ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳ ಶ್ರೀ ಪಾದ ಶ್ರೀ ವಲ್ಲಭರ ಚರಿತ್ರೆ ಪುಟ-23

Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 3

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 23

ಚಿದಂಬರಂ ಹತ್ತಿರ ಒಬ್ಬ ಸಿದ್ಧ ಮಹಾತ್ಮರು ಇರುವರೆಂದು ಕೇಳಿ, ಅಲ್ಲಿನ ಬೆಟ್ಟದ ಕಣಿವೆಯಲ್ಲಿ ಏಕಾಂತವಾಗಿ ಇದ್ದ ವೃದ್ಧ ತಪಸ್ವಿಗಳಾದ ಶ್ರೀ ಪಳನಿಸ್ವಾಮಿಗಳ ಹತ್ತಿರ ಹೋದೆವು. ನಾವು ಅವರ ಗುಹೆಯ ದ್ವಾರವನ್ನು ತಲುಪುತ್ತಿರುವಾಗಲೇ ಅವರು ನಮ್ಮನ್ನು ನೋಡಿ, ” ಮಾಧವ ಶಂಕರರು ಇಬ್ಬರೂ ಒಟ್ಟಿಗೆ ಬರುತ್ತಿದ್ದೀರಲ್ಲಾ ! ಎಂಥಾ ಭಾಗ್ಯ” ಎಂದು ಹೇಳಿದರು. ನಾವು ನಮ್ಮ ಪರಿಚಯವನ್ನು ಹೇಳಿಕೊಳ್ಳುವುದಕ್ಕೆ ಮೊದಲೇ ಅವರು ನಮ್ಮ ಹೆಸರುಗಳನ್ನು ಹೇಳಿದ್ದರಿಂದ ಅವರು ನಿಜವಾಗಿಯೂ ಸಿದ್ಧಪುರುಷರೆಂದು ನಾವು ಗ್ರಹಿಸಿದೆವು. ಕರುಣಾಪೂರಿತರಾದ ಅವರು, ” ಮಗೂ ! ಶ್ರೀಪಾದವಲ್ಲಭರ ಆಜ್ಞಾನುಸಾರವಾಗಿ ನಾನು ಈ ದೇಹವನ್ನು ತ್ಯಜಿಸಿ ಬೇರೊಂದು ಯೌವ್ವನ ದೇಹವನ್ನು ಪ್ರವೇಶಿಸುವ ಸಮಯ ಸನ್ನಿಹಿತವಾಗಿದೆ. ಈಗ ಈ ಶರೀರದ ವಯಸ್ಸು 300 ವರ್ಷಗಳು ಶಿಥಿಲವಾಗಿರುವ ಈ ದೇಹವನ್ನು ತ್ಯಜಿಸಿ ಹೊಸ ಶರೀರದಲ್ಲಿ ಮತ್ತೆ 300 ವರ್ಷಗಳು ಇರಬೇಕೆಂದು ಶ್ರೀಪಾದವಲ್ಲಭರ ಆಜ್ಞೆ. ಜೀವನ್ಮುಕ್ತರಾದವರು, ಜನನ ಮರಣ ರೂಪದ ಸೃಷ್ಟಿಕ್ರಮವನ್ನು ದಾಟಿರುವವರು ಕೂಡ, ಶ್ರೀಪಾದವಲ್ಲಭರು ತಿರುಗಿ ಹುಟ್ಟಿ ಬನ್ನಿರೆಂದು ಆಜ್ಞಾಪಿಸಿದರೆ, ಅವರೂ ಆಜ್ಞೆಯನ್ನು ನೆರವೇರಿಸಬೇಕಾದದ್ದೆ. ಸಮಸ್ತ ಸೃಷ್ಟಿಯನ್ನು ನಡೆಸುತ್ತಿರುವ ಮಹಾಸಂಕಲ್ಪವೇ ಶ್ರೀಪಾದವಲ್ಲಭರ ರೂಪದಲ್ಲಿ ಅವತರಿಸಿದೆ. ಅವರ ಅವತರಣವು ಉನ್ನತವಾದ ಸೂಕ್ಷಲೋಕಗಳಲ್ಲಿ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಅವರು ನರರೂಪಧರಿಸಿ ಬರುವುದು ನಮ್ಮೆಲ್ಲರ ಸುಕೃತ. ಅವರದು ಯೋಗ ಸಂಪೂರ್ಣ ಅವತಾರ. ಅವರ ಅಂಶಾವತಾರಗಳು ಯಾವಾಗಲೂ ಈ ಭೂಮಿಯ ಮೇಲೆ ಭಕ್ತರಕ್ಷಣಾರ್ಥವಾಗಿ ಅವತರಿಸುತ್ತಲೇ ಇರುತ್ತದೆ. ಮಗೂ !! ಶಂಕರ ! ನೀನು ವಿಚಿತ್ರಪುರದಲ್ಲಿ ಕಾಣಾದ ಮಹರ್ಷಿಗಳ ಕಣ ಸಿದ್ಧಾಂತವನ್ನು ಕುರಿತು ಹೇಳಿದೆಯಲ್ಲ ಅದನ್ನು ಸ್ವಲ್ಪ ವಿವರಿಸು ” ಎಂದು ಹೇಳಿದರು.

ಕಾಣಾದ ಮಹರ್ಷಿಗಳ ಕಣ ಸಿದ್ದಾಂತ

ನಾನು, ” ಸ್ವಾಮಿ ! ನನ್ನನ್ನು ಕ್ಷಮಿಸಿರಿ, ಕಾಣಾದ ಮಹರ್ಷಿಗಳನ್ನು ಕುರಿತಾಗಲಿ ಅವರ ಕಣ ಸಿದ್ದಾಂತವನ್ನು ಕುರಿತಾಗಲಿ ನನಗೆ ತಿಳಿದಿರುವುದು ಅತ್ಯಂತ ಸ್ವಲ್ಪ ನಾನು ಆ ದಿನ ಅಲ್ಲಿ ಹೇಳಿದ್ದು ಕೂಡ ಅಪ್ರಯತ್ನವಾಗಿ ನನ್ನ ಬಾಯಿಂದ ಹೇಳಿಸಲ್ಪಟ್ಟಿತು ಎಂಬ ವಿಷಯವು ನಿಮಗೆ ತಿಳಿದೇ ಇದೆ ” ಎಂದು ಹೇಳಿದೆನು. ಕರುಣಾಸ್ವರೂಪರಾದ ಪಳನಿಸ್ವಾಮಿಗಳು , “ ಸಮಸ್ತ ಸೃಷ್ಟಿಯೂ ಸಹ ಅತಿಸೂಕ್ಷ್ಮವಾದ ಪರಮಾಣುಗಳಿಂದಲೇ ನಿರ್ಮಿಸಲ್ಪಟ್ಟಿದೆ. ಅಂತಹ ಪರಮಾಣುಗಳಿಗಿಂತ ಸೂಕ್ಷ್ಮವಾದ ಕಣಗಳು ಇರುವುದರಿಂದಲೇ ವಿದ್ಯುತ್ತಿನ ಅಲೆಗಳು ಉದ್ಭವಿಸುತ್ತವೆ . ಸೂರ್ಯನ ಸುತ್ತಲೂ ಗ್ರಹಗಳು ತಮ್ಮ ತಮ್ಮ ಕಕ್ಷೆಗಳಲ್ಲಿ ಸುತ್ತುತ್ತಿರುವಂತೆ ಸ್ಥೂಲವಾದ ಈ ಸೂಕ್ಷ್ಮಕಣಗಳು ಕೂಡ ತಮ್ಮ ಕೇಂದ್ರಬಿಂದುವನ್ನು ಅನುಸರಿಸಿ ಮಹಾವೇಗದಲ್ಲಿ ತಮ್ಮ ತಮ್ಮ ಕಕ್ಷೆಗಳಲ್ಲಿ ಸುತ್ತುತ್ತಿರುತ್ತವೆ. ಈ ಸೂಕ್ಷ್ಮಕಣಗಳಿಗಿಂತ ಸೂಕ್ಷ್ಮವಾದ ಸ್ಥಿತಿಯಲ್ಲಿ ಜೀವಿಗಳ ಭಾವೋದ್ವೇಗಗಳ ಸ್ಪಂದನೆಗಳು ಇರುತ್ತವೆ. ಸ್ಪಂದನ ಸ್ವಭಾವದಿಂದ ಕೂಡಿದ ಈ ಜಗತ್ತಿನಲ್ಲಿ ಯಾವುದೂ ಕೂಡ ಸ್ಥಿರವಾಗಿರಲು ಸಾಧ್ಯವೇ ಇಲ್ಲ, ಚಂಚಲತ್ವವೇ ಇದರ ಸ್ವಭಾವ. ಕ್ಷಣ ಕ್ಷಣವೂ ಬದಲಾಯಿಸುತ್ತಿರುವುದೇ ಇದರ ಸ್ವಭಾವ. ಈ ಸ್ಪಂದನಗಳಿಗಿಂತ ಸೂಕ್ಷ್ಮವಾದ ಸ್ಥಿತಿಯಲ್ಲಿ ದತ್ತ ಪ್ರಭುಗಳ ಚೈತನ್ಯವು ಇರುತ್ತದೆ. ಅವರ ಅನುಗ್ರಹವನ್ನು ಪಡೆಯುವುದು ಎಷ್ಟು ಸುಲಭ ಸಾಧ್ಯವೋ ಅಷ್ಟೇ ಕಷ್ಟ ಸಾಧ್ಯವೂ. ಪ್ರತಿಯೊಂದು ಕಣವನ್ನೂ ಅನಂತ ಸೂಕ್ಷ್ಮಕಣಗಳನ್ನಾಗಿ ವಿಭಜಿಸುತ್ತಾ ಹೋದರೆ ಆ ಒಂದೊಂದು ಕಣ ಭಾಗವೂ ಶೂನ್ಯ ಸಮಾನವಾಗುವುದು, ಅನಂತ ಮಹಾಶೂನ್ಯಗಳ ಸಮಾಗಮದ ಫಲವಾಗಿ ಈ ಚರಾಚರ ಸೃಷ್ಟಿಯು ಆಗಿದೆ. ಯಾವುದೇ ಒಂದು ಪದಾರ್ಥವು ಸೃಷ್ಟಿಯಾದರೆ ಅದಕ್ಕೆ ಅತ್ಯಂತ ಭಿನ್ನವಾದ, ಅತಿವಿರೋಧವಾದ ಬೇರೆ ಪದಾರ್ಥವು ಕೂಡ ಸೃಷ್ಟಿಯಾಗಿಯೇ ತೀರುವುದು. ಇವೆರಡೂ ಒಂದು ಗೂಡಿದಾಗ ವಿರೋಧ ಪದಾರ್ಥವು ನಶಿಸಿ ಹೋಗುತ್ತದೆ. ಪದಾರ್ಥವು ತನ್ನ ಗುಣಗಳ ಸಮೂಹವನ್ನು ಬದಲಾಯಿಸಿಕೊಳ್ಳಬಹುದು. ಅರ್ಚಾವತಾರದ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠೆ ಮಾಡಿದಾಗ ಆ ಮೂರ್ತಿಗಳು ಚೈತನ್ಯಯುಕ್ತವಾಗುತ್ತವೆ. ಅದರಿಂದಲೇ ಅವು ಭಕ್ತರ ಮನೋಭಿಷ್ಟಗಳನ್ನು ನೆರವೇರಿಸಿಕೊಡುವ ಸಾಮರ್ಥ್ಯವನ್ನು ಪಡೆಯುತ್ತವೆ. ಸರ್ವ ಮಂತ್ರಗಳೂ ಕುಂಡಲಿಯಲ್ಲಿಯೇ ಇರುತ್ತದೆ. ಗಾಯಿತ್ರಿಯು ಕೂಡ ಅದರಿಂದಲೇ ಮೂಡಿ ಬಂದಿತು ಗಾಯತ್ರಿಯ ಮಂತ್ರಕ್ಕೆ ಮೂರು ಪಾದಗಳಿರುವುದೆಂದು ಎಲ್ಲರೂ ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಗಾಯತ್ರಿ ಮಂತ್ರದ ನಾಲ್ಕನೆಯ ಪಾದವು, ‘ ಪರೋರ ಜಸಿ ಸಾವದೋಮ್ ‘ ಎಂದು ಇದೆ. ಚತುಷ್ಪಾದ ಗಾಯತ್ರಿಯು ನಿರ್ಗುಣ ಬ್ರಹ್ಮ ವಸ್ತುವನ್ನು ಸೂಚಿಸುತ್ತದೆ. ಕುಂಡಲಿನಿ ಶಕ್ತಿಯು 24 ತತ್ವಗಳಿಂದ ಈ ಜಗತ್ತುಗಳನ್ನು ಸೃಷ್ಟಿ ಮಾಡುತ್ತದೆ. ಗಾಯತ್ರಿಯಲ್ಲಿ ಕೂಡ 24 ಅಕ್ಷರಗಳು ಇವೆ. 24 ಅನ್ನುವ ಸಂಖ್ಯೆಗೆ ಗೋಕುಲವೆಂದು ಕೂಡ ಹೆಸರಿದ, ‘ ಗೋ ‘ ಎಂದರೆ ಎರಡು, ‘ ಕುಲ’ವೆಂದರೆ 4 , ಬ್ರಹ್ಮ ಸ್ವರೂಪವು ಎಲ್ಲ ರೀತಿಯ ಬದಲಾವಣೆಗೂ ಅತೀತವಾದ್ದರಿಂದ ಅದನ್ನು ಸಂಖ್ಯೆ 9 ರಿಂದ ಸೂಚಿಸುತ್ತಾರೆ. 8 ಎಂಬುವುದು ಮಹಾಮಾಯಾ ಸ್ವರೂಪವು, ಶ್ರೀಪಾದ ಶ್ರೀವಲ್ಲಭರು ತನಗೆ ಇಷ್ಟವಾದವರಿಂದ ‘ ದೋ ಚೌಪಾತಿದೇವ್ ಲಕ್ಷ್ಮಿ ‘ ಎಂದು ಕೇಳುತ್ತಿದ್ದರು. ಎಲ್ಲ ಜೀವಿಗಳಿಗೂ ಪರಬ್ರಹ್ಮವೇ ಪತಿಸ್ವರೂಪವಾಗಿರುವುದರಿಂದ ಪತಿದೇವ್ ಅನ್ನುವುದು ಸಂಖ್ಯೆ 9 ನ್ನೂ , ಲಕ್ಷ್ಮಿ ಅನ್ನುವುದು ಸಂಖ್ಯೆ 8 ನ್ನೂ , ‘ ದೋ ‘ ಅನ್ನುವುದು ಸಂಖ್ಯೆ 2 ನ್ನೂ , ‘ ಚೌ’ ಅನ್ನುವುದು ಸಂಖ್ಯೆ 4 ನ್ನೂ , ಸೂಚಿಸುತ್ತದೆ. ‘ ದೋಚಪಾತಿ ದೇವ್ ಲಕ್ಷ್ಮಿ’ ಎಂದು ಹೇಳುವುದಕ್ಕೆ ಬದಲಾಗಿ ವಿಚಿತ್ರವಾದ ಅಪಭ್ರಂಶರೂಪಮಾಡಿ ‘ ದೋ ಚೌಪಾತಿ ದೇವ್ ಲಕ್ಷ್ಮಿ’ ಎಂದು ಹೇಳುತ್ತಾ ಜೀವಿಗಳಿಗೆ 2 , 4 , 9 , 8 ಸಂಖ್ಯೆಗಳ ಮಹತ್ವವನ್ನು ಗುರ್ತು ಮಾಡಿ ಕೊಡುತ್ತಿದ್ದರು. ಗೋಕುಲದಲ್ಲಿ ಪರಬ್ರಹ್ಮವು ಪರಾಶಕ್ತಿಯಾದ ಶ್ರೀಪಾದ ಶ್ರೀವಲ್ಲಭ ರೂಪದಲ್ಲಿಯೇ ಇದೆ. ಶ್ರೀಕೃಷ್ಣ ಪರಮಾತ್ಮನೇ ಶ್ರೀವಲ್ಲಭರೆಂದು ತಿಳಿದುಕೋ. ಗಾಯತ್ರಿ ಮಂತ್ರ ಸ್ವರೂಪವು ಅವರ ನಿರ್ಗುಣ ಪಾದುಕೆಗಳನ್ನು ಗುರುತು ಮಾಡಿಕೊಡುತ್ತದೆ.
( ಮುಂದುವರೆಯುವುದು )

ಕೃಪೆ – ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 24

ಕಸ ತಿಂದಿ ರಸ ಕೊಡುವ ಪುಣ್ಯಕೋಟಿ ಗೋಮಾತೆ.
ರಸ ತಿಂದು ಕಸ ಕೊಡುವ ಹೀನ ಮನುಜ.
ಕಸವ ರಸವಾಗಿಸುವ ರಸವಿದ್ಯೆ ತಿಳಿಯದವ
ಮಂದಮತಿ ಮಾನವ – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share