ಮೈಸೂರು ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕಳೆದ ಆರು ತಿಂಗಳಲ್ಲಿ ವಿವಿಧ 63 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಇಲಾಖೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಪ್ರಕರಣಗಳ ವಿವರ.
ಮೈಸೂರು ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 2023 ನೇ ಸಾಲಿನ ಜನವರಿ ಮಾಹೆಯಿಂದ ಜುಲೈ ಮಾಹೆಯವರೆಗೆ ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ಈ ಕೆಳಕಂಡ ವಸ್ತು, ವಾಹನ ಮತ್ತು ಸಾಮಾಗ್ರಿಗಳನ್ನು ದಿನಾಂಕ:11.08.2023 ರಂದು ಮೈಸೂರು ಜಿಲ್ಲಾ ಡಿ.ಎ.ಆರ್ ಕೇಂದ್ರಸ್ಥಾನದಲ್ಲಿ ಕಳವು ಮಾಲು ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮವನ್ನು ಆಯೋಜಿಸಿ, ಸಂಬಂಧಪಟ್ಟ ವಾರಸುದಾರರುಗಳಿಗೆ ಈ ಕೆಳಕಂಡ ಪ್ರಕರಣಗಳಲ್ಲಿ ಕಳೆದುಕೊಂಡಿದ್ದ ವಸ್ತುಗಳನ್ನು ಹಿಂತಿರುಗಿಸಲಾಗಿರುತ್ತದೆ. ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಲಾಭಕ್ಕಾಗಿ ಕೊಲೆ ಪ್ರಕರಣ-01
02) ದರೋಡೆ ಪ್ರಕರಣ-02
03)
ಸುಲಿಗೆ ಪ್ರಕರಣ-04
04) ಸರಗಳ್ಳತನ-02
05) ಕಳ್ಳತನ ಪ್ರಕಣಗಳು-38
06) ವಾಹನ ಕಳ್ಳತನ-15
07)
ವಂಚನೆ ಪ್ರಕರಣ-01 ಮೇಲ್ಕಂಡ ಒಟ್ಟು 63 ಪ್ರಕರಣಗಳಲ್ಲಿ 1,34,66,697/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ವಶಪಡಿಸಿಕೊಂಡಿರುವ ಸ್ವತ್ತಿನ ವಿವರ
1) ಚಿನ್ನ ಮತ್ತು ಬೆಳ್ಳಿ :- 1 ಕೆ.ಜಿ 770 ಗ್ರಾಂ ಚಿನ್ನ ಮತ್ತು 920 ಗ್ರಾಂ ಬೆಳ್ಳಿ ಮೌಲ್ಯ 81,02,950/- ರೂ.
2) ನಗದು ಹಣ :- 12,62,147/- ರೂ 3) ವಾಹನಗಳು :- 22 ವಾಹನಗಳು, ಮೌಲ್ಯ 36,23,000/- ರೂ
4) ಹಾರ್ಡ್‌ವೇರ್ ಮತ್ತು ಎಲೆಕ್ಟಿಕ್ ವಸ್ತುಗಳು :- 80,800/- ರೂ ಮೌಲ್ಯದ ವಸ್ತುಗಳು
5) ಜಾನುವಾರು ಕಳ್ಳತನ :- 07 ಹಸು, 13 ಕುರಿಗಳು, 43 ಪಾರಿವಾಳ ಮೌಲ್ಯ 3,06000/- ರೂ
6) ದೇವರ ವಿಗ್ರಹಗಳು :- ಮೌಲ್ಯ 1,00,000/- ರೂ 7) ಇತರೇ ವಸ್ತುಗಳು :- 6,92,000/- ಮೌಲ್ಯದ ರೈತ ಉಪಯೋಗಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತೆ.
8) ಮೊಬೈಲ್ ಫೋನ್‌ಗಳು :- CEIR (Central Equipment Identity Register) Portal ಮುಖಾಂತರ ವಿವಿಧ ಕಂಪನಿಯ ಒಟ್ಟು 192 ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದ್ದು, ಇವುಗಳ ಮೌಲ್ಯ 25,00,000/- ರೂಗಳಾಗಿರುತ್ತದೆ.
ಮೇಲ್ಕಂಡ ವಸ್ತು, ವಾಹನ ಮತ್ತು ಸಾಮಾಗ್ರಿಗಳನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ಐಪಿಎಸ್ ರವರು ಸಂಬಂಧಪಟ್ಟ ವಾರಸುದಾರರುಗಳಿಗೆ ಹಿಂತಿರುಗಿಸಿದ್ದು, ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಮೈಸೂರು ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ಕಾರ್ಯವನ್ನು ಶ್ಲಾಘಿಸಿರುತ್ತಾರೆ.