ಮಾಸಾಶನಕ್ಕಾಗಿ ಕಲಾವಿದರಿಂದ ಅರ್ಜಿ ಆಹ್ವಾನ
ಮೈಸೂರು, ಮೇ.27. (ಕರ್ನಾಟಕ ವಾರ್ತೆ):- ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಲಾಕ್‍ಡೌನ್ ಸಮಯದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಕಲಾವಿದರಿಗೆ ಮಾಸಾಶನ ಹಾಗೂ ಮೃತ ಸಾಹಿತಿ/ಕಲಾವಿದರ ಪತ್ನಿಯರಿಗೆ ವಿಧವಾ ಮಾಸಾಶನವನ್ನು ನೀಡಲಾಗುತ್ತಿದೆ.
ಮಾಸಾಶನ/ವಿಧವಾ ಮಾಸಾಶನ ಪಡೆಯುತ್ತಿರುವ ಕಲಾವಿದರು ಮರು ನೊಂದಣಿಯನ್ನು ಮಾಡಬೇಕಾಗಿದ್ದು, ಈ ಸಂಬಂಧ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಲಾಮಂದಿರ ಇಲ್ಲಿ ಅರ್ಜಿಗಳನ್ನು ಪಡೆಯಬಹುದಾಗಿದೆ.
ಮಾಸಾಶನ/ವಿಧವಾ ಮಾಸಾಶನ ಪಡೆಯುತ್ತಿರುವ ಕಲಾವಿದರು ಅಗತ್ಯ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಮಂದಿರ ಇಲ್ಲಿ ಅರ್ಜಿಗಳನ್ನು ಮೇ 29 ರೊಳಗೆ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2513225 ಅನ್ನು ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮೇ 28ರಂದು ಕೆ-ಸೆಟ್ ತರಬೇತಿ ಶಿಬಿರಾರ್ಥಿಗಳಿಗೆ ಅಧ್ಯಯನ ಕೈಪಿಡಿ ಬಿಡುಗಡೆ
ಮೈಸೂರು, ಮೇ.27. (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮೇ 28 ರಂದು ಬೆಳಿಗ್ಗೆ 11.30 ಗಂಟೆಗೆ ಉಪ ಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವಥ್‍ನಾರಾಯಣ್ ಅವರು ತಮ್ಮ ಕಛೇರಿಯಲ್ಲಿ KSOU-CONNECT ಮೂಲಕ ನಡೆಯುತ್ತಿರುವ ಕರ್ನಾಟಕ ರಾಜ್ಯ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯ ತರಬೇತಿ ಶಿಬಿರಾರ್ಥಿಗಳಿಗೆ ಆನ್‍ಲೈನ್ ಮೂಲಕ ಶುಭಹಾರೈಸಿ ಅಧ್ಯಯನ ಕೈಪಿಡಿಯನ್ನು ಬಿಡುಗಡೆ ಮಾಡುವರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ BOM ಸಭಾಂಗಣದಲ್ಲಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅಧ್ಯಕ್ಷತೆ ವಹಿಸುವರು. ಕುಲಸಚಿವ ಪ್ರೊ. ಲಿಂಗರಾಜಗಾಂಧಿ ಉಪಸ್ಥಿತರಿರುವರು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೂವಿನ ಬೆಳೆ ಪರಿಹಾರ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ
ಮೈಸೂರು. ಮೇ.27.(ಕರ್ನಾಟಕ ವಾರ್ತೆ):- ಲಾಕ್‍ಡೌನ್ ವೇಳೆಯಲ್ಲಿ ಹೂವಿನ ಬೆಳೆಯಲ್ಲಿ ನಷ್ಟ ಹೊಂದಿದ ರೈತರು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಸ್ವತಹ ತಾವೇ ಪರಿಹಾರ ಸಹಾಯಧನಕ್ಕಾಗಿ ಅರ್ಜಿಗಳನ್ನು ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರ ಕಛೇರಿಗಳಲ್ಲಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಮೈಸೂರು-0821-2430450, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಹೆಚ್.ಡಿ.ಕೋಟೆ-08228-255262, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಹುಣಸೂರು-08222-252447, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಕೆ.ಆರ್.ನಗರ-08223-262792, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ನಂಜನಗೂಡು- 08221-226201, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಪಿರಿಯಾಪಟ್ಟಣ- 08223-273535, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಟಿ.ನರಸೀಪುರ- 08227-260086 ಅನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ನಿಲುಗಡೆ
ಮೈಸೂರು, ಮೇ.26. (ಕರ್ನಾಟಕ ವಾರ್ತೆ):- ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮೇ 29 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರಗೆ 66/11 ಕೆ.ವಿ. ತಾಯೂರು ಹಾಗೂ ಬನ್ನೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ 1ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ತಾಯೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಈಶ್ವರಗೌಡನಹಳ್ಳಿ, ವಡ್ಡರಹುಂಡಿ, ಬೀರಿಹುಂಡಿ, ಕೊಟ್ಟರಾಯನಹುಂಡಿ, ಗೆಜ್ಜಗನಹಳ್ಳಿ, ಕಾಹಳ್ಳಿ ಮತ್ತು ಕಲ್ಕುಂದ ಹಾಗೂ ಬನ್ನೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಬನ್ನೂರು ಪಟ್ಟಣ, ಕೊಡಗಳ್ಳಿ, ಬೀಸೀಹಳ್ಳಿ, ಹೆಗ್ಗೂರು, ಅತ್ತಳ್ಳಿ, ಕೇತುಪುರ, ರಂಗಸಮುದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿದ್ಯುತ್ ನಿಲುಗಡೆ
ಮೈಸೂರು, ಮೇ.26. (ಕರ್ನಾಟಕ ವಾರ್ತೆ):- ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮೇ 28 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯ ವರಗೆ 66/11 ಕೆ.ವಿ. ಎಫ್.ಟಿ.ಎಸ್. ಮತ್ತು ಬನ್ನಿಮಂಟಪ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಹೊರಹೊಮ್ಮುವ 11 ಕೆ.ವಿ. ರಾಜೇಂದ್ರ ಮತ್ತು ಬನ್ನಿಮಂಟಪ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ರಾಜೇಂದ್ರ ನಗರದ ವ್ಯಾಪ್ತಿಯ ರಾಜೇಂದ್ರನಗರ 1ನೇ ಕ್ರಾಸ್‍ನಿಂದ 10ನೇ ಕ್ರಾಸ್‍ವರೆಗೆ, ಓ.ಡಿ. ಬ್ಲಾಕ್, ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಹಾಗೂ ಸುತ್ತ-ಮುತ್ತಲಿನ ಪ್ರದೇಶ ಹಾಗೂ ಬನ್ನಿಮಂಟಪ ಫೀಡರ್ ವ್ಯಾಪ್ತಿಯ ಬಡಾಮಕಾನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಣೆಯಾಗಿದ್ದಾರೆ
ಮೈಸೂರು. ಮೇ.27.(ಕರ್ನಾಟಕ ವಾರ್ತೆ):- ಮನುಗನಹಳ್ಳಿ ರಕ್ಷಿತಾ ಎಂಬುವವರು ಮೇ 16 ರಂದು ಮಧ್ಯಾಹ್ನ 1.30 ಗಂಟೆಗೆ ಮನೆಯಿಂದ ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೋದವಳು ವಾಪಸ್ ಮನೆಗೆ ಬರದೆ ಕಾಣೆಯಾಗಿರುತ್ತಾರೆಂದು ತಾಯಿ ಶಿವಾಜಮ್ಮ ಎಂಬುವರು ಸರಗೂರು ಪೋಲಿಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಕಾಣೆಯಾಗಿರುವ ಹುಡುಗಿಯ ವಿವರ ಇಂತಿದೆ: ಸುಮಾರು 17 ವರ್ಷ, 5 ಅಡಿ ಎತ್ತರ, ಗೋಧಿ ಮೈಬಣ್ಣ, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್, ಕಪ್ಪು, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಕಾಣೆಯಾದ ಹುಡುಗಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸರಗೂರು ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ದಿವ್ಯ ಅವರ ದೂರವಾಣಿ ಸಂಖ್ಯೆ- 9480805064 ಸಂಪರ್ಕಿಸಿ ಎಂದು ಸರಗೂರು ಪೊಲೀಸ್ ಠಾಣೆ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ