ಮೈಸೂರು: ಗ್ರಾಮಾಂತರ ಭಾಗಗಳಲ್ಲಿ ಲಾಕ್ಡೌನ್ ಗೆ ಆಗ್ರಹ

323
Share

ಮೈಸೂರು ಜಿಲ್ಲೆಯಲ್ಲಿಯೂ ಕೊರೋನಾ ಪಿಡುಗು ಬಾಹುಗಳನ್ನು ಚಾಚುತ್ತಿದ್ದು , ಇಂದಿನವರೆಗೆ ಒಟ್ಟು 1091 ಪ್ರಕರಣಗಳು ವರದಿಯಾಗಿದ್ದು 41 ಕೋವಿಡ್ ಸಂಬಂಧಿತ ಸಾವುಗಳಾಗಿರುತ್ತವೆ . ಕಳೆದ ಒಂದು ವಾರದಲ್ಲಿ ಅಂದರೆ ದಿನಾಂಕ : 08-07-2020 ರಿಂದ 14-07-2020 ರ ಅವದಿಯಲ್ಲಿ ಒಟ್ಟು 563 ಪ್ರಕರಣಗಳು ವರದಿಯಾಗಿದ್ದು , 29 ಕೋವಿಡ್ -19 ಸಂಬಂಧಿತ ಸಾವುಗಳಾಗಿರುತ್ತವೆ . ಈ ಅಂಕಿ ಅಂಶಗಳು ಕೋವಿಡೆ 19 ಪ್ರಕರಣಗಳು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವುದರ ಸೂಚನೆಯಾಗಿರುತ್ತದೆ . ಮೈಸೂರು ನಗರದ ಕೆಲವೊಂದು ಭಾಗಗಳಲ್ಲಿ ಸೋಕಿತರ ಸಂಖ್ಯೆ ಮತ್ತು ಸಾವಿನ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು , ಆ ಭಾಗಗಳ ಜನರು ಗ್ರಾಮಾಂತರ ಪ್ರದೇಶಗಳಿಗೂ ಸಂಚರಿಸುವುದರಿಂದ ಸೋಂಕು ಗ್ರಾಮೀಣ ಭಾಗಗಳಿಗೂ ಹೆಚ್ಚಾಗಿ ಹರಡುವ ಸಾಧ್ಯತೆಯಿರುತ್ತದೆ . ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈಗಾಗಲೆ ಲಾಕ್ಡೌನ್ ಘೋಷಣೆ ಮಾಡಲಾಗಿರುತ್ತದೆ . ಈ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣದ ದೃಷ್ಟಿಯಿಂದ ಮೈಸೂರು ನಗರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಭಾಗಗಳಲ್ಲಿ ಹೆಚ್ಚಿನ ದಿನಗಳ ಕಾಲ ಹಾಗೂ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಕೆಲದಿನಗಳ ಕಾಲ ಲಾಕ್‌ಡೌನ್ ಮಾಡಬೇಕಾಗಿ ಎಂದು ಶಾಸಕರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ


Share