ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಣ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-3.

1148
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 3
ನಿನ್ನೆಯ ಸಂಚಿಕೆಯಲ್ಲಿ 3 ಯುಗಗಳ ಅವತಾರವನ್ನು ಕೇಳಿ ನಾಲ್ಕನೆಯ ಅವತಾರದ ವಿವರಿಸಲು ಆರಂಭಿಸಿದ್ದರು. ಇಂದು-
ಬ್ರಹ್ಮನು ವರಾಹನನ್ನು ಭೂಮಿಯಲ್ಲೆ ನೆಲೆಸಲು ಪ್ರಾರ್ಥಿಸಿದಾಗ ವರಾಹ ಸ್ವಾಮಿಯು ಒಪ್ಪಿಗೆ ಸೂಚಿಸುತ್ತಾನೆ. ಗರುಕಮಂತನು ವೈಕುಂಠದಿಂದ ಒಂದು ಸಣ್ಣ ಬೆಟ್ಟವನ್ನು ತಂದು ಭೂಲೋಕದಲ್ಲಿ ಪ್ರತಿಷ್ಟಾಪಿಸಿ ವರಾಹನು ಅಲ್ಲಿ ನೆಲೆಸುತ್ತಾನೆ. ಅಂದಿನಿಂದ ಶ್ರೀ ಹರಿಯು ವರಾಹನ ರೂಪದಲ್ಲಿ ಭೂಮಿಯ ಮೇಲೆ ಚಲಿಸುತ್ತಾನೆ. ಅದೇ ವೆಂಕಟಾದ್ರಿ ಬೆಟ್ಟ. ಈ ಬೆಟ್ಟದಲ್ಲಿ ಪುಷ್ಕರಿಣಿ ಒಂದಿದ್ದು ವರಾಹ ಸ್ವಾಮಿಯು ಇಲ್ಲಿ ಜಲಾಧಿವಾಸಿಯಾಗಿದ್ದಾನೆ.ವರಾಹ ಸ್ವಾಮಿಯನ್ನು ದರ್ಶಿಸಿದ ಮೇಲೆ ಶ್ರೀನಿವಾಸನನ್ನು ದರ್ಶಿಸಬೇಕು.
ವರಾಹಸ್ವಾಮಿಯ ಬಗ್ಗೆ ಎರೆಡು ಕಥೆಗಳಿವೆ. ಬ್ರಹ್ಮ ಪುರಾಣದ ಪ್ರಕಾರ ವರಾಹ ಸ್ವಾಮಿಯು ಸೂಕ್ಷ್ಮ ರೂಪದಲ್ಲಿ ನೆಲೆಸಿದ್ದು ಆಗಾಗ ದರ್ಶನ ನೀಡುತ್ತಿರುತ್ತಾನೆ. ವರಾಹ ಸ್ವಾಮಿಯು ನೆಲೆಸಿರುವ ಬಗ್ಗೆ ಬೇಟೆಗಾರನ ಕಥೆಯನ್ನು ಇಂದಿನ ಸಂಚಿಕೆಯಲ್ಲಿ ತಿಳಿಯೋಣ.
” ನಿನ್ನ ಪಾದ ನಾ ಹಿಡಿದೆ ನನ್ನ ಹಿಡಿದು ಉದ್ಧರಿಸೊ” ಎಂಬ ಸ್ವಾಮೀಜಿಯವರ ಕೀರ್ತನೆಯಂತೆ ಬೇಟೆಗಾರನ ಭಕ್ತಿ ಹಾಗೂ ವರಾಹಸ್ವಾಮಿಯು ಹೇಗೆ ಅನುಗ್ರಹಿಸಿದನೋ ಎಂಬುದನ್ನು ಶ್ರೀ ಸ್ವಾಮೀಜಿ ಯವರು ಅಮೋಘವಾಗಿ ವರ್ಣಿಸಿದ್ದಾರೆ. ತಪ್ಪದೇ ವೀಕ್ಷಿಸಿ, ನಿಮ್ಮ ಬಂಧು ಬಾಂಧವರಿಗೂ ವೀಕ್ಷಿಸಲು ಸಲಹೆ ನೀಡಿ.
( ಸಶೇಷ )

  • ಭಾಲರಾ
    ಬೆಂಗಳೂರು.

ಜೈಗುರುದತ್ತ


Share