ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 23

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 23
ಇಂದಿನಿಂದ ವೆಂಕಟೇಶ್ವರ ಕಲ್ಯಾಣ ನೋಡುವವರಿಗೆಲ್ಲ ವಿಶೇಷ ಶುಭಾಶಯಗಳು. ಕಾರಣ ಶ್ರೀ ನಿವಾಸನನ್ನು ವಿಶೇಷವಾಗಿ ಪೂಜಿಸುವ ಪುಣ್ಯ ಮಾಸ. ನಾವೆಲ್ಲರೂ ಭಾಗ್ಯವಂತರೆ ಸರಿ. ಈ ಸಮಯದಲ್ಲಿ ವೆಂಕಟೇಶ್ವರ ಕಲ್ಯಾಣ ನೋಡುತ್ತಿದ್ದೇವೆ. ಎಲ್ಲರೂ ಇನ್ನಷ್ಟು ಶ್ರದ್ಧೆಯಿಂದ ನೋಡಿ ಎಲ್ಲರನ್ನೂ ನೋಡಲು ಉತ್ತೇಜಿಸಿ. ಸದ್ಯ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸೋಣ. ಲೋಕಕಲ್ಯಾಣಾರ್ಥ ಸ್ವಾಮಿಯನ್ನು ಪ್ರಾರ್ಥಿಸೋಣ.
ಇನ್ನು ಇಂದಿನ ಕಥೆಯ ಕಡೆ ಗಮನ ಹರಿಸುವ ಸಮಯ.
ವರಾಹನು ತನ್ನ ಪ್ರಾಂತದಲ್ಲಿ ತನ್ನ ಅನುಮತಿಯಿಲ್ಲದೆ ಗಿಡಗಳನ್ನು ಮುಟ್ಟುತ್ತಿರುವುದು ಯಾರು ಎಂದ ದೊಡ್ಡ ಧ್ವನಿಯಲ್ಲಿ ಕೇಳಿದಾಗ ಶ್ರೀ ನಿವಾಸನು ಗಾಬರಿಯಿಂದ ಮತ್ತೆ ಹುತ್ತ ಸೇರಿಬಿಡುತ್ತಾನೆ. ಕತ್ತಲಾಗಿದ್ದರಿಂದ ಆ ಹುತ್ತವಪ ಪ್ರಕಾಶಮಯವಾಗಿ ಕಾಣುತ್ತಿರುವುದನ್ನು ನೋಡಿ ಒಳಗೆ ಶ್ರೀ ಹರಿಯ ದರ್ಶನ ಮಾಡುತ್ತಾನೆ. ವೆಂಕಟೇಶ್ವರನನ್ನು ಹೊರಗೆ ಬಂದು ಸಂಪೂರ್ಣ ದರ್ಶನ ನೀಡಲು ಪ್ರಾರ್ಥಿಸುತ್ತಾನೆ. ವರಾಹನ ಭಕ್ತಿಗೆ ಕರಗಿ ಹೊರಬಂದು ವರಾಹನನ್ನು ಆಲಿಂಗನ ಮಾಡಿಕೊಳ್ಳುಕ್ತಾನೆ. ಸಕಲ ದೇವತೆಗಳು ಪುಷ್ಪವೃಷ್ಟಿ ಮಾಡುತ್ತಾರೆ. ವರಾಹನು ಸ್ವಾಮಿಯು ಇಲ್ಲಿರುವುದಕ್ಕೆ ಕಾರಣ ಕೇಳಿದಾಗ ಹರಿಯು ತಾನು ಲಕ್ಷ್ಮಿ ಯನ್ನರಸಿ ಬಂಗುದಾಗಿಯು ಗೋಪಾಲಕನು ತನಗೆ ಗಾಯ ಮಾಡಿದ್ದನ್ನು ವಿವರಿಸುತ್ತಾನೆ.
ಶ್ರೀ ನಿವಾಸನು ತಾನು ನೆಲೆಸಲು ಈ ಸಪ್ತಗಿರಿಯಲ್ಲಿ ಸ್ವಲ್ಪ ಜಾಗವನ್ನು ನೀಡೆಂದು ಕೇಳಲು ವರಾಹನು ಅದಕ್ಕೆ ಹಣವನ್ನಿತ್ತು ಪಡೆಯಲು ಸೂಚಿಸುತ್ತಾನೆ. ಹರಿಯು ಅದಕ್ಕೆ ಅರ್ಥಗರ್ಭಿತವಾಗಿ ತನ್ನಲ್ಲಿ ಲಕ್ಷ್ಮಿ ಇಲ್ಲವೆಂದು ಅದಕ್ಕೆ ಬದಲಾಗಿ ಮುಂದೆ ಯಾರೇ ನನ್ನ ದರ್ಶನಕ್ಕೆ ಬರಬೇಕಾದರು ಮೊದಲು ವರಾಹನನ್ನು ದರ್ಶುಸಿಯೆ ಬರಬೇಕು ಮತ್ತು ಮೊದಲ ನೈವೇದ್ಯ ವರಾಹನಿಗೆ ಆಗುತ್ತಗೆಂದು ಹೇಳುತ್ತಾನೆ.
ವರಾಹನು ತನ್ನ ಒಂದು ಕೋರಿಕೆ ಇದೆ ಎಂದು ತನದೆ ಉಣಬಡಿಸುವ ಬಕುಳಾದೇವಿಯು ಶ್ರೀ ಹರಿಯ ಬಳಿ ಇರಬೇಕೆಂದು ಹೇಳಲು ಸ್ವಾಮಿಯು ಅದಕ್ಕೆ ಒಪ್ಪಿಗೆ ಸೂಚಿಸುತ್ತಾನೆ.
ವಕುಳಾದೇವಿಗೆ ಮೊದಲಬಾರಿಗೆ ಹರಿಯನ್ನು ನೋಡಿದಾಗ ಕೃಷ್ಣನ ದರ್ಶನ ವಾಗುಚ್ತದೆ. ಶ್ರೀ ನಿವಾಸನು ವಕುಳಾದೇವಿಗೆ ಅವಳೇ ಯಶೋಧೆ ಎಂದು ಜ್ಞಾಪಿಸಿದಾಗ ವಕುಳಾದೇವಿ ತಾನು ಅಂದು ಕೇರಿದ್ದ ಎರಡು ವರಗಳನ್ನು ನೆನಪಿಸುತ್ತಾಳೆ.
ಮೊದಲನೆಯದು ಕೃಷ್ಣನ ರೂಪವನ್ನು ಮತ್ತೆ ಮತ್ತೆ ನೋಡಬೇಕೆಂದು ಮತ್ತು ಶ್ರೀ ನಿವಾಸನ ಕಲ್ಯಾಣ ವನ್ನು ನೋಡಬೇಕೆಂಬ ಬಯಕೆಯನ್ನು ಈಡೇರಿಸಬೇಕೆಂದು ಕೋರುತ್ತಾಳೆ.
ಹೀಗೆ ಅತಿ ಮುಖ್ಯ ಘಟ್ಟದಲ್ಲಿ ನಿಲ್ಲಿಸಿದ್ದಾರೆ ಶ್ರೀ ಸ್ವಾಮೀಜಿ ಯವರು ಇಂದಿನ ಸಂಚಿಕೆಯಲ್ಲಿ. ಇಂದಿನ ಮುಖ್ಯ ಭಜನೆ
” ಓಂ ನಮೋ ನಾರಾಯಣ ಕೃಷ್ಣ “
ಎಲ್ಲರ ಮನಗೆಲ್ಲುವ ಭಜನೆ. ಕೇಳಲೇ ಬೇಕಾದ ಭಜನೆ.

( ಸಶೇಷ )

*ಭಾಲರಾ
ಬೆಂಗಳೂರು

ಜೈಗುರುದತ್ತ.


Share