ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 18

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 18
ಶ್ರೀ ಹರಿಯು ಲಕ್ಷ್ಮೀ ದೇವಿಯನ್ನು ಅರಸುತ್ತ ಭೂಲೋಕಕ್ಕೆ ಇಳಿದಿದ್ದನ್ನು ಕೇಳಿದೆವು. ಇಂದು…..
ದ್ವಾಪರ ಯುಗ ಪೂರ್ತಿಯಾಗಿ ಕಲಿಯುಗ ಪ್ರಾರಂಭವಾಯಿತು. ಕಲಿಯುಗದ ಋಷಿ ಪುಂಗವರಿಗೆ, ಮಾನವರಿಗೆ ಒಂದು ಅವತಾರ ಬೇಕಾಯಿತು ಅದೇ ಶ್ರೀನಿವಾಸ.
ತನ್ನ ಕೋಪವನ್ನು ತಪಸ್ಸಿನಲ್ಲಿಟ್ಚು ಲಕ್ಷ್ಮೀ ದೇವಿಯು ಶಾಂತವಾಗಿ ಕುಳಿತಿದ್ದಳು ಕರವೀಪುರದಲ್ಲಿ. ಆ ಸಮಯದಲ್ಲಿ ತನ್ನನ್ನು ಶ್ರೀ ಹರಿಯು ಕರೆಯುತ್ತಿರುವಂತೆ ಅನಿಸಿತು. ಹರಿಯು ಲಕ್ಷ್ಮೀ ದೇವಿಯನ್ನು ಹುಡುಕುತ್ತಾ ಬೆಟ್ಟವೆಲ್ಲಾ ಅಲೆದಾಡಿದ್ದ. ಕರ್ಮಲೇಕಕ್ಕೆ ಬಂದಿದ್ದರಿಂದ ಶ್ರೀ ಹರಿಗೂ ಆಯಾಸ, ಹಸಿವು, ಬಾಯಾರಿಕೆಯ ಅರಿವಾಯಿತು. ಮನುಷ್ಯರಿಗೆ ಬಂದ ಎಲ್ಲ ಅವಸ್ಥೆಯನ್ನು ಅನುಭವಿಸುತ್ತಿದ್ದಾನೆ. ಹಸಿವಿನಿಂದ ಮಲಗಿ ಹಾಗೆ ನಿದ್ರೆಗೆ ಜಾರಿದ ಶ್ರೀ ಹರಿಯನ್ನು ನೋಡಿದ ಲಕ್ಷ್ಮಿಗೆ ಮನನೊಂದು ಒಂದು ಹುತ್ತವನ್ನು ಕವಚದಂತೆ ನಿರ್ಮಿಸಿದಳು ಸ್ವಾಮಿಗೆ.
ಮೊದಲ ಬಾರಿಗೆ ಲಕ್ಷ್ಮಿಯು ಗೋವಿಂದ ಎಂದು ಕರೆದಳು ಶ್ರೀ ಹರಿಯನ್ನು. ಗೋವಿಂದ ಎಂದರೆ ವೇದಾಂತ ವಾಕ್ಯಗಳೇ ಶ್ರೀ ಹರಿಯನ್ನು ವಿವರಿಸಬೇಕು ಎಂದು.
ಗೋ ಎಂದರೆ ಹಸು, ಭೂಮಿ, ಧರ್ಮ ಎಂದರ್ಥ. ಸಮಸ್ತ ಜೀವರಾಶಿಗಳಿಗೂ ಆನಂದವನ್ನುಂಟುಮಾಡುವವನು ಗೋವಿಂದ. ತ್ರಿಕಾಲದಲ್ಲಿ ಮಾಡಿರುವ ಪಾಪಗಳು ಗೋವಿಂದ ನಾಮಸ್ಮರಣೆಯಿಂದ ನಾಶವಾಗುತ್ತದೆ. ಪುಂಡರೀಕಾಕ್ಷ ಎಂದರೆ ಕಣ್ಣಿನ ವ್ಯಾಧಿಗಳೆಲ್ಲಾ ನಾಶವಾಗುತ್ತದೆ ಎಂದು
” ಗೋವಿಂದ ಸಾನಂದ ಪಕಮಾ
ಗೋಪಾಲ ಶ್ರೀ ಪಾಲ ಸಚ್ಚಿದಾನಂದ ಪಾಯಾ ಮಾ “
ಎಂಬ ಸುಂದರ ಕೀರ್ತನೆಯೊಂದಿಗೆ ಶ್ರೀ ಸ್ವಾಮೀಜಿಯವರು ಗೋವಿಂದ ನಾಮಸ್ಮರಣೆಯ ಪ್ರಾಮುಖ್ಯತೆ ತಿಳಿಸಿದ್ದಾರೆ. ಇಂದು ನೋಡಲೇಬೇಕಾದ ಸಂಚಿಕೆ. ತಪ್ಪಿಸಬೇಡಿ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share