ಮೈಸೂರು-ಗುರುವಂದನಾ ಕಾರ್ಯಕ್ರಮ

20
Share

ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ, ಮೈಸೂರು ವಿಶ್ವವಿದ್ಯಾನಿಲಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುವೆಂಪುನಗರ ಮೈಸೂರು ಇವರ ವತಿಯಿಂದ
ಎನ್ಎಸ್ಎಸ್ ಮತ್ತು ಅಂತಿಮ ವರ್ಷದ
ವಿದ್ಯಾರ್ಥಿಗಳಿಂದ
ಡಾಕ್ಟರ್ ಎಸ್ ಜಿ ರಾಮದಾಸ ರೆಡ್ಡಿ ಅವರಿಗೆ ಗುರು ವಂದನಾ ಸಮಾರಂಭವನ್ನು ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು
ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಸಲಾಯಿತು.

ಬಳಿಕ ಕಾಲೇಜಿನ ವಾಣಿಜ್ಯ ಶಾಸ್ತ್ರದ ವಿಭಾಗದ ಸಹಾಯ ಪ್ರಾಧ್ಯಾಪಕರಾದ ಪ್ರೊಫೆಸರ್ ಮಂಜುಳಾ ಎಂ.ಎಲ್. ಅವರು
ಪ್ರಸ್ತಾವಿಕ ನುಡಿಗಳನ್ನು ಮಾತನಾಡಿದರು.

ಪ್ರೊಫೆಸರ್ ಬಿ ಚಂದ್ರಶೇಖರ್ ಅವರು ವಿಶೇಷ ಉಪನ್ಯಾಸ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾಕ್ಟರ್ ಎಸ್ ಜಿ
ರಾಮದಾಸ ರೆಡ್ಡಿ ಅವರು ಈ ಗುರುವಂದನಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಮಾಡುತ್ತಿರುವುದು ಸಂಚಲನ ಮೂಡಿಸುವಂತಹ ಕಾರ್ಯಕ್ರಮವಾಗಿದ್ದು
ಎನ್ ಎಸ್ ಎಸ್ ಅಧಿಕಾರಿಯಾಗಿ ಇತಿಹಾಸ ಪ್ರಾಧ್ಯಾಪಕನಾಗಿ ಎಲ್ಲಾ ವಿದ್ಯಾರ್ಥಿಗಳನ್ನು ರಾಜ್ಯ ಜಿಲ್ಲಾ
ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಸಂಶೋಧನಾತ್ಮಕ ವಿದ್ಯಾರ್ಥಿಗಳನ್ನು ಮಾಡುವುದರ ಜೊತೆಗೆ
ವ್ಯಕ್ತಿತ್ವ ನಿರ್ಮಾಣ ಮಾಡುವುದರ ಜೊತೆಗೆ ನಾಯಕರನ್ನಾಗಿ ಮಾಡುವುದರ ಜೊತೆಗೆ ನಮ್ಮ ಕಾಲೇಜಿಗೆ ಶಿಕ್ಷಣ ಇಲಾಖೆಗೆ ಕಾಲೇಜಿನ ವಿದ್ಯಾರ್ಥಿಗಳು ಕೀರ್ತಿಯನ್ನು ತಂದಿರುವುದು ಪ್ರಶಂಸನೀಯ ಎಂದರು.

ತದನಂತರ ಮಾತನಾಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರು

ಇಂದಿನ ಗುರುವಂದನಾ ಕಾರ್ಯಕ್ರಮ ಅತ್ಯಂತ ಸಾರ್ಥಕವಾದ ಕಾರ್ಯಕ್ರಮವಾಗಿದ್ದು ಹಳೆಯ ಗುರುಪರಂಪರೆಗಳನ್ನು ನೆನಪಿಸುವಂತಹ ಕಾರ್ಯಕ್ರಮವಾಗಿದ್ದು
ವಿದ್ಯಾರ್ಥಿಗಳಿಗಿರುವ ಗೌರವ ಅಭಿಮಾನ ಪ್ರೀತಿ ಸಂತೋಷ ಸಂಭ್ರಮವನ್ನು ನೋಡಿದಾಗ
ಗುರುಗಳ ಮೇಲಿನ ಪ್ರೀತಿ ಅವರ ಶ್ರಮ ಮಕ್ಕಳ ಮೇಲೆ ಪ್ರಭಾವ ಬೀರಿದೆ ಎಂದು ತಿಳಿಸಿದರು

ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಈ.ಸಿ ನಿಂಗರಾಜ್ ಗೌಡ ಅವರು ಮಾತನಾಡಿ
ಒಳ್ಳೆ ಗುರುವಾಗಿದ್ದರೆ ಒಳ್ಳೆ ಶಿಷ್ಯರು ಸೃಷ್ಟಿಯಾಗುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು,
ಡಾ.ರಾಮದಾಸ್ ರೆಡ್ಡಿ ಅವರು NSS ಅಧಿಕಾರಿಯಾಗಿ, ಅತ್ಯುತ್ತಮ ಪ್ರಾಧ್ಯಾಪಕರಾಗಿ, ಉನ್ನತ ಸಂಶೋಧಕರಾಗಿ ರಾಜ್ಯದೆಲ್ಲಡೆ ಸುಮಾರು 34ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸ್ವಾಮಿ ವಿವೇಕಾನಂದ, ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್, ಡಾ.APJ ಅಬ್ದುಲ್ ಕಲಾಂ, ಡಾ.ಸರ್ವಪಲ್ಲಿ ರಾಧಕೃಷ್ಣನ್ ಇನ್ನೂ ಮುತಾಂದ ಮಹನೀಯರ ವಿಚಾರಧಾರೆಗಳನ್ನೂ ಮೈಗೂಡಿಸಿಕೊಂಡು, ವಿದ್ಯಾರ್ಥಿಗಳಿಗೂ ಧಾರೆ ಎರೆದಿದ್ದಾದರೆ.. ಇವರ NSS ನ ಸೇವೆ ಮತ್ತು ಪ್ರಾಚೀನ ಇತಿಹಾಸ ಮತ್ತು ಪುರಾತತ್ವಾ ಕ್ಷೇತ್ರದಲ್ಲಿ ಮಾಡಿರುವ ಸಂಶೋಧನೆಯಿಂದಾಗಿ ಮೈಸೂರು ವಿಶ್ವವಿದ್ಯಾನಿಲಯದ ಜೊತೆಗೆ ಕರ್ನಾಟಕ ರಾಜ್ಯಕ್ಕೂ ದೇಶ – ವಿದೇಶಗಳಲ್ಲೂ ಕೀರ್ತಿ ಬಂದಿದೆ ಎಂದು ಡಾ.ಈ.ಸಿ. ನಿಂಗರಾಜ್ ಗೌಡರವರು ವಿವರವಾಗಿ ತಿಳಿಸಿದರು.

ಈ ರೀತಿಯ ಕಾರ್ಯಕ್ರಮಗಳಿಂದಾಗಿ ವಿದ್ಯಾರ್ಥಿಗಳು ಮಾತ್ರವಲ್ಲದೇ ರಾಜ್ಯದ ಇತರ ಅಧ್ಯಾಪಕರಿಗೂ ತಾವೂ ಕೂಡ ಡಾ.ಎಸ್.ಜಿ . ರಾಮದಾಸ ರೆಡ್ಡಿರವರ ರೀತಿ ಆಗಲೂ ಪ್ರೇರಣೆ ಸಿಗುತ್ತದೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡರವರು ತಿಳಿಸಿದರು. ಡಾ.ರಾಮದಾಸ ರೆಡ್ಡಿರವರು ನಿವೃತ್ತಿಯ ನಂತರ ರಾಜ್ಯದಲ್ಲಿ ರಾಷ್ಟ್ರ್ರೀಯ ಶಿಕ್ಷಣ ನೀತಿ- NEP ಉತ್ತಮವಾಗಿ ಜಾರಿಯಾಗಲೂ ಶ್ರಮಿಸುವಂತೆ ಅವರಲ್ಲಿ ವಿನಂತಿಸಿಕೊಂಡರು..
ಡಾ.ರಾಮದಾಸ ರೆಡ್ಡಿರವರ ಮೇಲೆ ಪ್ರೀತಿ, ವಿಶ್ವಾಸ, ಅಭಿಮಾನ ಇರುವುದರಿಂದ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಬ್ಬದ ರೀತಿ ಸಂಭ್ರಮದಿಂದ ಅದ್ದೂರಿಯಾಗಿ ಕಾರ್ಯಕ್ರಮವನ್ನು ಮಾಡಿದ್ದಾರೆ
ಎಂದರು.

ಇನ್ನು ಇದೇ ವೇಳೆ ಪ್ರಾಂಶುಪಾಲರಾದ ಡಾಕ್ಟರ್ ರಾಗಿಣಿ ಎನ್. ಪ್ರೊಫೆಸರ್ ಬಿ ಚಂದ್ರಶೇಖರ್. ಡಾ.ಗುರುಸ್ವಾಮಿ, ಶ್ರೀಕಂಠ ಮೂರ್ತಿ, ಶರತ್, ಮಹಾಲಕ್ಷ್ಮಿ, ಮಣಿಪ್ರಸಾದ್,
ಸೇರಿದಂತೆ ಕಾಲೇಜಿನ ಅಧ್ಯಾಪಕರು . ಅಧ್ಯಾಪಕೇತರ ವೃಂದ. ಎನ್ಎಸ್ಎಸ್ ಸ್ವಯಂಸೇವಕರು
ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು
ಭಾಗಿಯಾಗಿದ್ದರು.

 


Share