ಮೈಸೂರು ಜಿಲ್ಲಾ ನೃತ್ಯ ನಿರ್ದೇಶಕರು ಹಾಗೂ ನೃತ್ಯ ನೃತ್ಯ ಕಲಾವಿದರು ಸಂಘ ಸ್ಥಾಪನೆ

Share

 

ಮೈಸೂರು

ಕೋಮಿಡ್ -19 , ಕೊರೋನಾ ಎಂಬ ರೋಗದಿಂದ ತುಂಬಾ ಕಷ್ಟದ ಜೀವನವನ್ನು ನಡೆಸುವುದು ಕಂಡು ಹಾಗೂ ಅನೇಕ ರೀತಿಯ ಸಂಘಗಳಿದ್ದು ನೃತ್ಯ ಕಲಾವಿದರ ಸಂಘ ಇರಲಿಲ್ಲ . ಯುವ ನೃತ್ಯ ಕಲಾವಿದರನ್ನು ಪ್ರೋತ್ಸಾಹಿಸಲು , ನೃತ್ಯ ಕಲಾವಿದರಿಗೆ ವಿವಿಧ ರೀತಿಯಲ್ಲಿ ನೆರವಾಗಲು , ಇನ್ನು ಅನೇಕ ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಒಂದು ವೇದಿಕೆ ಬೇಕು ಎಂದು ಮೈಸೂರಿನ ಎಲ್ಲಾ ನೃತ್ಯ ಕಲಾವಿದರು ಸೇರಿ ಹಲವಾರು ಸಭೆಗಳನು ನಡೆಸಿ , ಚರ್ಚಿಸಿ , ಒಗ್ಗೂಡಿ ಸರ್ವಾನುಮತದಿಂದ ಒಪ್ಪಿ ಮೈಸೂರು ನೃತ್ಯ ನಿರ್ದೇಶಕರು ಹಾಗೂ ನೃತ್ಯ ಕಲಾವಿದರ ಸಂಘ ( ರಿ ) ಎಂಬ ಹೆಸರಿನಲ್ಲಿ ನೋಂದಾಯಿಸಿ ಸ್ಥಾಪನೆಗೆ ಕಾರಣವಾಯಿತು . ಎಂದು ಸಂಘದ ಶಿಕ್ಷಕರಾದ ರಾಜು ಅವರು ತಿಳಿಸಿದರು.
ಈ ಸಂಸ್ಥೆಯ ಹೆಸರಿನಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ : 06 ರ0 ದು ಭಾನುವಾರ ಸಂಜೆ 5.30 ಕ್ಕೆ ಹೋಟೆಲ್ ಕಲ್ಯಾಣಿಯಲ್ಲಿ ( ಹೆಬ್ಬಾಳ ರಿಂಗ್ ರೋಡ್ ಮೈಸೂರು ) ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ . ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜನಪ್ರಿಯ ಮಾಜಿ ಶಾಸಕರಾದತಂಹ ಎಂ.ಕೆ.ಸೋಮಶೇಖರ್‌ರವರು , ಅಧ್ಯಕ್ಷತೆಯನ್ನು ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಶ್ರೀ ಮಹೇಂದ್ರರವರು , ವಿಶೇಷ ಆಹ್ವಾನಿತರಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ ಹೆಚ್.ಎ.ರಾಜೀವ್‌ರವರು , ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕರಾದ ಶ್ರೀ ಫೈವ್ ಸ್ಟಾರ್ ಗಣೇಶ್ , ಶ್ರೀ ವಿಜಯನಗರ ಮಂಜು , ಶ್ರೀ ಭಜರಂಗಿ ಮೋಹನ್ , ಯಶ್‌ಟೆಲ್ ಟಿ.ವಿ ಪ್ರಧಾನ ಸಂಪಾದಕರಾದ ಶ್ರೀಮತಿ ಬಿ.ವೈ ಸಾಹಿತ್ಯ , ಸಿರಿ ಟಿವಿ ಪ್ರಧಾನ ಸಂಪಾದಕರು ಶ್ರೀ ನಂಜುಂಡಸ್ವಾಮಿ ಭಾಗವಹಿಸಲಿದ್ದಾರೆ .


Share