ಮೈಸೂರು :ದಸರಾ ನಿಲ್ಲಬಾರದುಕಾಂಗ್ರೆಸ್ ಶಾಸಕ ರಿಜ್ವಾನ್ ಹರ್ಷದ್

Share

ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಹರ್ಷದ್

ಕೊರೋನ ನಿಯಂತ್ರಣ ವಿಚಾರದಲ್ಲಿ ಮೈಸೂರು ಅನಾಥವಾಗಿದೆ ಶಾಸಕ ರಿಜ್ವಾನ್ ತಿಳಿಸಿದರು.

ಕೊರೋನ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದೆಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸಾಮಾನ್ಯ ಕಾಯಿಲೆ ರೋಗಿಗಳು ಬೆಡ್‌ಗಳಿಗಾಗಿ ಪರದಾಡುತ್ತಿದ್ದಾರೆ,

ಮೈಸೂರಿನಲ್ಲಿ ಈವರೆಗೆ ಖಾಸಗಿ ಆಸ್ಪತ್ರೆಗಳ ಜೊತೆ ಮೀಟಿಂಗ್ ಮಾಡಿಲ್ಲಎಂದು ಆರೋಪಿಸಿದರು

ಕೊರೋನ ನಡುವೆಯೂ ಸರ್ಕಾರ ವರ್ಗಾವಣೆ ದಂಧೆಗಿಳಿದಿದೆ

ಕೊರೋನ ಹೆಚ್ಚುತ್ತಿರುವ ಬೆನ್ನಲ್ಲೇ ಮೈಸೂರು ಡಿಸಿಯನ್ನ ವರ್ಗಾವಣೆ ಮಾಡಲಾಗಿದೆ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೇವಲ ಪ್ರಚಾರಕ್ಕಾಗಿ ಮುಖಪುಟದ ಜಾಹಿರಾತುಗಳನ್ನ ನೀಡುತ್ತಿದೆ ಎಂದವರು

ಆದರೆ ಜಾಹಿರಾತಿನ ಉದ್ದೇಶ ಈವರೆಗೆ ಈಡೇರಿಲ್ಲ ಎಂದು ಹೇಳಿದರು

ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಅಧರ್ಮದ ಕೆಲಸ ಮಾಡ್ತಿದೆ

ಮೈಸೂರನ್ನ ಅನಾಥವಾಗಿ ಬಿಡದೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ದಸರಾವನ್ನ ಸರಳವಾಗಿ ಆಚರಿಸಬೇಕು

ಸಂಪೂರ್ಣವಾಗಿ ದಸರಾ ಆಚರಿಸದೆ ಇರಬಾರದು

ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ, ದಸರಾ ನಾಡ ಹಬ್ಬ ಎಂದ ಅವರು ರಾಜ್ಯದಲ್ಲಿ ಯಾವ ಸಾಂಸ್ಕೃತಿಕ ಕಾರ್ಯಕ್ರಮವೂ ನಿಲ್ಲಬಾರದು ಸಾಂಕೇತಿಕವಾಗಿ ನಡೆಯಬೇಕು ಎಂದರು.

ರಾಜಧಾನಿಯಲ್ಲಿ ಡ್ರಗ್ಸ್ ಮಾಫಿಯಾ ವಿಚಾರ ಬಗ್ಗೆ ಮಾತನಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು

ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಹರ್ಷದ್ ಹೇಳಿಕೆ

ಡ್ರಗ್ಸ್ ಮಾಫಿಯಾ ಒಂದು ದೊಡ್ಡ ಇಂಡಸ್ಟ್ರಿ ರೀತಿ ಬೃಹದಾಕಾರವಾಗಿ ಬೆಳೆದಿದೆ

ಈ ಸಂಬಂಧ ನಾನು ಬೆಂಗಳೂರು ಪೊಲೀಸ್ ಆಯುಕ್ತರನ್ನ ಭೇಟಿ ಮಾಡಿದ್ದೆ ಚರ್ಚಿಸಿರುವುದಾಗಿ ಇರುವುದಾಗಿ ಹೇಳಿದರು.

ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಿ ಅಂತ ವೈಯುಕ್ತಿಕವಾಗಿ ಮನವಿ ಮಾಡಿದ್ದೇನೆ ಎಂದರು

ಸಿನಿಮಾ ಇಂಡಸ್ಟ್ರಿಗೂ ಡ್ರಗ್ಸ್ ಮಾಫಿಯಾ ನಂಟು ವಿಚಾರ

ನನಗೆ ಸಿನಿಮಾ ರಂಗದ ನಂಟು‌ ಕಡಿಮೆ

ಆದರೆ ಸಿನಿಮಾ‌ ರಂಗ ಇರಲಿ, ವಿದ್ಯಾರ್ಥಿಗಳಾಗಿರಲಿ ಇದು ಮನುಷ್ಯತ್ವಕ್ಕೆ ಧಕ್ಕೆ ತರುವ ಕೆಲಸ

ಕೆಜೆ ಹಳ್ಳಿ ಗಲಭೆಕೋರರು ಗಾಂಜಾ ಸೇವನೆ ಆರೋಪ

ನಿಶ್ಚಿತವಾಗಿ ಕೆಲ ಯುವಕರು ಗಾಂಜಾ ಅಫೀಮಿಗೆ ಬಲಿಯಾಗಿದ್ದಾರೆ

ಡಿಜೆ ಹಳ್ಳಿ ವಿಚಾರದಲ್ಲಿ ಗಾಂಜಾ ಸೇವಿಸಿರಲಿ, ಬಿಡಲಿ ಆರೋಪಿಗಳಿಗೆ ಶಿಕ್ಷೆ ಯಾಗಬೇಕು

ಶಾಲಾ ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳನ್ನ ಡ್ರಗ್ಸ್‌ಗೆ ಅಡಿಟ್ ಮಾಡಿಸುವ ದೊಡ್ಡ ಮಾಫಿಯಾ ಇದೆ

ಪೊಲೀಸರು ಸೀರಿಯಸ್‌ ಆದ್ರೆ ಡ್ರಗ್ಸ್ ಮಾಫಿಯಾ ಕಡಿವಾಣ ಹಾಕಬಹುದು

ಪೊಲೀಸರು ಪ್ರಮಾಣ ಮಾಡಿ ಹೊರಟರೆ ನೂರಕ್ಕೆ ನೂರರಷ್ಟು ಕಡಿವಾಣ ಹಾಕಬಹುದು

ಪೊಲೀಸರಿಗೆ ಗೊತ್ತಿಲ್ಲದೆ ಯಾವ ದಂಧೆಯೂ ನಡೆಯಲ್ಲ

ಡ್ರಗ್ಸ್ ಮಾಫಿಯಾಗೆ ಪೊಲೀಸರೆ ಕಾರಣ ಎಂದು ಪರೋಕ್ಷ ಆರೋಪ

ಕಾಂಗ್ರೆಸ್ ಸತ್ಯಶೋಧನಾ ಸಮಿತಿಯಿಂದ ವರದಿ ಸಲ್ಲಿಕೆಗೆ ವಿಳಂಭ ಹಿನ್ನೆಲೆ

ವರದಿ ಸಲ್ಲಿಸಲು ಯಾವುದೇ ವಿಳಂಭ ಮಾಡಿಲ್ಲ

ನಾವು ಒಂದು ತಿಂಗಳೊಳಗೆ ವರದಿ ಪಡೆಯುತ್ತೇವೆ ಎಂದು ಹೇಳಿದ್ದೆವು

ಶೀಘ್ರದಲ್ಲೇ ಕೆಪಿಸಿಸಿಗೆ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಲಿದೆ ಎಂದರು


Share