ಮೈಸೂರು-ನೇರ ಸಂದರ್ಶನ ಕಾರ್ಯಕ್ರಮ

ನೇರ ಸಂದರ್ಶನ ಕಾರ್ಯಕ್ರಮ
ಮೈಸೂರು,ಜು.28.:- ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ವತಿಯಿಂದ ಚಾಮರಾಜನಗರದಲ್ಲಿನ ಬದನಕುಪ್ಪೆ ಕೆಲ್ಲಂಬಳಿ ಕೈಗಾರಿಕಾ ಪ್ರದೇಶದಲ್ಲಿನ ಪ್ರಮುಖ ಕಂಪನಿಯಾದ “ಆದಿತ್ಯ ಬಿರ್ಲಾ ಗ್ರೂಪ್ ಗ್ರಾಸಿಮ್” ಖಾಲಿ ಇರುವ ಡಿಪ್ಲೋಮೊ ಇನ್ ಮೆಕ್ಯಾನಿಕಲ್ 24 ಹುದ್ದೆ, ಡಿಪ್ಲೊಮೊ ಇನ್ ಕೆಮಿಕಲ್ 11 ಹುದ್ದೆ ಮತ್ತು ಡಿಪ್ಲೋಮೊ ಇನ್ ಪೇಟ್ರೋಕೆಮಿಕಲ್ 07 ಹುದ್ದೆಗಳಿಗೆ ಜುಲೈ 31 ರಂದು ಬೆಳಗ್ಗೆ 10 ಗಂಟೆಗೆ ಜೆ.ಎಸ್.ಎಸ್ ಪಾಲಿಟೆಕ್ನಿಕ್ ಜೆ.ಸಿ ಕ್ಯಾಂಪಸ್ ಮಾನಸ ಗಂಗೋತ್ರಿ ಮೈಸೂರು ಇಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರನ್ನು ಹಾಗೂ ಕಛೇರಿ ವೇಳೆಯಲ್ಲಿ ದೂ.ಸಂ 9986263695 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೆಛೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ