ಶ್ರೀ ಗುರು ಗೀತ – ಭಾಗ 19
ಶ್ವೇತ ರೂಪದಲ್ಲಿ ಗುರುವನ್ನು ಭಾವಿಸಬೇಕು ಎಂಬುದನ್ನು ತಿಳಿದಿದ್ದೆವು. ಗುರು ಧರಿಸುವ ವಸ್ತ್ರ, ಆಭರಣ, ಬಣ್ಣ ಎಲ್ಲಕ್ಕು ಸಂದರ್ಭಕ್ಕೆ ತಕ್ಕಂತೆ ಪ್ರತ್ಯೇಕ ಅರ್ಥವಿರುತ್ತದೆ.
ಗುರುವಿಗಿಂತ ಅಧಿಕವಾದುದು ಇಲ್ಲ. ಇದು ಶಿವಶಾಸನ. ಇಲ್ಲಿಯವರೆಗೂ ಧ್ಯಾನದ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದೇವೆ, ಮುಂದೆ ಧ್ಯಾನಯೋಗದ ಬಗ್ಗೆ ಉಪದೇಶಿಸುವರು ಪೂಜ್ಯ ಸ್ವಾಮೀಜಿ ಯವರು.
ಉಪಾಸನೆ ಮಾಡುವವರಲ್ಲಿ ಇರುವ ವ್ಯತ್ಯಾಸಕ್ಕನುಗುಣವಾಗಿ ಜ್ಞಾನಯೋಗವನ್ನು ಉಪದೇಶಿಸುವರು ಗುರುಗಳು.
ವಿಶುದ್ಧ ಜ್ಞಾನದ ಬಗ್ಗೆ ತಿಳಿಯುವ ಮೊದಲು ಅಪರಿಶುದ್ಧ ಜ್ಞಾನ ತೊಳೆದುಕೊಳ್ಳಬೇಕು. ನಮ್ಮಲ್ಲಿರುವ ಒಂದೊಂದು ಅವಿದ್ಯೆಯನ್ನು ನಿವಾರಿಸಲು ಒಂದೊಂದು ವಿದ್ಯೆಯನ್ನು ಸದ್ಗುರುಗಳು ಸೇರಿಸುತ್ತಾರೆ. ಇದರಲ್ಲಿ ಒಮ್ಮೊಮ್ಮೆ ಲೌಕಿಕ ಜ್ಞಾನವು ಸಹಾಯಕವಾಗುತ್ತದೆ. ಯಾವುದನ್ನು ಪೂರ್ಣವಾಗಿ ತಿಳಿದುಕೊಳ್ಳಲಾಗುವುದಿಲ್ಲ ಅದು ಪರಿಶುದ್ಧ ಜ್ಞಾನವಾಗುವುದಿಲ್ಲ.
ದೇಹ ಇರುವವರೆಗೂ ಗುರುವನ್ನು ಧ್ಯಾನಿಸಬೇಕು. ದೇಹ ಇರುವವರೆಗೆ ಎಂದರೆ ಈ ಶರೀರ ಇರುವತನಕ ಎಂದರ್ಥವಲ್ಲ, ನಾನು ನನ್ನದು ಎಂಬುದು ಇರುವತನಕ ಎಂದರ್ಥ. ಇದು ಸತತ ಅಭ್ಯಾಸದಿಂದ ಸಾಧ್ಯ.
ಪ್ರಜ್ಞಾವಂತ ಶಿಷ್ಯ ಗುರುವನ್ನು ತಿರಸ್ಕರಿಸಬಾರದು, ಅಸತ್ಯ ನುಡಿಯಬಾರದು, ಏಕವಚನದಲ್ಲಿ ಭೋಧಿಸಬಾರದು. ಗುರುವಿನ ವಸ್ತುಗಳಿಗೆ ಆಸೆ ಪಡಬಾರದು. ಗುರುಗಳೇ ಕೊಟ್ಟಾಗ ಮಾತ್ರ ಪ್ರಸಾದವೆಂದು ಸ್ವೀಕರಿಸಬೇಕು.
ಈ ರೀತಿ ಧಾರಾಕಾರವಾಗಿ ಉಪದೇಶಾಮೄತ ಹರಿದಿದೆ ಸಾಕ್ಷಾತ್ ಸದ್ಗುರುಗಳಿಂದ.
ಜೈಗುರುದತ್ತ