ಮೈಸೂರು: ದಲಿತ ಸಂಘರ್ಷ ಸಮಿತಿ ಎಚ್ಚರಿಕೆ

Share

ಮೈಸೂರು ,ಕರ್ನಾಟಕ ರಾಜ್ಯ ಸರ್ಕಾರದ ವಿಧಾನಸಭೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ಮೂರ್ತಿಯವರನ್ನು ಸರ್ಕಾರವು ನ್ಯಾಯಾಲಯದ ಆದೇಶದಂತೆ ಸಂವಿಧಾನಬದ್ಧವಾಗಿ ಗಳಿಸಿಕೊಂಡಿರುವ ಕಾರ್ಯದರ್ಶಿ ಹುದ್ದೆಗೆ ಮರುನೇಮಕ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಮೈಸೂರು ಶಾಖೆ ಒತ್ತಾಯಿಸುವುದಾಗಿ ಕೋರನಹಳ್ಳಿ ಶಿವಣ್ಣ ತಿಳಿಸಿದ್ದಾರೆ. ಸರ್ಕಾರ ಮರುನೇಮಕ ಮಾಡದಿದ್ದರೆ ಸರಕಾರದ ವಿರೋಧ ನೀತಿಯನ್ನು ಖಂಡಿಸಿ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.


Share