ಮೈಸೂರು- ಜಿ . ಪ. ಮುಂದೆ ಬಿಜೆಪಿ ಪ್ರತಿಭಟನೆ

160
Share

 

ಮೈಸೂರು-ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿದ್ದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಂಗ್ರೆಸ್‌ನ ದಲಿತ ವಿರೋಧಿ ಎಂದು ಮೈಸೂರು ನಗರ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಈ 9 ತಿಂಗಳಿನಲ್ಲಿ, ಸರ್ಕಾರದಿಂದ ಅತಿ ಹೆಚ್ಚು ಕಿರುಕುಳ ಅನುಭವಿಸಿದವರು ನಾಡಿನ ದಲಿತ ಸಮುದಾಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಇಂದು ಮೈಸೂರು ನಗರ ಅಧ್ಯಕ್ಷ ಎಲ್ ನಾಗೇಂದ್ರ,ಹಾಗೂ ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್ ಆರ್ ಮಹದೇವಸ್ವಾಮಿರವರ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು,, ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ,ಹರ್ಷವರ್ಧನ್, ಎಂ ಶಿವಣ್ಣ, ಎನ್ ವಿ ಪಣೀಶ್, ಮಹಾದೇವಯ್ಯ, ಸಂದೇಶ್ ಸ್ವಾಮಿ,ಮಂಗಳಶೇಖರ್,ಬಿ ಪಿ ಮಂಜುನಾಥ್,ಸುರೇಶ್ ಬಾಬು,ಕೇಬಲ್ ಮಹೇಶ್, ಬಿ ಎಂ ರಘು, ಗಿರಿಧರ್, ಕಿರಣ್ ಜಯರಾಮ್, ಮಹೇಶ್ ಮಟವಡಿ, ರಮೇಶ್,ನಿಂಗರಾಜ್ ಮಲ್ಲಡಿ,ಕಿರಣ್ ಗೌಡ,ದೇವರಾಜ್, ಜೋಗಿ ಮಂಜು, ಸೇರಿದಂತೆ ನೂರಾರು ಕಾರ್ಯಕರ್ತರು ಪದಾಧಿಕಾರಿಗಳು,, ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ನಂತರ ಡಿ ಸಿ ಕಚೇರಿಗೆ ತೆರಳಿ ಪ್ರತಿಭಟನೆ ನಿರ್ಣಯ ಪತ್ರ ಕೊಡಲಾಯಿತು.


Share