ಮೈಸೂರು-ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್‌ ಪ್ರೆಸ್ ವಾರದ ವಿಶೇಷ ರೈಲು

14
Share

 

ನೈಋತ್ಯ ರೈಲ್ವೆ
ಮೈಸೂರು ವಿಭಾಗ

: ಚೆನ್ನೈ-ಮೈಸೂರು-ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್‌ ಪ್ರೆಸ್ ವಾರದ ವಿಶೇಷ ರೈಲಿನ ಸಂಚಾರ

ಮೈಸೂರು-ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು 29ನೇ ನವೆಂಬರ್ 2023 ರಿಂದ 27ನೇ ಡಿಸೆಂಬರ್ 2023 ರವರೆಗೆ (5 ಸಂಚಾರ ಸೇವೆಗಳು) ಪ್ರತಿ ಬುಧವಾರದಂದು ಚೆನ್ನೈ-ಮೈಸೂರು-ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್‌ ಪ್ರೆಸ್ ವಿಶೇಷ ರೈಲನ್ನು ಈ ಕೆಳಗೆ ವಿವರಿಸಿದಂತೆ ಸಂಚರಿಸಲು ನಿರ್ಧರಿಸಿದೆ.

1. ರೈಲು ನಂ.06037 ಚೆನ್ನೈನಿಂದ ಮೈಸೂರಿಗೆ – 05:50 ಗಂಟೆಗೆ ಚೆನ್ನೈನಿಂದ ಹೊರಟು 12:20 ಗಂಟೆಗೆ ಮೈಸೂರು ತಲುಪುತ್ತದೆ, ಮಾರ್ಗದಲ್ಲಿ ರೈಲು ಕಾಟ್ಪಾಡಿ (ಆಗಮನ 07:13ಗಂಟೆ ಮತ್ತು ನಿರ್ಗಮನ 07:15ಗಂಟೆ) ಮತ್ತು ಕೆಎಸ್ಆರ್ ಬೆಂಗಳೂರು (ಆಗಮನ 10:10ಗಂಟೆ ಮತ್ತು ನಿರ್ಗಮನ 10:15ಗಂಟೆ) ನಿಲ್ದಾಣಗಳಲ್ಲಿ ವಾಣಿಜ್ಯ ನಿಲುಗಡೆಗಳನ್ನು ಹೊಂದಿರುತ್ತದೆ

2. ರೈಲು ಸಂಖ್ಯೆ.06038 ಮೈಸೂರಿನಿಂದ ಚೆನ್ನೈಗೆ – 13:05 ಗಂಟೆಗೆ ಮೈಸೂರಿನಿಂದ ನಿರ್ಗಮಿಸಿ 19:20 ಗಂಟೆಗೆ ಚೆನ್ನೈ ತಲುಪುತ್ತದೆ, ಮಾರ್ಗದಲ್ಲಿ ರೈಲು ಕೆಎಸ್ಆರ್ ಬೆಂಗಳೂರು (14:50 ಗಂಟೆಗೆ ಆಗಮನ ಮತ್ತು 14:55 ಗಂಟೆಗೆ ನಿರ್ಗಮನ) ಮತ್ತು ಕಾಟ್ಪಾಡಿ (17:33ಗಂಟೆಗೆ ಆಗಮನ ಮತ್ತು 17:35ಗಂಟೆಗೆ ನಿರ್ಗಮನ) ನಿಲ್ದಾಣಗಳಲ್ಲಿ ವಾಣಿಜ್ಯ ನಿಲುಗಡೆಗಳನ್ನು ಹೊಂದಿರುತ್ತದೆ

ರೈಲು ಎಂಟು ಬೋಗಿಗಳ ಸಂಯೋಜನೆಯನ್ನು ಹೊಂದಿರುತ್ತದೆ. ಪ್ರಯಾಣಿಕರು ಆರಾಮದಾಯಕ ಪ್ರಯಾಣಕ್ಕಾಗಿ ಈ ವಂದೇ ಭಾರತ್ ಎಕ್ಸ್‌ ಪ್ರೆಸ್ ವಾರದ ವಿಶೇಷ ಸೇವೆಗಳನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ.

 


Share