ಬೇರು ಫೌಂಡೇಷನ್ ವತಿಯಿಂದ ವೈದ್ಯ ದಿನಾಚರಣೆ ಅಂಗವಾಗಿ ಒಂಟಿಕೊಪ್ಪಲ್ ವೃತ್ತದಲ್ಲಿರುವ ಡಿಆರ್ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು
ಅಭಿನಂದನೆ ಸ್ವೀಕರಿಸಿದ ವೈದ್ಯರಾದ ಡಾ ಕಿರಣ್ ಕುಮಾರ್ ,ಡಾ ದೀಪಕ್ , ಡಾ ರಾಮಕೃಷ್ಣ ,ಡಾ ಕಿರಣ್ ಮೈ ಮಿಶ್ರಾ, ಡಾ ದೀಪಾಲಿ,ಡಾ ಸಂತೋಷ್ ಜಿ ರಾವ್ ,ಇವರಿಗೆ ಅಭಿನಂದಿಸಲಾಯಿತು
ಇದೇ ಸಂಧರ್ಭದಲ್ಲಿ ಸನ್ಮಾನಿಸಿ ಮಾತನಾಡಿದ ಬಿಜೆಪಿ ನಗರ ಮಾಜಿ ಅಧ್ಯಕ್ಷರು ಹಾಗೂ ಖ್ಯಾತ ವೈದ್ಯರಾದ
ಡಾ ಮಂಜುನಾಥ್ ಮಾತನಾಡಿ
ಡಾ.ಬಿದನ್ ರಾಯ್ ರವರ ಹುಟ್ಟಿದ ದಿನದಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸುತ್ತೇವೆ. ಪ್ರತಿಯೊಬ್ಬ ವೈದ್ಯರಿಗೂ ಡಾ. ಬಿದನ್ ರಾಯ್ ರವರ ಸೇವಾ ಕೊಡುಗೆ ಮಾದರಿಯಾಗುತ್ತಾರೆ, ಪಶ್ಚಿಮ ಬಂಗಾಳದ 2ನೇ ಮುಖ್ಯಮಾಂತ್ರಿಯಾಗಿಯೂ ಸಹ ಸೇವೆ ಸಲ್ಲಿ ಸಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗೆ ಕಾರಣರಾದರು, ಮನುಷ್ಯ ತನ್ನ ಜೀವನದಲ್ಲಿ ಎನಾದರು ಸಂಪಾದಸಬೇಕು ಎಂದರೇ ಉತ್ತಮ ಆರೋಗ್ಯವಿದ್ದರೆ ಮಾತ್ರ ಸಾಧ್ಯ ಅದಕ್ಕಾಗಿಯೇ ಆರೋಗ್ಯವೇ ಭಾಗ್ಯ ಎಂದು ಋಷಿಮುನಿಗಳು ಕರೆ ನೀಡಿದರು ಎಂದರು,
ನಂತರ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ಮಾತನಾಡಿ ಯುವಪೀಳಿಗೆ ಪಶ್ಚಾತ್ಯ ಸಂಸ್ಕೃತಿ ತ್ಯಜಿಸಬೇಕು, ಆರೋಗ್ಯವಿದ್ದರೆ ಮಾತ್ರ ಸಾಧನೆ ಸಂಪಾದನೆ ಮಾಡಲು ಸಾಧ್ಯ, ವೇದ ಆಯುರ್ವೇದಲ್ಲಿ ಆರೋಗ್ಯ ಸ್ಥಿರತೆ ನಿಯಂತ್ರಣದ ಬಗ್ಗೆ ಮಾಹಿತಿಯಿದೆ, ಯೋಗ,ಧ್ಯಾನ, ಹೋಮ ಹವನ, ವಾಯುವಿಹಾರ ಸಂಗೀತದಿಂದ ಆರೋಗ್ಯ ವೃದ್ಧಿಸುತ್ತದೆ, ಹಿರಿಯ ನಾಗರೀಕರು ಆರೋಗ್ಯ ತಪಾಸಣೆಯಲ್ಲಿ ಹೆಚ್ಚಾಗಿ ಭಾಗವಹಿಸಿ ಆರೋಗ್ಯ ಸಮಸ್ಯೆಗಳ ಸೂಕ್ಷ್ಮತೆ ಅರಿತರೆ ನಿವಾರಣೆಯಾಗುತ್ತದೆ. ನಾವೆಲ್ಲರೂ ಆರೋಗ್ಯವಿಮೆ ಮಾಡಿಸುತ್ತೇವೆ ಹೊರೆತು ಪರಿಸರ ಸಂರಕ್ಷಣೆಯ ಕಡೆ ಮುಂದಾಗುವುದಿಲ್ಲ ವಿದ್ಯಾರ್ಥಿಗಳು ಪದವೀಧರರಾಗಬೇಕು ಮತ್ತು ಮರಗಿಡಗಳ ಹಸಿರಿನ ಸಂಪತ್ತು ಹೆಚ್ಚಾದರೆ ಮಾತ್ರ ದೇಶದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಹಿರಿಯ ಸಾಹಿತಿಗಳಾದ ಡಾ ಸಿಪಿ ಕೃಷ್ಣಕುಮಾರ್ ಮಾತನಾಡಿ
ಚರಕ, ಶುಶ್ರುತರು ಭಾರತೀಯ ವೈದ್ಯ ಪರಂಪರೆಯ ಹೆಮ್ಮೆ
‘ಸಮಾಜದಲ್ಲಿ ವೈದ್ಯರ ಸೇವೆ ಸ್ಮರಣೀಯ’
ರೋಗದಿಂದ ನರಳುವವರ ಪಾಲಿಗೆ ವೈದ್ಯರು ದೇವರ ಪ್ರತಿನಿಧಿಗಳಿದ್ದಂತೆ’
‘ಭಾರತೀಯ ಪರಂಪರೆಯಲ್ಲಿ ದೇವಲೋಕದ ಧನ್ವಂತರಿಯನ್ನು ಆರೋಗ್ಯದ ದೇವತೆ ಎಂದು ಪೂಜಿಸಲಾಗುತ್ತಿದೆ. ಚರಕ, ಶುಶ್ರುತರು ಪಾರಂಪರಿಕ ವೈದ್ಯರಾಗಿದ್ದುದು ಹೆಮ್ಮೆಯ ವಿಚಾರ. ತುಂಬೆ, ಬೇವಿನ ಸೊಪ್ಪಿನಿಂದಲೂ ರೋಗ ನಿವಾರಿಸುವ ಕಲೆ ಭಾರತೀಯ ಋಷಿಮುನಿಗಳಿಗೆ ಕರಗತವಾಗಿತ್ತು. ವೈದ್ಯಕೀಯ ಪದ್ದತಿಯಲ್ಲಿ ಸಾಕಷ್ಟು ಸಂಶೋಧನೆಗಳಾಗಿವೆ. ಆಗುತ್ತಲೂ ಇವೆ. ಗ್ರಾಮೀಣ ಭಾಗದ ಸರ್ಕಾರಿ ಮತ್ತು ಖಾಸಗಿ ವೈದ್ಯರ ಸೇವೆ ಅನನ್ಯವಾದುದು’ ಎಂದರು.
ರೋಗ ವಾಸಿ ಮಾಡುವಲ್ಲಿ ಹತ್ತಾರು ಆತಂಕಗಳನ್ನು ಎದುರಿಸುತ್ತಿರುವ ವೈದ್ಯರ ಬಗ್ಗೆ ಸಮಾಜ ಮೃದು ಭಾವ ತಾಳುವುದನ್ನು ರೂಢಿಸಿಕೊಳ್ಳಬೇಕು. ವೈದ್ಯರು ಪ್ರಾಣ ತೆಗೆಯುವವರಲ್ಲ. ರೋಗಿಗಳ ಜೀವ ಉಳಿಸುವುದು ಅವರ ಪರಮ ಕರ್ತವ್ಯವಾಗಿರುತ್ತದೆ. ರೋಗಿಗಳ ಕಡೆಯವರು ತಾಳ್ಮೆ ವಹಿಸಬೇಕು. ಖಾಯಿಲೆ ವಾಸಿ ಮಾಡುವಲ್ಲಿ ಶ್ರಮಿಸುವ ವೈದ್ಯರ ಸೇವೆಯನ್ನು ನೆನೆಯೋಣ’ ಎಂದರು.
ಇದೇ ಸಂದರ್ಭದಲ್ಲಿ ಡಾ ಸಿಪಿ ಕೃಷ್ಣಕುಮಾರ್,ಬಿಜೆಪಿ ಮಾಜಿ ನಗರಾಧ್ಯಕ್ಷರಾದ ಡಾ ಮಂಜುನಾಥ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ,ಪರಮಪೂಜ್ಯ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ನಗರ ಪಾಲಿಕಾ ಸದಸ್ಯರಾದ ಭಾಗ್ಯ ಮಾದೇಶ್, ಬೇರು ಫೌಂಡೇಶನ್ ಅಧ್ಯಕ್ಷರಾದ ಮಧು ಎನ್ ಪೂಜಾರ್ ,
ಡಾ॥ ರಂಜಿನಿ ಡಾ॥ ಸುಪ್ರಿತ್ ಡಾ॥ ತೇಜಸ್ವಿನಿ
ಎನ್ ಆರ್ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಲೋಹಿತ್ ಹಾಗೂ ಶಿವಪ್ರಕಾಶ DRM ಸಂಸ್ಥೆಯ ಮ್ಯಾನೇಜರ್ ಲೋಕೇಶ್ ಹಾಗೂ ಬೇರೆು ಸಂಸ್ಥೆಯ ಸದಸ್ಯರು ಹಾಜರಿದ್ದರು