ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ-5

991
Share

ಶ್ರೀ ಗುರು ಗೀತ – ಭಾಗ 5
ಗುರುವು ತನ್ನ ಶಿಷ್ಯರಲ್ಲಿ ಯಾರಿಗೆ ಯಾವ ಮಾರ್ಗ ಸೂಕ್ತವೋ ಅದನ್ನು ಉಪದೇಶಿಸುತ್ತಾರೆ.ಒಬ್ಬರು ಗುರುವನ್ನು ನಂಬಬೇಕು ಮತ್ತು ಪಾಲಿಸಬೇಕು. ನಮ್ಮ ಗುರುವಿನ ಆಜ್ಞೆಯಿಂದ ಮಾತ್ರ ಮತ್ತೊಬ್ಬ ಗುರುವಿನೊಂದಿಗೆ ಸಂಪರ್ಕಹೊಂದಬಹುದು. ಜ್ಞಾನಾರ್ಜನೆ ಗಾಗಿ ಪತಿ ಪತ್ನಿಯರಿಬ್ಬರೂ ಒಗ್ಗೂಡಿ ಒಬ್ಬರು ಗುರುವನ್ನು ಆಶ್ರಯಿಸಬೇಕು. ಗುರುವು ಕ್ಷಿಪ್ರ ಪ್ರಸಾದಿ. ಬ್ರಹ್ಮ ವಿಷ್ಣು ಮಹೇಶ್ವರರ ಸೃಷ್ಟಿ ಸ್ಥಿತಿ ಲಯಗಳ ಪ್ರತೀಕವಾಗಿ ತ್ರಿಗುಣಾತೀತ ತತ್ವದಿಂದ ಆದಿಗುರು ದತ್ತಾತ್ರೇಯರ ಜನನವಾಯಿತು.
ಎಲ್ಲಾ ಸಂಪ್ರದಾಯಗಳಿಗೂ ಗುರು ಭೋದನೆ ಅನ್ವಯಿಸುತ್ತದೆ. ಜೀವನದ ಎಲ್ಲ ಕೋರಿಕೆಗಳು ಈಡೇರಿದ ಮೇಲೆ ವೈರಾಗ್ಯಕ್ಕಾಗಿ ಗುರುವನ್ನು ಆಶ್ರಯಿಸಬೇಕೆಂಬುದು ತಪ್ಪು ತಿಳುವಳಿಕೆ. ಬೇರೆ ಉಪಾಸನೆಗಳಿಗೂ ಗುರು ಉಪಾಸನೆಗು ಇರುವ ಮುಖ್ಯ ವ್ಯತ್ಯಾಸ ಎಂದರೆ ಬೇರೆ ಉರಾಸನೆಗಳಲ್ಲಿ ನಾವು ಕೋರಿದ್ದು ಈಡೇರುತ್ತದೆ ಆದರೆ ಗುರು ಉಪಾಸನೆಯಿಂದ ನಮ್ಮ ಕೋರಿಕೆ ಈಡೇರಿಸುವುದರೊಂದಿಗೆ ಆಧ್ಯಾತ್ಮಿಕ ವಾಗಿ ಕೂಡ ನಮ್ಮನ್ನು ಬೆಳೆಸುತ್ತಾರೆ ಗುರುವು ಎಂಬುದನ್ನು ಉದಾಹರಣೆ ಯೊಂದಿಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ ಸದ್ಗುರುಗಳು.
ಜೈಗುರುದತ್ತ


Share