ಮೈಸೂರು: ನಾಳೆ ಹಲವು ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ

Share

ವಿದ್ಯುತ್ ವ್ಯತ್ಯಯ
ಮೈಸೂರು,ಆಗಸ್ಟ್.7.(ಕರ್ನಾಟಕವಾರ್ತೆ):- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಕ.ವಿ.ಪ್ರ.ನಿ.ನಿ., ವತಿಯಿಂದ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಆಗಸ್ಟ್ 8 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 66/11ಕೆವಿ ಟಿ.ನರಸೀಪುರ ವ್ಯಾಪ್ತಿಯ ಟಿ.ನರಸೀಪುರ ಪಟ್ಟಣ, ಕಿರಗಸೂರು, ಟಿ.ದೊಡ್ಡಪುರ, ಹೆಮ್ಮಿಗೆ, ಬೆನಕನಹಳ್ಳಿ, ಮುತ್ತಲವಾಡಿ, ಸೋಸಲೆ, ಕೊಳತ್ತೂರು, ಉಕ್ಕಲಗೆರೆ, ದೊಡ್ಡೇಬಾಗಿಲು, ಹೊಸಕೋಟೆ, ಗರ್ಗೇಶ್ವರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗೂ ಅದೇ ದಿನದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11ಕೆವಿ ಚಂದಳ್ಳಿ ವ್ಯಾಪ್ತಿಯ ದೊಡ್ಡೇಹುಂಡಿ, ಚಂದಳ್ಳಿ, ಟಿ.ದೊಡ್ಡಪುರ, ಶಂಭುದೇವನಪುರ, ಅಕ್ಕೂರು, ಅಕ್ಕೂರುದೊಡ್ಡಿ, ಮಾರನಪುರ ಗ್ರಾಮಗಳು/ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಳು, 66/11ಕೆವಿ ಮೂಗೂರು ವ್ಯಾಪ್ತಿಯ ಮೂಗೂರು, ಕೊತ್ತೇಗಾಲ, ಆಲಗೂಡು, ವಾಟಾಳು, ಮೂಗೂರುಮೋಳೆ, ಕೊತ್ತವಾಡಿ, ಕೊತ್ತವಾಡಿಮೋಳೆ ಗ್ರಾಮಗಳು/ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ
ಮೈಸೂರು,ಆಗಸ್ಟ್.7.(ಕರ್ನಾಟಕವಾರ್ತೆ):- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ 66/11 ಕೆ.ವಿ. ತಾಯೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆಗಸ್ಟ್ 8 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಾಗೂ ಬೃಹತ್ ಕಾಮಗಾರಿ ವಿಭಾಗ ಮೈಸೂರು ರವರು ಮಾರ್ಗದ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ 66/11ಕೆ.ವಿ. ತಾಯೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ತಾಯೂರು, ಈಶ್ವರಗೌಡನಹಳ್ಳಿ, ವಡ್ಡರಹುಂಡಿ, ಬೀರಿಹುಂಡಿ, ಕೊಟ್ಟರಾಯನಹುಂಡಿ, ಗೆಜ್ಜಗನಹಳ್ಳಿ, ಕಾಹಳ್ಳಿ ಮತ್ತು ಕಲ್ಕುಂದ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ನಿಲುಗಡೆ
ಮೈಸೂರು, ಆಗಸ್ಟ್.7.(ಕರ್ನಾಟಕ ವಾರ್ತೆ):- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ  66/11 ಕೆ.ವಿ ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಕಲ್ಯಾಣಗಿರಿ ಫೀಡರ್‍ನಲ್ಲಿ ಆಗಸ್ಟ್ 8 ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎನ್.ಆರ್.ಮೊಹಲ್ಲಾ, ರೇಡಿಯಂ ಪಾರ್ಕ್, ಮಾರುತಿ ಸರ್ಕಲ್, ಶಿವಾಜಿ ರಸ್ತೆ, ಟ್ಯಾಂಕ್ ರಸ್ತೆ, ನಾರ್ಥ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ, ಕುರಿಮಂಡಿ, ಕೆಸರೆ 3ನೇ ಹಂತ, ಕಲ್ಪವೃಕ್ಷ ನಗರ, ಕೆಸರೆ 1ನೇ ಹಂತ, ರಾಜೇಂದ್ರನಗರ, ಓ.ಡಿ. ಬ್ಲಾಕ್, ಸುಭಾಷ್‍ನಗರ, ಬಡಾಮಕಾನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ
ಮೈಸೂರು, ಆಗಸ್ಟ್.7.(ಕರ್ನಾಟಕ ವಾರ್ತೆ):- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ  66/11 ಕೆ.ವಿ. ವಿದ್ಯುತ್ ವಿತರಣಾ  ಕೇಂದ್ರಗಳಲ್ಲಿ ಕ.ವಿ.ಪ್ರ.ನಿ.ನಿ., ವತಿಯಿಂದ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
  ಈ ಹಿನ್ನೆಲೆ ಆಗಸ್ಟ್ 10 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ 66/11ಕೆವಿ ತುಂಬ್ಲಾ ವ್ಯಾಪ್ತಿಯ ತುಂಬ್ಲಾ, ಕುಪ್ಯ, ಹೊಸಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು, 66/11ಕೆವಿ ಚಿದರವಳ್ಳಿ ವ್ಯಾಪ್ತಿಯ ಚಿದ್ರವಳ್ಳಿ, ಉಕ್ಕಲಗೆರೆ, ಸೋಮನಾಥಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು, 66/11ಕೆವಿ ವ್ಯಾಸರಾಜಪುರದ ಸೋಸಲೆ, ಬೆನಕನಹಳ್ಳಿ, ಕೊಳತ್ತೂರು, ದೊಡ್ಡೆಬಾಗಿಲು, ಉಕ್ಕಲಗೆರೆ, ಆರ್.ಪಿ.ಹುಂಡಿ ಗ್ರಾಮಗಳು/ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು ಹಾಗೂ 66/11ಕೆವಿ ಗರ್ಗೇಶ್ವರಿಯ ಯಡದೊರೆ, ಕುರಿಸಿದ್ದನಹುಂಡಿ, ಗರ್ಗೇಶ್ವರಿ, ಹಳೆತಿರುಮಕೂಡಲು, ಇಂಡುವಾಳು, ರಾಯರಹುಂಡಿ, ಹೊಸಕೆಂಪಯ್ಯನಹುಂಡಿ, ಹಳೆಕೆಂಪಯ್ಯನಹುಂಡಿ ಗ್ರಾಮಗಳು/ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ನಿಲುಗಡೆ
ಮೈಸೂರು, ಆಗಸ್ಟ್.7.(ಕರ್ನಾಟಕ ವಾರ್ತೆ):- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ  66/11 ಕೆ.ವಿ  ಆರ್.ಕೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ   11 ಕೆ.ವಿ  ಕುವೆಂಪು   ವಿದ್ಯುತ್   ಮಾರ್ಗದಲ್ಲಿ ಎಲ್ & ಟಿ ರವರು ಭೂಗತ ಕೇಬಲ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಆಗಸ್ಟ್ 8 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕುವೆಂಪುನಗರ ಸಿ ಮತ್ತು ಡಿ ಬ್ಲಾಕ್, ಅನಿಕೇತನ ರಸ್ತೆ, ವಿಜಯಬ್ಯಾಂಕ್ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ
ಮೈಸೂರು,ಆಗಸ್ಟ್.7.(ಕರ್ನಾಟಕವಾರ್ತೆ):- ಬೃಹತ್ ಕಾಮಗಾರಿ ವಿಭಾಗ, ಕ.ವಿ.ಪ್ರ.ನಿ.ನಿ., ಚಾಮರಾಜನಗರ ರವರ ವತಿಯಿಂದ ತುರ್ತು ಕಾಮಗಾರಿಗಳನ್ನು ಕೈಗೊಂಡಿರುವ ಹಿನ್ನೆಲೆ ಆಗಸ್ಟ್ 9 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರಗೆ 66/11ಕೆವಿ ನಂಜನಗೂಡು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11ಕೆ.ವಿ ಫೀಡರ್‍ಗಳಾದ ಕಬಿನಿ ವಾಟರ್ ಸಪ್ಲೈ, ನುಗು (ಐಪಿ) ಮಾರ್ಗ, ನಂಜನಗೂಡು ಇಂಡಸ್ಟ್ರಿಯಲ್ ಈ8, KHB-1 ಮತ್ತು KHB-2  ಫೀಡರ್‍ಗಳಿಗೆ ವಿದ್ಯುತ್ ಸರಬರಾಜು ಹೊಂದಿರುವ ಕಲ್ಲಹಳ್ಳಿ ಇಂಡಸ್ಟ್ರಿಯಲ್ ಏರಿಯಾ, ದೇಬೂರು, ಹಂಡುವಿನಹಳ್ಳಿ,  ಏಊಃ  ಕಾಲೋನಿ, ಕತ್ವಾಡಿಪುರ, ಕನಕನಗರ, ಬ್ಯಾಳಾರು ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
     ಮೈಸೂರು, ಆಗಸ್ಟ್.7.(ಕರ್ನಾಟಕ ವಾರ್ತೆ):- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ 66/11 ಕೆ.ವಿ. ವಿದ್ಯುತ್ ವಿತರಣಾ  ಕೇಂದ್ರಗಳಲ್ಲಿ ಕ.ವಿ.ಪ್ರ.ನಿ.ನಿ., ವತಿಯಿಂದ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಆಗಸ್ಟ್ 9 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ 66/11ಕೆ.ವಿ. ತಾಂಡ್ಯದ ಚಿಕ್ಕಯ್ಯನಛತ್ರ, ತಾಂಡ್ಯ ಕೈಗಾರಿಕಾ ಪ್ರದೇಶ, ಬಾಲಾಜಿ, ಇಂಡಸ್, ಗಣಪತಿ, ಕೆಐಎಡಿಬಿ 1&2, ಕೆಂಪಿಸಿದ್ದನಹುಂಡಿ, ಹುಳಿಮಾವು, ಹದಿನಾರು, ಹೊಸಕೋಟೆ, ತುಂಬುನೇರಳೆ, ಗ್ರಾಮಗಳು ಮತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ಆಗಸ್ಟ್ 11 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11ಕೆವಿ ದೇವನೂರಿನ ತಗಡೂರು, ಬದನವಾಳು, ಚುಂಚನಹಳ್ಳಿ, ಗಟ್ಟವಾಡಿಪುರ, ಕಾರ್ಯ, ಅಳಗಂಚಿ, ಹೆಡತಲೆ, ಕೋಣನೂರು, ನೇರಳೆ, ಹೆಮ್ಮರಗಾಲ, ಕೌವಲಂದೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು ಹಾಗೂ 66/11ಕೆವಿ ಸುತ್ತೂರಿನ ನಗರ್ಲೆ, ಬಿಳಿಗೆರೆ, ಮಲ್ಲೂಪುರ, ಸುತ್ತೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share