ಮೈಸೂರು: ನಗರದಾದ್ಯಂತ ಹಿಡಿದಿರುವ ಜಡಿಮಳೆ.

Share

ಮೈಸೂರು, ನಗರದಾದ್ಯಂತ ಜಡಿಮಳೆ ನೆನ್ನೆಯಿಂದ ಆರಂಭವಾಗಿದ್ದು ಇಂದು ಬೆಳಗ್ಗೆ ಕೂಡ ಜಡಿಮಳೆ, ಮುಂದುವರೆದಿದ್ದು ಕೆಲವು ಕಡೆ ಜೋರಾಗಿ ಮಳೆ ಬರುತ್ತಿದೆ. ಸಾರ್ವಜನಿಕರು ಕೊಡೆ ಹಿಡಿದು ಹಾಲು, ತರಕಾರಿ, ತರಲು ತೆರಳುತ್ತಿದ್ದ ದೃಶ್ಯ ಕಂಡುಬಂದಿತು ಇಂದು ಬೆಳಗ್ಗೆಯಿಂದ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕೆ ವಿತರಕರಿಗೂ ತೊಂದರೆಯಾಗಿದ್ದು ಕೆಲವು ಬಡಾವಣೆಗಳಲ್ಲಿ ಮನೆಗಳಿಗೆ ತಲುಪಿಸಲು ಕಷ್ಟಕರವಾಗಿತ್ತು. ಹೂವು, ತರಕಾರಿ, ಗಾಡಿಗಳು ರಸ್ತೆ ರಸ್ತೆಯಲ್ಲಿ ಬರುವುದಕ್ಕೆ ಆಗದೆ ಇರುವುದರಿಂದ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗಿದೆ.

ಮೈಸೂರಿನಲ್ಲಿ ಬೀಳುತ್ತಿರುವ ಮಳೆಗೆ ಮರದ ಕೊಂಬೆ ಕಾರಿನ ಮೇಲೆ ಬಿದ್ದು ಗಾಜು ಒಡೆದಿರುವ ದೃಶ್ಯ


Share