ಮೈಸೂರು ಪತ್ರಿಕೆ, ಅಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ -16

890
Share

ಶ್ರೀ ಗುರು ಗೀತ – ಭಾಗ 16
ಸಂಸಾರವೆಂಬ ಅರಣ್ಯದಲ್ಲಿ ದಿಕ್ಕೆಟ್ಟಾಗ ಮಾರ್ಗತೋರಿಸುವಂತಹ ಗುರುವಿಗೆ ನಮಸ್ಕಾರ.
ತಾಪತ್ರಯ ವೆಂಬ ಅಗ್ನಿಯಲ್ಲಿ ಸುಟ್ಟು ಬೇಯುತ್ತಿರುವ ಪ್ರಾಣಿಗಳಿಗೆ ಗುರುವೆ ಗಂಗ. ಅಂತಹ ಗುರುವಿಗೆ ನಮಸ್ಕಾರ.
ಸಕಲ ಲೋಕಗಳಿಗೆ ಕಾರಣನೂ, ಆನಂದಕರನೂ, ಸಂಸಾರ ಸಾಗರವನ್ನು ದಾಟಿಸುವಂತಹವನೂ ಆದ ಗುರುವಿಗೆ ನಮಸ್ಕಾರ.
ಗುರು ರೂಪ ಧ್ಯಾನಕ್ಕೆ ಆಧಾರ, ಪೂಜಾ ಮೂಲವು ಗುರುವೆ, ಗುರು ವಾಕ್ಯಗಳೆಲ್ಲವೂ ಮಂತ್ರ, ಗುರು ಕೃಪೆ ಯಿಂದಷ್ಟೆ ಮೋಕ್ಷ ಪಡೆಯಲು ಸಾಧ್ಯ.
ಹುಟ್ಟು ಸಾವೆಂಬ ರೋಗವನ್ನು ಹೋಗಲಾಡಿಸುವಂತಹ ಗುರುವಿಗೆ ಶರಣು.
ಶಿವನು ಕೋಪಗೊಂಡರೆ ಗುರುವು ರಕ್ಷಿಸುವನು, ಗುರುವು ಕೋಪಗೊಂಡರೆ ಯಾರೂ ರಕ್ಷಿಸಲಾರರು.
ಮುಂದಿನ ಶ್ಲೋಕಗಳಲ್ಲಿ ಬರುವ ಶಿವನಾಮದ ಅರ್ಥ ತ್ರಿಮೂರ್ತಿ ಸ್ವರೂಪ ಎಂದು.
ಗುರುವಿಗೆ ಶಿವನಂತೆ ಮೂರು ಕಣ್ಗಳಿಲ್ಲ, ವಿಷ್ಣುವಿನಂತೆ ನಾಲ್ಕು ಕೈಗಳಿಲ್ಲ ಆದರೇ ಈ ಚರಮೂರ್ತಿಯೇ ಸರ್ವಸ್ವವೂ..
ಪರಿಪೂರ್ಣನೂ, ದೋಷರಹಿತನೂ, ನಿಷ್ಕಳನೂ, ಆಶಾರಹಿತನೂ, ನಿರ್ವಿಕಾರನೂ, ಮಂಗಳಪ್ರದನೂ ಆದ ಶ್ರೀ ಗುರುವಿಗೆ ನಮಸ್ಕಾರ.
ಶಿಷ್ಯನ ಜೀವ ಹೃದಯ ಪದ್ಮ ಹಾಗೂ ಆಧ್ಯಾತ್ಮ ಹೃದಯ ಪದ್ಮವೂ ಗುರುವೆಂಬ ಸೂರ್ಯ ಕಿರಣದಿಂದ ಹೇಗೆ ಅರಳುತ್ತದೆ ಎಂಬುದನ್ನು ಶ್ರೀ ಸ್ವಾಮೀಜಿ ಯವರು ಮನೋಜ್ಞವಾಗಿ ವರ್ಣಿಸಿದ್ದಾರೆ ಇಂದಿನ ಸಂಚಿಕೆಯಲ್ಲಿ.
ಜೈಗುರುದತ್ತ


Share