೆ ಹ್ಯಾಂಡ್ಸ್‍ಆನ್ ಟ್ರೈನಿಂಗ್ ಮತ್ತು ಯುಎಸ್‍ಆರ್‍ಐಡಿ, ಕ್ರಿಯೇಟಿಂಗ್ ಲಾಗಿನ್ ಕ್ರೆಡೆನ್ಸಿಯಲ್ಸ್, ಪಾಸ್‍ವರ್ಡ್‍ಗಳನ್ನು ತಿಳಿದುಕೊಳ್ಳುವ ಬಗ್ಗೆ ಮಾರ್ಗದರ್ಶನವನ್ನು ಡಿ.ಎಸ್.ಓ ವಿಭಾಗದಿಂದ ಪಡೆಯುವುದು.
ಸಾರಿ-ಐ.ಎಸ್.ಐ ವರದಿಗಳನ್ನು ಕಡ್ಡಾಯವಾಗಿ ಪೋರ್ಟಲ್‍ನಲ್ಲಿ ಖಾಸಗಿ ಆರೋಗ್ಯ ಸಂಸ್ಥೆಗಳು ಮಾಹಿತಿಯನ್ನು http://kpme.karnataka,teah/index.php/admin/patients ರಲ್ಲಿ ನಮೂದಿಸುವುದು. ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ವಿಧಿಸುವುದು. ಹೆಚ್ಚಿನ ಶುಲ್ಕವನ್ನು ವಿಧಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು.
ಸ್ಪೆಷಾಲಿಟಿ ಆಸ್ಪತ್ರೆಗಳು ಸಾಮಾನ್ಯ ಕೋವಿಡ್-19 ರೋಗಿಗಳನ್ನು ನೋಂದಾಯಿಸಿಕೊಳ್ಳಲು ಕಷ್ಟವಾದಲ್ಲಿ ಆಸ್ಪತ್ರೆಗಳನ್ನು ಸ್ಪೆಷಾಲಿಟಿ ಕೋವಿಡ್-19 ಸೆಂಟರ್‍ಗಳಾಗಿ ಮಾರ್ಪಡಿಸಲು ಆದೇಶಿಸಿದೆ.
ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಹಾಸಿಗೆಗಳ ಲಭ್ಯತೆಗಳ ಬಗ್ಗೆ ಮಾಹಿತಿ ಪಡೆಯಲು http://mysore.nic.in/en/covid19info/ ಈ ಲಿಂಕ್ ಭೇಟಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2529205, ಟೋಲ್ ಫ್ರೀ ನಂ: 1077 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಬಿ.ಶರತ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

                                    


Share