ಮೈಸೂರು, ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನಾಚರಣೆ

458
Share

ಗೋಲ್ಡನ್ ಸ್ಟಾರ್ ಗಣೇಶ್ ಆರ್ಮಿ ಮೈಸೂರು ವತಿಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮ ದಿನಾಚರಣೆಯನ್ನು
ಚಿಕ್ಕ ಗಡಿಯಾರ ಮುಂಭಾಗ
ರಸ್ತೆ ಬದಿ ವ್ಯಾಪಾರಸ್ಥರಿಗೆ ಛತ್ರಿ ಹಾಗೂ ಉಚಿತವಾಗಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಕೂರೂನಾಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಸೇವೆ ಮಾಡುವ ಮೂಲಕ ವಿಶೇಷವಾಗಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು
ನಂತರ ಮಾತನಾಡಿದ
ಹಿರಿಯ ಪತ್ರಕರ್ತರಾದ ರವೀಂದ್ರ ಜೋಶಿ ಮೈಸೂರಿನಲ್ಲಿ ದಿನೇ ದಿನೇ ಕೂರೋನಾ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಈ ಮಹಾಮಾರಿ ಕೂರೂನಾ ಬಗ್ಗೆ ಹೆಚ್ಚು ಜಾಗೃತರಾಗಿ ಅದರಲ್ಲೂ ಈ ರಸ್ತೆ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ವ್ಯಾಪಾರ ಮಾಡಬೇಕು ನೂರಾರು ಜನ ಖರೀದಿಸಲು ಗ್ರಾಹಕರು ಬರುತ್ತಾರೆ ಅವರಲ್ಲಿ ಯಾರಿಗೆ ಈ ರೋಗದ ಲಕ್ಷಣಗಳು ಇರುವುದು ಎಂದು ಗೊತ್ತಾಗುವುದಿಲ್ಲ ಅದರಲ್ಲೂ ಮೈಸೂರಿನ ಹೃದಯ ಭಾಗದಲ್ಲಿ ಹೆಚ್ಚು ಜನ ವ್ಯಾಪಾರಕ್ಕೆ ಬರುತ್ತಾರೆ ವಿವಿಧೆಡೆ ಜಿಲ್ಲೆಯಿಂದಲೂ ಬರುತ್ತಾರೆ ಹಾಗಾಗಿ ಈ ಯುವಕರು ಗೋಲ್ಡನ್ ಸ್ಟಾರ್ ಗಣೇಶ್ ಜನ್ಮ ದಿನಾಚರಣೆಯನ್ನು ಯಾವುದೇ ತರಹದ ಆಡಂಬರ ಇಲ್ಲದೆ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಹಾಗೂ ರಸ್ತೆ ಬದಿ ವ್ಯಾಪಾರಿಗಳಿಗೆ ಛತ್ರಿ ನೀಡಿ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೆಯ ಈ ಸಂದರ್ಭದಲ್ಲಿ ಯಾವುದೇ ತರಹದ ಚಿತ್ರನಟರ ಅಭಿಮಾನಿಗಳು ದುಂದುವೆಚ್ಚ ಮಾಡಿ ಜನ್ಮ ದಿನಾಚರಣೆ ಆಚರಿಸುವ ಬದಲು ಸಮಾಜಕ್ಕೆ ಯಾವುದಾದರೂ ಸೇವಾ ಮನೋಭಾವ ಇಟ್ಟುಕೊಂಡು ಸೇವೆಯನ್ನೇ ಗುರಿ ಮಾಡಿಕೊಂಡು ಕೆಲಸ ಮಾಡಿದರೆ ನಿಜಕ್ಕೂ ಅದು ಆ ನಟರಿಗೂ ಮತ್ತು ಅವರ ಅಭಿಮಾನಿಗಳಿಗೂ ಕೀರ್ತಿ ತಂದುಕೊಡುತ್ತದೆ ಈ ಹಿಂದೆ ಲಾಕ್ ಡೋನ್ ಸಂದರ್ಭದಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹಾಗೂ ಅವರ ಧರ್ಮಪತ್ನಿ ಸಾವಿರಾರು ಬಡ ಜನರ ಕುಟುಂಬಕ್ಕೆ ನೆರವಾಗಿದ್ದಾರೆ,ಅವರು ಬರೀ ಚಿತ್ರ ನಟರಲ್ಲ ಸಮಾಜ ಸೇವೆಯಲ್ಲೂ ತಾವು ಮುಂದು ಎಂದು ತೋರಿಸಿಕೊಟ್ಟಿದ್ದಾರೆ
ಆನಂತರ ಚಲನಚಿತ್ರ ನಿರ್ಮಾಪಕರಾದ ಎಂಡಿ ಪಾರ್ಥಸಾರಥಿ ಮಾತನಾಡಿ ಚಲನಚಿತ್ರ ರಂಗದಲ್ಲಿ ಬಹಳ ಕಷ್ಟಪಟ್ಟು ಕಿರುತೆರೆಯಲ್ಲಿ ಪ್ರಥಮವಾಗಿ ಕಾಣಿಸಿಕೊಂಡಂತೆ ಗಣೇಶ್ ಅವರು ಒಟ್ಟು ಕನ್ನಡ ಚಿತ್ರಗಳಲ್ಲೂ ಮೂವತ್ತೈದು ಚಿತ್ರಗಳನ್ನು ನಟ್ಟಿಸಿ ಅದಲ್ಲಿ ಮುಂಗಾರು ಮಳೆ ಇಡೀ ರಾಜ್ಯದಲ್ಲೇ ತುಂಬಾ ಹೆಸರು
ಮಾಡಿದಂತಹ ಚಿತ್ರ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟು ಹಬ್ಬದಿಂದ ಇವತ್ತು ಸಾಮಾಜಿಕ ಕಾರ್ಯ ಮಾಡುವ ನಿಟ್ಟಿನಲ್ಲಿ ಒಂದು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು
ಮಳೆಗಾಲ ಸಂದರ್ಭದಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಛತ್ರಿ ನೀಡುವ ಮೂಲಕ ಅರ್ಥಪೂರ್ಣವಾಗಿ ಜನ್ಮ ದಿನಾಚರಣೆ ಆಚರಿಸಲಾಯಿತು
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ರವೀಂದ್ರ ಜೋಶಿ, ಚಲನಚಿತ್ರ ನಿರ್ಮಾಪಕರಾದ ಎಂ ಡಿ ಪಾರ್ಥಸಾರಥಿ,ಸಮಾಜ ಸೇವಕರಾದ ರಂಗನಾಥ, ಗೋಲ್ಡನ್ ಸ್ಟಾರ್ ಗಣೇಶ್ ಆರ್ಮಿ ಮೈಸೂರು ಬಳಗದ ಅಧ್ಯಕ್ಷರಾದ ಪ್ರಣವ್ ಸಿಂಹ ,ವಿನಯ್,ಚಿತ್ರ,ಸ್ವಾಮಿ,
ರವೀಶ್,ಗಿರೀಶ್,ಇನ್ನೂ
ಮುಂತಾದರು ಹಾಜರಿದ್ದರು


Share