ಮೈಸೂರು ಪತ್ರಿಕೆ ಆಧ್ಯಾತ್ಮಿಕ ಗಳ ಗುರು ಗೀತ ಭಾಗ 14

ಶ್ರೀ ಗುರು ಗೀತ ಭಾಗ – 14
ಸಂಸಾರವೆಂಬ ಮರವನ್ನು ಹತ್ತಿ ನರಕವೆಂಬ ಸಮುದ್ರದಲ್ಲಿ ಬೀಳುತ್ತಿರುವ ಲೋಕವನ್ನು ಉದ್ಧರಿಸುವ ಗುರುವಿಗೆ ನಮಸ್ಕಾರ.
ಸಂಸಾರ ವೆಂಬ ವೃಕ್ಷಕ್ಕೆ ಅಂಟಿರುವ ಜೀವಿಯು ಸಾಯುತ್ತಿದೆ. ಜೀವಾತ್ಮನು ಶರೀರಕ್ಕೆ ಅಂಟಿಕೊಂಡಿರುತ್ತಾನೆ. ಆದ್ದರಿಂದ ಗುರುವಿನ ಕಡೆ ಎಲ್ಲಾ ಜೀವಿಯು ಒಂದಲ್ಲ ಒಂದು ದಿನ ತಿರುಗಲೇ ಬೇಕು. ಗುರುವು ತ್ರಿಗುಣಾತ್ಮಕನು ಎಂಬುದನ್ನು ಎಂದಿಗೂ ಮರೆಯಬಾರದು.
ನಿರ್ವಿಕಲ್ಪವಾದ ಪರ ಚೈತನ್ಯವೇ ಜೀವವಾಗಿ ಸೇರಿದೆ. ನಿನ್ನಲ್ಲಿ ಬೆಳಕೂ ಇದೆ, ಕತ್ತಲೂ ಇದೆ. ನೀನು ಸಂಪೂರ್ಣ ಜಾಗ್ರತನಾದಲ್ಲಿ ಎಲ್ಲವೂ ಪ್ರಕಾಶಮಾನವಾಗಿರುತ್ತದೆ.
ಚೈತನ್ಯ ವಸ್ತುವು, ಆದಿ ಅಂಚವಾದುಜು, ಮಾಯಾತೀತ, ನಿರಂಜನ, ನಾದ ಬಿಂದು ಕಳಾತೀತನಾದ ಗುರುವಿಗೆ ನಮಸ್ಕಾರ.
ಜಗತ್ತಿನಲ್ಲಿರುವ ಸ್ಥಾವರ ಜಂದಮಗಳಲ್ಲಿ ಯಾರ ಚೈತನ್ಯವು ನೆಲೆಸಿದೆಯೋ ಆ ಗುರುವಿಗೆ ನಮಸ್ಕಾರ.
ಇನ್ನು ಗುರುವನ್ನು ಸತ್ – ಚಿತ್ – ಆನಂದ ಮೂರ್ತಿಯಾಗಿ ಹೇಗೆ ಭಾವಿಸಿದ್ದಾರೆಂದು ತಿಳಿಯಲು ಸ್ವಾಮೀಜಿಯವರ ಇಂದಿನ ಉಪನ್ಯಾಸವನ್ನು ಕೇಳೋಣವೇ?
ಜೈಗುರುದತ್ತ