ಮೈಸೂರು ನಗರದಲ್ಲಿ ಇರುವ ಚಿಲ್ಲರೆ /ಸಗಟು ಔಷಧಿ ವ್ಯಾಪಾರಸ್ಥರು ಡಯಾಗ್ನಸ್ಟಿಕ್ ಕೀಟಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬಾರದು ಎಂದು ಉಪ ಔಷಧ ನಿಯಂತ್ರಕರು ಕಟ್ಟುನಿಟ್ಟಾದ ಆದೇಶ ಹೊರಡಿಸಿದ್ದಾರೆ. ಔಷಧಿ ವ್ಯಾಪಾರಸ್ಥರು ಸಾರ್ವಜನಿಕರಿಗೆ ಕಿಟ್ ಮಾರಾಟ ವಿಷಯದಲ್ಲಿ ತಪ್ಪು ದಾರಿ ಹಿಡಿದಿದ್ದಾರೆ ದ್ದಾರೆ ಎಂದು ಹೇಳಲಾಗಿದೆ. ಉಪ ನಿಯಂತ್ರಕರು ಹೊರಡಿಸಿರುವ ಆದೇಶ ವಿವರ ಕೆಳಕಂಡಂತಿದೆಸುತ್ತೋಲೆ ವಿಷಯ : – Covid – 19 ರೋಗ ಪರೀಕ್ಷಿಸುವ ಕಿಟ್ ( ಡಯಾಗ್ನಾಸ್ಟಿಕ್ ) ( Rapid Antibody Test Kit ) ಮಾರಾಟದ ಕುರಿತು ಮೈಸೂರಿನಲ್ಲಿ ಕೋವಿಡ್ -19 ರೋಗವು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಯಂ ಪರೀಕ್ಷಿಸಿಕೊಳ್ಳುವ ಡಯಾಗ್ನಾಸ್ಟಿಕ್ 8 £ J * ( Rapid Antibody Test Kit ) ಗಳನ್ನು ಉಪಯೋಗಿಸುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿರುತ್ತದೆ . ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ರೋಗ ಹತೋಟಿಗೆ ತರುವಲ್ಲಿ ಅಡಚಣೆಯಾಗಿ , ಸಮಾಜಕ್ಕೆ ಕಂಟಕಪ್ರಾಯವಾಗುತ್ತದೆ . ಆದುದರಿಂದ , ಯಾವುದೇ ಚಿಲ್ಲರೆ / ಸಗಟು ಔಷಧ ವ್ಯಾಪಾರಸ್ಥರು ಸದರಿ ಡಯಾಗ್ನಾಸ್ಟಿಕ್ ಕಿಟ್ ( Rapid Antibody Test Kit ) ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬಾರದೆಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ . ಡಯಾಗ್ನಾಸ್ಟಿಕ್ ಕಿಟ್‌ಗಳ ( Rapid Antibody Test Kit ) ಮಾರಾಟ ಕಂಡುಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು . ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ಡಯಾಗ್ನಾಸ್ಟಿಕ್ ಕಿಟ್‌ಗಳನ್ನು ಮಾರಾಟ ಮಾಡದೇ ಸ್ವಾಸ್ಥ್ಯ ಸಮಾಜಕ್ಕಾಗಿ ಕೈಜೋಡಿಸಬೇಕಾದುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ . Puro ಉಪ ಔಷಧ ನಿಯಂತ್ರಕರು ಪ್ರಾದೇಶಿಕ ಕಛೇರಿ , ಮೈಸೂರು .