ಮೈಸೂರು ನಗರದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Share

ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೋಧಿ ಕಾರ್ಮಿಕ ವಿರೋಧಿ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಕಪ್ಪು ಪಟ್ಟಿ ಧರಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದರು
ಕೇಂದ್ರ ಸರ್ಕಾರ ಲಾಕ್ ಡೋಲ್ ಬಿಡಿಸಿದಾಗ ನಿಂದಲೂ ಸಹಸ್ರಾರು ಜನ ವಲಸೆ ಕಾರ್ಮಿಕರು ಮತ್ತು ದಿನಗೂಲಿ ಕೆಲಸಗಾರರು ಹಿಂದೆಂದೂ ಇಲ್ಲದ ಸಂಕಷ್ಟಕ್ಕೊಳಗಾಗಿದ್ದು ಅವರು ಜೀವನಾಧಾರ ಕಳೆದುಕೊಂಡಿದ್ದಾರೆ ಹಸಿವಿನಿಂದ ಕಂಗಾಲಾಗಿರುವ ಅವರು ತಮ್ಮ ತವರೂರು ಗಳನ್ನು ತಲುಪಲು ಹೈರಾಣಾಗಿದ್ದಾರೆ ಅವರ ಕುಟುಂಬಗಳು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ ಇಷ್ಟಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೊಂದರೆಯಲ್ಲಿ ಸಿಕ್ಕಿರುವ ಕಾರ್ಮಿಕರನ್ನು ಕಡೆಗಣಿಸಿವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ


Share