ಮೈಸೂರು, ಕನಿಷ್ಠ ಕೂಲಿ ತುಟಿ ಭತ್ಯೆ ಪಾವತಿ ಮುಂದೂಡುವ ರಾಜ್ಯಸರ್ಕಾರದ ಕ್ರಮವನ್ನು ಖಂಡಿಸಿ AITUC ಕಾರ್ಯಕರ್ತರು ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಕಾರ್ಮಿಕರ ವಿರೋಧಿ ನೀತಿಯನ್ನು ಎಐಟಿಯುಸಿ ಬಲವಾಗಿ ಖಂಡಿಸುತ್ತದೆ ಹಾಗೂ ಮಾಲೀಕರ ಒತ್ತಡಕ್ಕೆ ರಾಜ್ಯಸರ್ಕಾರ ಮಣಿದಿರುವುದು ವಿರೋಧಿಸುತ್ತದೆ ಎಂದು ಜಿಲ್ಲಾಧಿಕಾರಿಗೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಲಾಗಿದೆ.