ಮೈಸೂರು ನಗರದಲ್ಲಿ ವಿಶೇಷ ಮಕ್ಕಳಿಗೆ ಔಷಧಿ ವಿತರಣೆ

338
Share

ವಿಶೇಷ ಮಕ್ಕಳಿಗೆ ಔಷಧಿ ವಿತರಣೆ

ಮೈಸೂರು ಮಹಾನಗರ ಪಾಲಿಕೆಯಿಂದ ೧ ಲಕ್ಷ ರೂನ ಶ್ರವಣ ಯಂತ್ರ ಭಾರ್ಗವಿ ಎಂಬ ಹುಡುಗಿಗೆ ಇಂದು ನೀಡಲಾಯಿತು

ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಶಶಿ ಕುಮಾರ್ ರವರು ವಿದ್ಯಾರಣ್ಯಪುರಂ, ಚಾಮುಂಡಿಪುರಂ, ಕನಕಗಿರಿ, ಗುಂಡೂರಾವ್ ನಗರ, ಗೌರಿ ಶಂಕರ ನಗರ, ಅಗ್ರಹಾರ ಸೇರಿದಂತೆ ಹಲವಾರು ಪ್ರದೇಶದ 50 ವಿಶೇಷ ಮಕ್ಕಳಿಗೆ ಔಷಧಿಯನ್ನು ವಿತರಿಸಿದರು.

ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು

ಹೆಚ್ಚುವರಿ ಆಯುಕ್ತರಾದ ಶಶಿಕುಮಾರ್ ಅವರು ಮಾತನಾಡುತ್ತ ವಿಶೇಷ ಮಕ್ಕಳು, ದೇವರ ಮಕ್ಕಳು ಮೈಸೂರು ನಗರದಲ್ಲಿ ಎಷ್ಟು ವಿಶೇಷ ಚೇತನರಿದ್ದಾರೆ ಎಂದು ಕೆಲವೇ ದಿನಗಳಲ್ಲಿ ಸರ್ವೇ ಮಾಡಿಸಲಾಗುವುದು ನಂತರ ಅವರೆಲ್ಲರಿಗೂ ೫ % ಅನುದಾನದಲ್ಲಿ ಸ್ವ ಉದ್ಯೋಗ ಮಾಡಲು ಮೂರು ಚಕ್ರ ವಾಹನ, ಶ್ರವಣ ಯಂತ್ರ ಮುಂತಾದ ಪರಿಕರಗಳನ್ನು ನೀಡಲಾಗುವುದು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಸಿ ಸಂದೀಪ್, ಶಿವು, ತುಳಸಿ, ಮಮತಾ, ನೀಲಾ, ಅರ್ಪಿತಾ ಮುಂತಾದವರು ಇದ್ದರು


Share