ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ 7

1030
Share

ಶ್ರೀ ಗುರು ಗೀತ – ಭಾಗ 7
ಗುರುವನ್ನು ಏಕೆ ಧ್ಯಾನಿಸಬೇಕು?
ಪ್ರಶಾಂತನು, ಪ್ರತ್ಯಕ್ಷ ಶಿವರೂಪಿಯಾದ ಗುರುವನ್ನು ಮೋಕ್ಷ ಸಿದ್ಧಿಗಾಗಿ ಧ್ಯಾನಿಸಬೇಕು. ಎಲ್ಲಾ ಆಸೆಗೂ ಒಂದು ಅಂತ್ಯ ಎಂಬುದು ಇದ್ದೇ ಇರುತ್ತದೆ. ಎಲ್ಲಾ ಆಸೆ ಈಡೇರಿದ ಮೇಲೆ ಕಡೆಯ ಆಸೆಯೆ ಮೋಕ್ಷ. ಇದೇ ಮೂಲ ಆಸೆ. ಇದನ್ನು ಪಡೆಯಲು ಗುರುವನ್ನು ಧ್ಯಾನಿಸಬೇಕು.
ಪ್ರತಿನಿತ್ಯ ನಿದ್ದೆಯಿಂದ ಎದ್ದ ತಕ್ಷಣ ತಮ್ಮ ಶಿರಸ್ಸಿನ ಸಹಸ್ರಾರದ ಕಮಲದಲ್ಲಿ ಗುರುವನ್ನು ಮನೋನೋತ್ರದಲ್ಲಿ ನೋಡುತ್ತ ಧ್ಯಾನಿಸಬೇಕು. ನಮ್ಮ ಒಳಗಿನ ಹಾಗೂ ಹೊರಗಿನ ಮಾಲಿನ್ಯಗಳು ತೊಳೆಯುತ್ತಿರುವಂತೆ ಭಾವಿಸಬೇಕು. ಇದರಿಂದ ಸ್ಥೂಲ ಸೂಕ್ಷ್ಮ ಶರೀರಗಳು ಪವಿತ್ರಗೊಳ್ಳುತ್ತದೆ.
ಗುರುವಿನ ಮುಖ ದರ್ಶನದಿಂದ ಸಕಲ ವೇದಗಳನ್ನು ಪಾರಾಯಣ ಮಾಡಿದ ಫಲವು ದೊರಕುತ್ತದೆ. ಗುರುವಿನ ಅನುಗ್ರಹದಿಂದ ಹೇಗೆ ಕಬ್ಬಿಣವು ಚಿನ್ನವಾಗುತ್ತದೆ, ಮೂರ್ಖನು ಪಂಡಿತನಾಗುತ್ತಾನೆ, ವಿಷವೂ ಅಮೃತವಾಗುತ್ತದೆ
ಎಂಬುದನ್ನು ಕಥೆಯೊಂದಿಗೆ ಪರಮ ಪೂಜ್ಯ ಸ್ವಾಮೀಜಿ ಯವರು ಈ ಸಂಚಿಕೆಯಲ್ಲಿ ವಿವರಿಸಿದ್ದಾರೆ.
ಜೈಗುರುದತ್ತ


Share