ಮೈಸೂರು ಜನತೆಗೆ ಜಿಲ್ಲಾಧಿಕಾರಿ ಸೂಚನೆ.

885
Share

ಮೈಸೂರು ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳ ಸೂಚನೆ ಮೈಸೂರು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಈ ರೀತಿ ಸೂಚಿಸಿದ್ದಾರೆ -ಮೈಸೂರು ಜಿಲ್ಲೆಯಾದ್ಯಂತ ಕೊರೊನಾ ವೈರಾಣು ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಗಮನಕ್ಕೆ ಈ ಕೆಳಕಂಡ ಅಂಶಗಳನ್ನು ತರುತ್ತಾ ಅವರ ಸಹಕಾರವನ್ನು ಕೋರಲಾಗಿದೆ . 1. ಎಲ್ಲಾ ಸಾರ್ವಜನಿಕ ಮತ್ತು ಸರ್ಕಾರಿ ಕಛೇರಿಗಳಿಗೆ ಅತಿ ಅವಶ್ಯವಿರುವ ಹಾಗೂ ಅತಿ ತುರ್ತು ಸಂದರ್ಭಗಳಲ್ಲಿ ಮಾತ್ರ ಭೇಟಿ ನೀಡಲು ತಿಳಿಸಲಾಗಿದೆ . 2. ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸುಗಳನ್ನು ಧರಿಸಬೇಕಾಗಿರುತ್ತದೆ . ಮುಖಗವಸುಗಳನ್ನು ಧರಿಸದ ಸಾರ್ವಜನಿಕರಿಗೆ ಕಛೇರಿಗಳಿಗೆ ಪ್ರವೇಶ ಅವಕಾಶವಿರುವುದಿಲ್ಲ . ಕಛೇರಿ ಪ್ರವೇಶಿಸುವ ಮೊದಲು ಸಾರ್ವಜನಿಕರು ಕಡ್ಡಾಯವಾಗಿ ಅವರ ಕೈಗಳನ್ನು ಸೋಪು ಅಥವಾ ಸ್ಯಾನಿಟೈಜರ್ ನ್ನು ಬಳಸಿ ಶುಚಿಗೊಳಿಸಿಕೊಳ್ಳುವುದು . 3 , ಸಾರ್ವಜನಿಕರ ಕುಟುಂಬ ಮಾತ್ರವಲ್ಲದ ಕೊರೊನಾ ವೈರಾಣು ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿ / ನೌಕರರು ಹಾಗೂ ಅವರ ಕುಟುಂಬದವರ ಆರೋಗ್ಯದ ಸುರಕ್ಷತೆಯ ಹಿತದೃಷ್ಟಿ ಮತ್ತು ಕಾಳಜಿಯಿಂದ ಸಾರ್ವಜನಿಕರು ಸಹಕಾರ ನೀಡಲು ಕೋರಲಾಗಿದೆ.


Share