ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳ ಭಾಗ 18

864
Share

ಶ್ರೀ ಗುರು ಗೀತ – ಭಾಗ 18
ಗುರು ಶುಶ್ರೂಶೆ ಮಾಡುವಾಗ ತುಂಬಾ ಜಾಗ್ರತರಾಗಿರಬೇಕು. 330 ಕೋಟಿ ದೇವತೆಗಳಿಗೂ ಇದರ ಅರಿವಿಲ್ಲ. ತಪಸ್ಸು, ವಿದ್ಯೆ, ಬಲವಿದೆ ಎಂಬ ಅಹಂಕಾರದಿಂದ ಕೂಡಿರುವವರು ಸಂಸಾರವೆಂಬ ಕೂಪದಲ್ಲಿ ಮತ್ತೆ ಮತ್ತೆ ಬೀಳುತ್ತಿದ್ದಾರೆ.
ಶ್ರೀ ಮತ್ಪರಬ್ರಹ್ಮ ಗುರುವನ್ನು ಸ್ಮರಿಸುತ್ತಿದ್ದೇನೆ, ಭಜಿಸುತ್ತಿದ್ದೇನೆ, ನಮಸ್ಕರಿಸುತ್ತಿದ್ದೇನೆ ಎಂಬ ಭಾವನೆ ದಿಲೀಪ ಚಕ್ರವರ್ತಿ ರೋಮ ರೋಮದಲ್ಲೂ ಇತ್ತು.
ಆನಂದ ಸ್ವರೂಪನೂ, ಆನಂದದಾಯಕನೂ, ಸಂಸಾರವೆಂಬ ರೋಗಕ್ಕೆ ವೈದ್ಯನು ಆದ ಗುರುವಿಗೆ ನಮಸ್ಕಾರ. ಇದಕ್ಕೆ ಉದಾಹರಣೆಗೆ ಅತಿ ಸ್ವಾರಸ್ಯಕರ ಕಥೆಯೂಂದನ್ನು ವರ್ಣಿಸಿದ್ದಾರೆ.
ನಿತ್ಯನೂ, ನಿರ್ಮಲನೂ, ನಿರ್ವಿಕಾರನೂ, ನಿತ್ಯಬೋದನೂ ಆದ ಗುರುವಿಗೆ ನಮಸ್ಕಾರ.
ಸತ್ ಚಿತ್ ಆನಂದ ಕೊಡುವ ಗುರುವಿಗೆ ನಮಸ್ಕಾರ.
ಶ್ವೇತ ವಸ್ತ್ರ ಧರಿಸಿ, ಬಿಳಿ ಗಂಧ, ಬಿಳಿ ಹೂವು, ಬಿಳಿಯ ಮುತ್ತಿನ ಆಭರಣ ಧರಿಸಿರುವಂತೆ ಭಾವಿಸಿ ಗುರುವನ್ನು ಸ್ಮರಿಸಬೇಕು. ಕಾಶಾಯ ವಸ್ತ್ರ ತ್ಯಾಗ ಮತ್ತು ಧರ್ಮದ ಸಂಕೇತ, ಬಿಳಿಯು ಮೄದು ಮದುರ ಧರ್ಮದ ಸೂಚಕ, ಹೀಗೆ ಅಲಂಕಾರವೆಲ್ಲವೂ ಬೆಳ್ಳಗಿರುವುದು ಜ್ಞಾನ ಕೊಡುತ್ತಿರುವ ಸಂಕೇತ.
ಸೃಷ್ಟಿ, ಸ್ಥಿತಿ, ಲಯ, ಆಗ್ರಹ, ಅನುಗ್ರಹ ಯಾರಿಂದ ಭಾಸವಾಗುತ್ತದೆಯೋ ಅಂತಹ ಗುರುವಿಗೆ ನಮಸ್ಕಾರ. ಗುರುವಿಗೆ ಅಧಿಕವಾದುದು ಇಲ್ಲ ಎಂಬುದು ಶಿವಶಾಸನ ಎಂದು ಸ್ವಾಮೀಜಿ ಯವರು ಶಾಸನವಾಗಿ ತಿಳಿಸಿದ್ದಾರೆ ಇಂದಿನ ಸಂಚಿಕೆಯಲ್ಲಿ.
ಜೈಗುರುದತ್ತ


Share