ಮೈಸೂರು : ದತ್ತ ವೆಂಕಟ್ರಮಣ ಸ್ವಾಮಿ ದೇವಸ್ಥಾನ ನಾಳೆ ಬೆಳಗ್ಗೆ 7:00 ಗಂಟೆಗೆ ಓಪನ್

751
Share

ಮೈಸೂರು .ಸೋಮವಾರ 8.6.2020ರಿಂದ ಅವಧೂತ ದತ್ತ ಪೀಠದ ದತ್ತಾತ್ರೇಯ ದೇವಾಲಯ ಹಾಗು ವೆಂಕಟೇಶ್ವರ ದೇವಾಲಯ ಈ ಕೆಳಕಂಡ ಸೂಚನೆಗೊಳಪಟ್ಟು ತೆರೆಯಲಿದೆ. ಸಾರ್ವಜನಿಕರಿಗೆ quraintane ಮುದ್ರೆ ಇದ್ದರೆ ಅಂತಹ ವ್ಯಕ್ತಿಗಳಿಗೆ ದೇವಾಲಯದ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ
ಮುಖ್ಯ ಸೂಚನೆಗಳು.

ದೇವಾಲಯಗಳು ತೆರೆದಿರುವ ಸಮಯ ಬೆಳಿಗ್ಗೆ 7 ರಿಂದ 10 ರವರೆಗೆ ಸಂಜೆ 6 ರಿಂದ 7.30 ರವರೆಗೆ
65 ವರ್ಷ ಮೇಲ್ಪಟ್ಟವರು ,10 ವರ್ಷದ ಒಳಗಿನವರಿಗೆ ಪ್ರವೇಶವಿಲ್ಲ
ಕರೋನ ಸೋಂಕು ಲಕ್ಷಣವಿದ್ದಲ್ಲಿ ಒಳಗೆ ಬರಬೇಡಿ.
ದೇವಾಲಯ/ ಆಶ್ರಮ ಸಿಬ್ಬಂದಿಯೊಡನೆ ಸಹಕರಿಸಿ
ನಿಮ್ಮ ಪಾದರಕ್ಷೆಗಳನ್ನು ನಿಮ್ಮ ವಾಹನಗಳಲ್ಲೇ ಬಿಡಿ.
ಕಡ್ಡಾಯವಾಗಿ ಮಾಸ್ಕ್ (mask) ದೇವಾಲಯದ ಆವರಣದಲ್ಲಿದ್ದಷ್ಟು ಕಾಲ ಧರಸಿರಬೇಕು.
ದೇವಾಲಯ ಪ್ರವೇಶಿಸುವ ಮೊದಲು ಕೈ ಕಾಲು ತೊಳೆದುಕೊಳ್ಳಿ
ತೀರ್ಥ, ಪ್ರಸಾದ ಕೊಡುವುದಿಲ್ಲ.
ದೇವರ ದರ್ಶನವಾದ ಕೂಡಲೇ ಹೊರಡಬೇಕು. ಕುಳಿತು ಧ್ಯಾನ ಮಾಡಲು ಅವಕಾಶವಿಲ್ಲ
ಶುಕವನ, ಬೋನ್ಸಾಯ್ ವನ, ವಿಶ್ವಂ ವಸ್ತು ಸಂಗ್ರಹಾಲಯ ತೆರೆಯುವುದಿಲ್ಲ
ಪೂಜ್ಯ ಶ್ರೀ ಸ್ವಾಮೀಜಿಯವರು ಭಾನುವಾರಗಳು ಬೆಳಿಗ್ಗೆ 9 ಘಂಟೆಗೆ ದರ್ಶನ ನೀಡುತ್ತಾರೆ.
ಭಕ್ತರು ಆಶ್ರಮದಲ್ಲಿ ರಾತ್ರಿ ತಂಗಲು ಅವಕಾಶವಿರುವುದಿಲ್ಲ


Share