ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 19

914
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 19
ನಿನ್ನೆಯ ಸಂಚಿಕೆಯಲ್ಲಿ ಗೋವಿಂದ ನಾಮದ ಅರ್ಥವನ್ನು ತಿಳಿದು ಕೊಂಡೆವು. ಮುಂದೆ……
ಲಕ್ಷ್ಮಿಯು ಗೋಪಸ್ತ್ರೀಯಾಗಿ ತನ್ನ ರೂಪವನ್ನು ಬದಲಿಸಿಕೊಂಡಳು. ಇದನ್ನು ನೋಡಿದ ಶಿವ ಬ್ರಹ್ಮರು ಸಂತೋಷಗೊಂಡರು ಮತ್ತು ಅದರ ಉದ್ದೇಶವನ್ನು ಅರಿತುಕೊಂಡು ಬ್ರಹ್ಮನು ಹಸುವಾಗಿ, ಶಿವನು ಕರುವಾಗಿ ಭೂಮಿಯ ಮೇಲೆ ಇಳಿದು ಗೋಪ ಸ್ತ್ರೀಯ ಬಳಿ ಬಂದರು. ಮೂವರು ಚೋಳ ರಾಜನ ಬಳಿಗೆ ತೆರಳಿದರು. ಗೋಪಳು ತನಗೆ ಹಣದ ಅವಶ್ಯಕತೆ ಇರುವುದಾಗಿ ಹಸು ಕರುವನ್ನು ತೆಗೆದುಕೊಂಡು ಹಣ ಕೊಡುವಂತೆ ಯಾಚಿಸಿದಳು. ರಾಜನು ಅದಕ್ಕೆ ತಕ್ಕಷ್ಟು ಹಣವನ್ನು ಕೊಟ್ಟು ಗೋಪಾಲಕನಿಗೆ ಈ ಹಸುವಿನ ಹಾಲನ್ನು ತನ್ನ ಅನಾರೋಗ್ಯದ ಮಗನಿಗೆ ಕೊಡಲು ಹೇಳಿ ಕರೆದುಕೊಂಡು ಹೋಗಲು ಸೂಚಿಸಿದನು.
ಗೋಪಾಲಕನ ಬೇರೆ ಹಸುಗಳೊಂದಿಗೆ (ಶಿವ ಬ್ರಹ್ಮ) ಹಸು ಕರುವನ್ನು ಮೇಯಲು ಕರೆದುಕೊಂಡು ಹೋದನು. ಆಗ ಹಸು ರೂಪ ತಾಳಿದ ಬ್ರಹ್ಮನು ಶ್ರೀನಿವಾಸ ನಿದ್ದ ಹುತ್ತದ ತೂತಿನ ಮೇಲೆ ಸರಿಯಾಗಿ ಕೆಚ್ಚಲು ಬರುವಂತೆ ನಿಂತು ಹಾಲಿನಭಿಷೇಕ ಮಾಡಿದನು. ಇದರಿಂದ ಎಚ್ಚರಗೊಂಡ ಶ್ರೀನಿವಾಸನು ಹಾಲನ್ನು ಕುಡಿಯುತ್ತಾನೆ.
ಇಷ್ಟು ಕಥೆಯನ್ನು ಹೇಳುತ್ತಾ ಸ್ವಾಮೀಜಿಯವರು ಈ ರೀತಿ ಹಾಡಿ ಹೊಗಳುತ್ತಾರೆ ಗೋಮಾತೆಯನ್ನು,
” ಸರ್ವ ದೇವ ರೂಪಿಣಿ ಗೋಮಾತೆ
ಸರ್ವ ಕಾಮದಾಯಿನಿ ಗೋಮಾತೆ “
ಹಾ ಎಲ್ಲರೂ ಮಾಡಬೇಕಾದ ಕೆಲಸ ತಪ್ಪದೇ ವೀಕ್ಷಿಸುವುದು ಮತ್ತು ಶೇರ್ ಮಾಡುವುದು.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share