ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ-17

699
Share

ಶ್ರೀ ಗುರು ಗೀತ – ಭಾಗ 17
ಪಿಂಗಳ ನಾಗನ ಕಥೆಯೊಂದಿಗೆ ಇಂದಿನ ಪ್ರವಚನ ಆರಂಭವಾಗಲಿದೆ. ಪಿಂಗಳನಾಗನು ಹೇಗೆ ಗುರುಭಕ್ತಿ ತೋರಿದನೋ, ದತ್ತ ಸ್ವಾಮಿಯು ಹೇಗೆ ಅವನಿಗೆ ಉಪದೇಶಸಿ ಉದ್ಧರಿಸಿದನೆಂಬುದು ತಿಳಿಯುತ್ತದೆ.
ನೋಡುವವನು, ನೋಡಲ್ಪಡುವವನು ಆದ ಗುರುವಿಗೆ ನಮಸ್ಕಾರ.
ಗುಣಗಳಿಗೆ ಆಧಾರನು, ಗುಣ ಉಳ್ಳವನು, ಗಪಣರಹಿತನೂ ಜೀವರೂಪವಾಗಿ ಆತ್ಮರೂಪವಾಗಿ ಜನ್ಮರಹಿತನೂ ಆದ ಗುರುವಿಗೆ ನಮಸ್ಕಾರ.
ಆದಿ ಇಲ್ಲದವನೂ, ಎಲ್ಲಕ್ಕೂ ಆದಿಯಾವನು, ಮಾಯಾತೀತನೂ ಆದ ಶಿವನಾದ ಗುರುವಿಗೆ ನಮಸ್ಕಾರ.
ಸರ್ವ ಮಂತ್ರ, ತಂತ್ರ ಸ್ವರೂಪಿಯಾದ ಗುರುವಿಗೆ ನಮಸ್ಕಾರ.
ನಮ್ಮ ಉಪಾಸನೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಯೋಣ.
ಪುಣ್ಯಾತ್ಮರಿಗೆ, ಶುದ್ಧ ಮನಸ್ಕರಿಗೆ, ಗುರುವು ಸದಾ ಸಾಕ್ಷಾತ್ ಶಿವನಾಗಿಯೇ ಕಾಣುತ್ತಾರೆ, ಪಾಪಾತ್ಮರಿಗೆ ಗುರುವು ಸಾಮಾನ್ಯ ಮನುಷ್ಯ ನಾಗಷ್ಟೆ ಕಾಣಿಸುತ್ತಾರೆ.
ಗುರುವಿನ ಪಾದಕ್ಕೆ ಮೊದಲು ನಮಸ್ಕರಿಸಬೇಕು. ಪ್ರತಿನಿತ್ಯ ವೂ ನಮ್ಮೆದುರಿಗೆ ಗುರುವಿಲ್ಲದ ಸಂರ್ಭದಲ್ಲಿ ಗುರು ಇರುವ ದಿಕ್ಕಿಗೆ ತಿರುಗಿ ಮಾನಸಿಕವಾಗಿ ನಮಸ್ಕರಿಸಬೇಕು. ಶಿರಸ್ಸು, ಮನಸ್ಸು, ನೋಟ, ಕಿವಿಗಳು, ಮಾತು, ಎದೆ, ಕೈ ಮತ್ತು ಕಾಲುಗಳು ಈ ಎಂಟು ಅವಯವಗಳಿಂದ ಮಾಡುವ ನಮಸ್ಕಾರವೇ ಅಷ್ಟಾಂಗ ಯೋಗ.
ಗುರು ಸೇವೆ ಮಾಡುವವರಿಗೆ ಮಾತ್ರ ತ್ರಿಮೂರ್ತಿ ತತ್ವಗಳು ತಿಳಿಯಲು ಸಾಧ್ಯ ಎಂದು ಖಡಾಖಂಡಿತವಾಗಿ ತಿಳಿಯಪಡಿಸಿರುವ ಸದ್ಗುರು ಸ್ವಾಮೀಜಿ ಯವರಿಗೆ ನಮಸ್ಕಾರಗಳು.
ಜೈಗುರುದತ್ತ


Share