ಮೈಸೂರು ಪತ್ರಿಕೆ ಆಧ್ಯಾತ್ಮಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 44

Share

ಶ್ರೀ ವೇಂಕಟೇಶ್ವರ ಕಲ್ಯಾಣ – ಭಾಗ 44
ನಿನ್ನೆಯ ಸಂಚಿಕೆಯಲ್ಲಿ ಸಪ್ತಗಿರಿಯ ಇತರ ನಾಮಗಳ ಬಗ್ಗೆ ತಿಳಿದುಕೊಂಡೆವು.
ಇಂದು ಕೆಲವು ನಾಮಗಳು ಹೇಗೆ ಬಂದವೆಂದು ತಿಳಿದುಕೊಳ್ಳೋಣ.
‘ ವೇಂ ‘ ಅಂದರೆ ಪಾಪಗಳು, ‘ ಕಟ ‘ ಎಂದರೆ ನಾಶ ಮಾಡುವುದು. ಈ ವೇಂಕಟಕ್ಕೆ ಪ್ರಭುವು ಸ್ವಾಮಿಯಾದ್ದರಿಂದ ಸ್ವಾಮಿಯನ್ನು ವೇಂಕಟೇಶ್ವರ ಎಂದು ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ಪ್ರತಿ ಹೆಜ್ಜೆಗೂ ಸ್ವಾಮಿಯ ನಾಮಸ್ಮರಣೆ ಮಾಡುತ್ತಲೇ ಇರಬೇಕು.
ನಾರಾಯಣ ಮುನಿಗೆ ಸ್ವಾಮಿಯು ಈ ಜಾಗದಲ್ಲಿ ಮುಕ್ತಿ ಕೊಟ್ಟದ್ದರಿಂದ ನಾರಾಯಣಾದ್ರಿ ಎಂಬ ಹೆಸರು ಬಂದಿತು.
ಒಮ್ಮೆ ವಾಯುದೇವನು ಸ್ವಾಮಿಯನ್ನು ನೋಡಲು ಹೋಗುತ್ತಾನೆ. ಬಾಗಿಲಿನಲ್ಲಿದ್ದ ಆದಿಶೇಷನು ಒಳಗೆ ಹೋಗಲು ಅನುಮತಿ ನೀಡುವುದಿಲ್ಲ. ಇಬ್ಬರಲ್ಲೂ ಮಾತಿನ ಚಕಮಕಿ ಆರಂಭವಾಗುತ್ತದೆ. ನಾರಯಣನು ಬಂದು ನೋಡುತ್ತಾ ಸುಮ್ಮನೆ ನಿಲ್ಲುತ್ತಾನೆ. ಆದಿಶೇಷನು ತನ್ನ ಬಲ ಪ್ರದರ್ಶಿಸಲು ಬೆಟ್ಟಕ್ಕೆ ಸುತ್ತಿಕೊಳ್ಳುತ್ತಾನೆ, ವಾಯುವು ಪ್ರಳಯದಂತ ಗಾಳಿ ಬೀಸಿ ತನ್ನ ಬಲ ಪ್ರದರ್ಶಿಸುತ್ತಾನೆ. ಆ ಸಮಯಕ್ಕೆ ಬಂದ ನಾರದನು ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ನಿಂತಿರುವ ಶ್ರೀ ಹರಿಯನ್ನು ನೇಡಿ ಇದೆಲ್ಲ ಇವನದೆ ಸಂಕಲ್ಪವೆಂದು ಅರಿತು ಗೋವಿಂದ ಗೋವಿಂದ ಎನ್ನುತ್ತಾನೆ. ಇದನ್ನು ಕೇಳಿ ಆಶ್ಚರ್ಯಗೊಂಡ ಆದಿಶೇಷನು ತನ್ನ ಒಂದು ಮುಖದ ಹಿಡಿತ ಸಡಿಲಿಸಿ ತಲೆ ಮೇಲೆತ್ತುತ್ತಾನೆ ಇದನ್ನು ನೋಡಿದ ವಾಯುದೇವನು ಬೆಟ್ಟವನ್ನು ತಳ್ಳಿ ಭೂಲೋಕದಲ್ಲಿ ಸ್ಥಾಪಿಸಿಯೆ ಬಿಡುತ್ತಾನೆ. ಇಬ್ಬರಿಗು ತಮ್ಮ ಗರ್ವದ ಅರಿವಾಗುತ್ತದೆ. ಆದಿಶೇಷನು ಅಲ್ಲೇ ನೆಲೆಸುತ್ತಾನೆ. ಹಾಗಾಗಿ ಶೇಷಾಚಲ ಎಂಬ ಹೆಸರು ಬಂದಿತು. ಇದಿಷ್ಟನ್ನು ಶ್ರೀ ಸ್ವಾಮೀಜಿ ಯವರು ಇಂದಿನ ಸಂಚಿಕೆಯಲ್ಲಿ ಪ್ರವಚನ ಮಾಡಿದ್ದಾರೆ. ಎಲ್ಲರೂ ನೋಡಿ ಆನಂದಿಸಿ ಮತ್ತು ನಿಮ್ಮ ಬಂಧುಬಾಂದವರಿಗೂ ಆನಂದಪಡಿಸಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ .


Share