ಮೈಸೂರು ನಗರ ಸಹಜ ಸ್ಥಿತಿಯತ್ತ ಎಲ್ಲಾ ಅಂಗಡಿಗಳು ಓಪನ್‌ ಆದ ಸಿಗ್ನಲ್ ಲೈಟ್

ಮೈಸೂರು ನಗರದಲ್ಲಿ ಸಾರ್ವಜನಿಕರು ಎಂದಿನಂತೆ ಓಡಾಟವನ್ನು ಆರಂಭಿಸಿದ್ದು ನಗರದ ವೃತ್ತದಲ್ಲಿ ತಕ್ಕಂತ ಎಲ್ಲಾ ಸಿಗ್ನಲ್ ದೀಪಗಳು ಆನ್ ಆಗಿದ್ದ ದೃಶ್ಯ ಕಂಡು ಬ೦ದಿತು

14 ದಿನದಿಂದ ಪಾಸಿಟಿವ್ ಪ್ರಕರಣ ಬಾರದ ಕಾರಣ ನಾಳೆಯಿಂದ‌ ಮೈಸೂರಿನಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ದೇವರಾಜ ಅರಸು ರಸ್ತೆ ಅಶೋಕ‌ ರಸ್ತೆ ಶಿವರಾಂಪೇಟೆ ಸೇರಿ 91 ರಸ್ತೆಗಳಲ್ಲಿ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ನಾಳೆಯಿಂದ ಎಂದಿನಂತೆ ವ್ಯಾಪಾರ ಆರಂಭವಾಗಲಿದೆ ಈ ಸಂಬಂಧ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಆದೇಶ ಹೊರಡಿಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.

ಸಲೂನ್ ಸ್ಪಾ ಸಿನಿಮಾ ಮಂದಿರ ಧಾರ್ಮಿಕ‌ ಕೇಂದ್ರಗ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ನಿರ್ಬಂಧಗಳು ಅನ್ವಯವಾಗಲಿದೆ.
ಆಟೋ ಟ್ಯಾಕ್ಸಿ ಗಳ‌ ಸಂಚಾರಕ್ಕೂ ಅವಕಾಶ ಇಲ್ಲ. ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ.