ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ- 21

734
Share

ಶ್ರೀ ಗುರು ಗೀತ – ಭಾಗ 21
ನಾನು ಪರಂಬ್ರಹ್ಮನಿಂದ ಬಂದಿರುವುದು ಹೇಗೆ?
ನಮ್ಮೆಲ್ಲರಿಗೂ ವಂಶ ಪರಂಪರೆ ಎಂಬುದೊಂದಿದೆ. ಎಲ್ಲರಿಗೂ ಒಬ್ಬ ಋಷಿ ಮುನಿಯ ಆದಿ ಇದ್ದೇ ಇರುತ್ತದೆ. ಅವರನ್ನು ಸೃಷ್ಟಿ ಸಿದ್ದು ಬ್ರಹ್ಮ ನೇ. ಆದ ಕಾರಣ ನಾನೂ ಪರಂಬ್ರಹ್ಮನೇ.
ಪರಂಬ್ರಹ್ಮ ವಸ್ತುವು ಒಂದು ಜೀವಿ. ಅದಕ್ಕೆ ಜಾತಿ ಅಥವಾ ಲಿಂಗಭೇದವಿಲ್ಲ.
ಮತ್ತೆ ಪಾಪಕರ್ಮಗಳನ್ನು ಯಾರು ಮಾಡುತ್ತಿದ್ದಾರೆ? ಸೃಷ್ಟಿ ಕರ್ತನು ನೀನೆ ಆದಮೇಲೆ ತಪ್ಪು ಜೀವಿಯದು ಹೇಗೆ ಆಗುತ್ತದೆ?
ನೀನಾಗಿ ನೀನ್ನ ಇಚ್ಛೆಯಿಂದ ಕೆಲಸಗಳನ್ನು ಅಥವ ಪರಂಬ್ರಹ್ಮನ ಸ್ಫುರಣೆಯಿಂದ ಮಾಡಿದ್ದೀಯೋ ತಿಳಿದುಕೊಳ್ಳ ಬೇಕು. ನೀನು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀನೆ ಹೊಣೆಯಾಗುತ್ತೀಯ. ಏನೇ ಕಷ್ಟಗಳು ಬಂದರೂ ನಾವು ಮಾಡಿದ್ದು ನಾವೇ ಅನುಭವಿಸಲೇಬೇಕಪ. ಪರಮಾತ್ಮನ ಆಜ್ಞೆ ಎಂದು ಮಾಡಿದಾಗ ಒಳ್ಳೆಯದು ಕೆಟ್ಟದ್ದು ಎಲ್ಲಾ ಅವನ ಆಜ್ಞೆ ಎಂದೇ ಭಾವಿಸಬೇಕು.
ಒಳ ಮನಸ್ಸಿಗೆ ಕೆಟ್ಟದ್ದು ಎಂದು ತಿಳಿದು ತಪ್ಪು ಮಾಡಿದಲ್ಲಿ ಪರಮಾತ್ಮನ ಆಜ್ಞೆ ಉಲ್ಲಂಘಿಸಿದಂತೆಯೆ.
ಗುರುಗಳಲ್ಲಿ ಶಿಕ್ಷೆಯನ್ನು ಕೊಟ್ಟು ಶಿಕ್ಷಣವನ್ನು ಕೊಟ್ಟು ಕರುಣೆ ತೋರು ಎಂದಷ್ಟೆ ಕೋರಬೇಕು. ಎಚ್ಚರಿಕೆಯಿಂದಿರುವುದು ಶಿಷ್ಯನ ಕರ್ತವ್ಯ.
ಶಾಂತನಾಗಿಯೂ, ಪರಮಾತ್ಮನ ಸ್ವರೂಪಿಯಾಗಿಯೂ ಗುರುವನ್ನು ಕಾಣಬೇಕು.ಬುದ್ಧಿ ವಂತನಾದ ಶಿಷ್ಯನು ಬುದ್ಧಿಗೆ ಅತೀತನಾದ ಸತ್-ಚಿತ್-ಆನಂದ ಗುರುವನ್ನು ಪಾಲಿಸಬೇಕು.
ನಾನೇ ಪರಂಬ್ರಹ್ಮ ಎಂದು ಹೇಗೆ ಗೋಚರವಾಗುತ್ತದೆ ಎಂದು ತಿಳಿಯಲು ತಪ್ಪದೇ ಇಂದಿನ ಸಂಚಿಕೆಯನ್ನು ವೀಕ್ಷಿಸಿ ಶ್ರೀ ಶ್ರೀ ಸ್ವಾಮೀಜಿ ಯವರ ಕೃಪೆಗೆ ಪಾತ್ರರಾಗೋಣ.
ಜೈಗುರುದತ್ತ


Share