ಮೈಸೂರು ಪತ್ರಿಕೆ ಅಧ್ಯಾತ್ಮ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-1 ಇಂದಿನಿಂದ ಪ್ರಾರಂಭ

1761
Share

ಸಾಮಾನ್ಯವಾಗಿ ಆಷಾಡ, ಶ್ರಾವಣ ಮಾಸ ಎಂದರೆ ಒಂದು ರೀತಿಯ ಸಡಗರ ಸಂಭ್ರಮದ ದಿನಗಳು. ಹಬ್ಬ ಸಾಲು ಆರಂಭವಾಗುತ್ತದೆ, ಪೂಜೆ ಪುನಸ್ಕಾರಗಳು, ಮದುವೆ ಸಮಾರಂಭಗಳು ಒಂದರ ಹಿಂದೆ ಒಂದು ಸಾಲಾಗಿ ಬರುತ್ತಿರುತ್ತವೆ. ಹೊಸ ಬಟ್ಟೆ, ಆಭರಣ ಕಣ್ಣಿಗೆ ಬೇಕಾದ್ದು ಖರೀದಿಸುತ್ತಿರ ಬೇಕೆನಿಸುತ್ತಿರುತ್ತದೆ. ಇನ್ನು ಇದಕ್ಕೆ ಮುನ್ನ ಬೇಸಿಗೆ ರಜೆಯಲ್ಲಿ ತೀರ್ಥ ಕ್ಷೇತ್ರಗಳು, ಪ್ರಾಕೃತಿಕ ಸೌಂದರ್ಯ ವನ್ನು ಸವೆಯಲು ಬೇರೆ ಬೇರೆ ಊರುಗಳಿಗೆ ಹೋಗಿ ಮನ ಮುದಗೊಳಿಸಲು ಸರಿಯಾದ ಸಮಯ. ಆದರೆ ಈ ಭಾರಿ ಎಲ್ಲಿ ನೋಡಿದರು
‘ಕೊರೋನ ಕೊರೋನ ಕೊರೋನ’
ಭಯ, ಆತಂಕ, ಬೇಸರದಿಂದ ಕಳೆಯುತ್ತಾ ಇದ್ದೇವೆ.
ಈಗ ಇದನ್ನೆಲ್ಲಾ ಪಡೆದುಕೊಳ್ಳುವುದಷ್ಟೆ ಅಲ್ಲದೆ ದೇವರ ವಿಶೇಷ ಆಶಿರ್ವಾದವನ್ನು ಪಡೆದುಕೊಳ್ಳಲು ಒಂದು ಸದವಕಾಶ ಸಿಗುತ್ತಿದೆ. ಅದೇನೆಂದರೆ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ’ಶ್ರೀ ವೆಂಕಟೇಶ್ವರ ಕಲ್ಯಾಣ” ಪ್ರವಚನ ನಿತ್ಯವೂ ತಪ್ಪದೇ ಕೇಳುವುದು. ಇದರಿಂದ ವೈಕುಂಠ, ಕೈಲಾಸಗಳನ್ನು ಮೊದಲುಗೊಂಡು ಎಲ್ಲಾ ತೀರ್ಥ ಕ್ಷೇತ್ರಗಳಿಗೂ ಮಾನಸಿಕವಾಗಿ ಯಾತ್ರೆ ಮಾಡಿಸುತ್ತಾರೆ. ಶ್ರೀನಿವಾಸನ ಕಲ್ಯಾಣದ ಸಡಗರ ಸಂಭ್ರಮಕ್ಕೆ ಎಲ್ಲೆಯೇ ಇರುವುದಿಲ್ಲ. ನಿತ್ಯವೂ ಹಬ್ಬ, ಪೂಜೆ ವ್ರತಾದಿಗಳನ್ನು ಮಾಡಿದ ಪುಣ್ಯಗಳು. ಇನ್ನೇನು ಬೇಕು ಇಷ್ಟು ಸಾಕಲ್ಲವೇ ಈ ಕೊರೋನ ವಾತಾವರಣದಿಂದ ಹೊರಬರಲು? ಸರಿಯಾಗಿ ಉಪಯೋಗಿಸಿಕೊಳ್ಳೋಣ ಈ ಸಂದರ್ಭವನ್ನು. ಕಾಲಹರಣಕ್ಕೆ ಏನೋ ಬೇಡದ ಕೆಲಸಗಳಲ್ಲಿ ತೊಡಗುವುದಕ್ಕಿಂತ ಕಾಲದ ಸದುಪಯೋಗ ಪಡಿಸಿಕೊಳ್ಳೋಣ, ಪುಣ್ಯ ಸಂಪಾದಿಕೊಳ್ಳೋಣ.
ಮತ್ತೆ ತಡವೇಕೆ ತಪ್ಪದೇ ದಿನ ನಿತ್ಯ ಮೈಸೂರು ಪತ್ರಿಕೆಯಲ್ಲಿ’ ಶ್ರೀ ವೆಂಕಟೇಶ್ವರ ಕಲ್ಯಾಣ’ ವನ್ನು ತಪ್ಪದೇ ವೀಕ್ಷಿಸಿ, ನಿಮ್ಮ ಬಂಧು ಬಾಂಧವರಿಗೂ ತಪ್ಪದೇ ನೋಡಲು ಹೇಳಿ, ಸದ್ಗುರು ಹಾಗೂ ಶ್ರೀನಿವಾಸನ ಕೃಪೆಗೆ ಪಾತ್ರರಾಗಿ.
ಜೈಗುರುದತ್ತ

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 1
ಗಣಪತಿಯ ಪ್ರಾರ್ಥನೆ ಯೊಂದಿಗೆ ಮೊದಲ ಸಂಚಿಕೆ ಆರಂಭವಾಯಿತು. ಸಕಲ ಕಾಮನೆಗಳನ್ನು ಪೂರ್ತಿಗೊಳಿಸುವವನು ಏಕದಂತನು. ಸಕಲ ವಿಘ್ನಗಳನ್ನು ನಿವಾರಿಸೆಂದು ವಿನಾಯಕನನ್ನು ಪ್ರಾರ್ಥಿಸಬೇಕು.
ಭಗವಂತನೆಲ್ಲಿದ್ದಾನೆ ಎಂಬ ಪ್ರಶ್ನೆಯ ಉತ್ತರಕ್ಕೆ ವೇದ, ಉಪನಿಷತ್ತುಗಳನ್ನೆ ಓದಬೇಕಿಲ್ಲ, ಯಾವ ಸಿದ್ಧಾಂತವನ್ನು ನಿರೂಪಿಸಬೇಕಿಲ್ಲ, ಒಮ್ಮೆ ತಿರುಪತಿ ಕಡೆ ಕೈತೋರಿ ವೆಂಕಟರಮಣನನ್ನು ದರ್ಶನ ಮಾಡಿದರೆ ಸಾಕು ಆ ಒಂದು ಚಿತ್ರವು ಮನದಲ್ಲಿ ಮೂಡಿಬಿಡುತ್ತದೆ. ಭಗವಂತನ ದರ್ಶನವಾಗುತ್ತದೆ.
ವೆಂಕಟರಮಣನು ಕಲಿಯುಗದ ಪ್ರತ್ಯಕ್ಷ ದೈವ. ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ವೆಂಕಟರಮಣ ಒಬ್ಬನೇ ಎಂದು ಘಂಟಾಗೋಷವಾಗಿ ಹೇಳಬಹುದು. ನಿರ್ಗುಣನಾಗಿ, ಸಗುಣವಾಗಿ ರೂಪಾತೀತನಾಗಿರುವನು ವೆಂಕಟರಮಣ. ಅವನದು ಜ್ಯೋತಿ ಸ್ವರೂಪ. ಎಲ್ಲರಿಗೂ ಅರ್ಥವಾಗಲು ಒಂದು ನಿರ್ದಿಷ್ಟ ರೂಪವನ್ನು ತೆಗೆದುಕೊಂಡಿರುವ ಶಂಖ ಚಕ್ರಗಳಿಲ್ಲದ ವಿಷ್ಣು ಮೂರ್ತಿ, ಢಕ್ಕ ಡಮರುಗ ಇಲ್ಲದ ಸಾಂಬಮೂರ್ತಿ. ಸಕರ ರೂಪಗಳಲ್ಲೂ ವಿಹರಿಸುತ್ತಾನೆ.ಸಾಧಾರಣ ಮನುಷ್ಯನೇ ಒಂದು ನಿಯಮಗಳನ್ನು ಇಟ್ಟುಕೊಂಡಿರುತ್ತಾನೆ. ಮತ್ತೆ ಸಾಕ್ಷಾತ್ ಪರಮಾತ್ಮನು ಸೃಷ್ಟಿಯಲ್ಲಿ ಬರಬೇಕಾದರೆ ಇನ್ನೆಷ್ಟು ವ್ಯವಸ್ಥಿತವಾಗಿ ಬರಬೇಕಲ್ಲವೆ?
ಅಂತಹ ಪರಮಾತ್ಮನನ್ನು ವೇದಗಳು ಗೋವಿಂದ ಎಂದು ಕರೆಯುತ್ತಾರೆ, ಕರಗದಷ್ಟು ಜ್ಞಾನೈಶ್ವರ್ಯವು ಇರುವುದರಿಂದ ಶ್ರೀನಿವಾಸ ಎಂದು ಕರೆಯುತ್ತಾರೆ, ಸಕಲ ಸಂಪತ್ತುಗಳು ಇರುವವನ್ನಾದ್ದರಿಂದ ವೆಂಕಟೇಶನು. ಇವನು ಸಕಲ ಸಂಕಟಗಳನ್ನು ಧೂಳಿಪಟಮಾಡುತ್ತಾನೆ.
ಅಂತಹ ಮಹಿಮಾನ್ವಿತನನ್ನು ವೆಂಕಟೇಶ, ಆಪತ್ಬಾಂದವ, ದತ್ತ ಪೀಠವಾಸ ಗೋವಿಂದ ಗೋವಿಂದ ಎಂದು ವೈಕುಂಠ ಬಿಟ್ಟು ಭೂಲೋಕದಲ್ಲಿ ನೆಲೆಸಿರುವ ವೆಂಕಟರಮಣನನ್ನು ಕೀರ್ತಿಸಿದರು ಶ್ರೀ ಸ್ವಾಮೀಜಿ ಯವರು ಇಂದಿನ ಸಂಚಿಕೆಯಲ್ಲಿ.
(ಸಶೇಷ)
-ಭಾಲರಾ,
ಬೆಂಗಳೂರು.
ಜೈಗುರುದತ್ತ


Share