ಮೈಸೂರು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ: ಕಾಯುವ ಯೋಧರೇ ನಿಮಗೆ ನಮ್ಮ ಸಲಾಂ

Share

ಆಚರಣೆ ಕಾಯುವ ಯೋಧರೇ ನಿಮಗೆ ನಮ್ಮ ಸಲಾಂ.

ಕಾರ್ಗಿಲ್ ವಿಜಯೋತ್ಸವ ಆಚರಣೆ

ಮೈಸೂರು ನಗರ ಮತ್ತು ಗ್ರಾಮಂತರ ಕಾಂಗ್ರೆಸ್ ವತಿಯಿಂದ ಡಾ. ಬಿ.ಜೆ.ವಿಜಯಕುಮಾರ್ ನೇತೃತ್ವದಲ್ಲಿ 21ನೇ ಕಾರ್ಗಿಲ್ ವಿಜಯ ದಿವಸವನ್ನು ಮೈಸೂರಿನ ಹೃದಯ ಭಾಗವಾದ ಮಹಾತ್ಮ ಗಾಂಧಿ ಚೌಕದಲ್ಲಿ ಆಚರಿಸಲಾಯಿತು. ಇದೆ ಸಂದರ್ಭದಲ್ಲಿ ಕಾರ್ಗಿಲ್ ಕದನದಲ್ಲಿ ಮಡಿದ ವೀರ ಯೋಧರಿಗೆ ಮೌನಚರಣೆ ಮಾಡುವ ಮುಖಾಂತರ ಗೌರವ ಸಲ್ಲಿಸಿ ವಂದೇ ಮಾತರಂ ಗೀತೆಯನ್ನು ಹಾಡಿ ವೀರ ಸ್ವರ್ಗವನ್ನು ಸೇರಿದ ವೀರ ಸೇನಾನಿಗಳಿಗೆ ನಮನ ಸಲ್ಲಿಸಿ, ಒಂದು ನಿಮಿಷಗಳ ಕಾಲ ನ್ಯಾಷನಲ್ ಸೆಲ್ಯೂಟ್ ಮಾಡುವ ಮೂಲಕ ಗೌರವ ಸಮರ್ಪಣೆ ಮತ್ತು ವಿಜಯೋತ್ಸವವನ್ನು ಆಚರಿಸಲಾಯಿತು . ಇದೆ ಡಾ. bjv ಮಾತನಾಡಿ ಚೀನಾ ಮತ್ತು ಭಾರತ ದ ಗಡಿಯಲ್ಲಿ ಶಾಂತಿ ನೆಲೆಸಬೇಕು ಮತ್ತು ದೇಶ ಹಾಗೂ ಪ್ರಪಂಚ ಶಾಂತಿಯತ್ತ ಸಾಗಲಿ ಎಂದು ಹೇಳಿ. ಭಾರತ ಬಹುರಾಷ್ಟ್ರೀಯ ಪಕ್ಷ ಹಾಗೂ ರಾಜಕೀಯ ಪಕ್ಷಗಳು ಕೂಡ ಭಾರತದ ಸೇನೆಯನ್ನು ತಮ್ಮ ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು ಎಂದು ಸಲಹೆಯನ್ನು ನೀಡಿದರು . ದೇಶದ ಏಕತೆ ಮತ್ತು ಭಾತೃತ್ವ ವಿಚಾರದಲ್ಲಿ ದೇಶನೇ ಮೊದಲು ವಿನ ರಾಜಕಾರಣವಲ್ಲ. ಗಡಿಭಾಗದ ಯೋಧರಿಗೆ ನೈತಿಕ ಸ್ಥೈರ್ಯವನ್ನು ತುಂಬುವ ಹೊಣೆಗಾರಿಕೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಭಾರತ ವಿಶ್ವದಲ್ಲಿ ಅತಿ ಶಾಂತಿ ಬಯಸುವ ಬಹುದೊಡ್ಡ ಪ್ರಜಾತಂತ್ರ ರಾಷ್ಟ್ರ, ಆದರೆ ನೆರೆಹೊರೆಯ ರಾಷ್ಟ್ರಗಳು ನಮ್ಮ ಐಕ್ಯತೆಗೆ ಪ್ರತಿಬಾರಿ ಬೆಂಕಿ ಹಚ್ಚುವ ಕಾಯಕ ಮಾಡುತ್ತಿದ್ದಾರೆ. ವಿಶ್ವದಲ್ಲಿ ಭಯೋತ್ಪಾದಕರ ಶಕ್ತಿ ದ್ವಿಗುಣವಾಗುತಿದೆ , ಇದನ್ನ ಒಟ್ಟಾರೆಯಾಗಿ ಇಡೀ ವಿಶ್ವ ಸದೆಬಡೆಯುವ ಅನಿವಾರ್ಯತೆ ವಿಶ್ವಸಂಸ್ಥೆಯ ಮುಂದಿದೆ.
ಈ ಸಂದರ್ಭದಲ್ಲಿ ಪ್ರಮುಖ ಮುಖಂಡರುಗಳಾದ ಬ್ಯಾಸ್ಕೆರ್ .ಎಲ್.ಗೌಡ ( ಪ್ರಧಾನ ಕಾರ್ಯದರ್ಶಿ ) ಡೈರಿ ವೆಂಕಟೇಶ್. ಬಸವರಾಜ್ ನಾಯಕ್, (ಕಾರ್ಯದರ್ಶಿ )ಲೋಕನಾಥ್ ಗೌಡ (ಕಾರ್ಯದಶಿ ) ಹಾಗೂ ಗ್ರಾಮಾಂತರ ಉಪಾಧ್ಯಕ್ಷ .ಆರ್ .ಪ್ರಕಾಶ ಕುಮಾರ್ ,ಎಡತಲೆ ಮಂಜುನಾಥ್ , ಶಿವ ಪ್ರಸಾದ್ , ಡೊನಾಲ್ಡ್, ಸುನಿಲ್, ಸುನಿಲ್ ಸ್ವಾಮಿ, ಸಂತೋಷ್,, ಪ್ರೇಮ್, ಪ್ರಭು, ಅರಾಫತ್. ವೇಣು, ಉತ್ತನಹಳ್ಳಿ ಶಿವಣ್ಣ ,ಮಹೇಶ್ , ಸುನಿಲ್ ಸ್ವಾಮಿ , ಪ್ರವೀಣ್ ತೇಜ , ಹೇಮಂತ್ ಹಾಜರಿದ್ದರು .


Share