ಮೈಸೂರು, ನಾಳೆ ಪಿಯುಸಿ ಪರೀಕ್ಷೆಗೆ ಕೇಂದ್ರಗಳು ಸಜ್ಜು

Share

ಮೈಸೂರು ನಾಳೆ ನಡೆಯಲಿರುವ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ನಗರದಲ್ಲಿ ಪರೀಕ್ಷಾ ಕೇಂದ್ರಗಳು ಸಜ್ಜಾಗುತ್ತಿವೆ ,ಕಳೆದ ಎರಡು ದಿನಗಳಿಂದ ಬೆಳಗ್ಗೆ ಮತ್ತು ಸಂಜೆ ಪರೀಕ್ಷೆ ನಡೆಯುವ ಕೇಂದ್ರದಲ್ಲಿ ಸ್ಯಾನಿ ಟೈಸಿಂಗ್ ಮಾಡಲಾಗುತ್ತಿದೆ ಎಂದು ಇಂದು ಶಿಕ್ಷಣ ಇಲಾಖೆ ತಿಳಿಸಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೊಠಡಿಗಳ ಸಂಖ್ಯೆ ಹೆಚ್ಚು ಮಾಡಲಾಗಿದೆ ಮೈಸೂರು ನಗರದಲ್ಲಿ 26 ಕೇಂದ್ರ ಜಿಲ್ಲೆಯಾದ್ಯಂತ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ .31.569 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಎಲ್ಲಾ ಪರೀಕ್ಷೆ ಕೇಂದ್ರದಲ್ಲಿ ಆಶಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಪರೀಕ್ಷಾ ಕೇಂದ್ರದ ಒಳಗಡೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ .ರಾಜ್ಯಾದ್ಯಂತ 5.95 ಲಕ್ಷ ವಿದ್ಯಾರ್ಥಿಗಳು 1,016 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಇಲಾಖೆ ವಿವರ ನೀಡಿದೆ.


Share