ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ -23

ಶ್ರೀ ಗುರು ಗೀತ – ಭಾಗ 23
ಗುರು ಗೀತ ಫಲದ ಬಗ್ಗೆ ವಿವರಣೆ ಮುಂದುವರೆಸಿ, ಗುರುಗೀತೆಯ ಒಂದೊಂದು ಅಕ್ಷರ ಮಹತ್ತರ ಫಲವಿದೆ. ಘೋರ ಪಾಪಗಳನ್ನು ನಾಶಮಾಡಿ ಅಜ್ಞಾನವನ್ನು ದೂರಮಾಡುತ್ತದೆ.
ಗುರುವಲ್ಲಿ ಆತ್ಮಜ್ಞಾನಕ್ಕಷ್ಟೆ ಯಾಚಿಸಬೇಕು. ಆತ್ಮ ಜ್ಞಾನ ಸಿಕ್ಕಿದಲ್ಲಿ ಎಲ್ಲಾ ಪಾಪಗಳು ನಾಶವಾಗುತ್ತದೆ. ಸಾಧನೆಯ ಮೊದಲ ಮೆಟ್ಟಿಲು ಅಷ್ಟಸಿದ್ಧಿಗಳನ್ನು ಪಡೆಯುವುದಾದರು ಅದು ಅಷ್ಟಕ್ಕೆ ನಿಲ್ಲಬಾರದು, ಆತ್ಮ ಜ್ಞಾನ ಪಡೆಯುವತ್ತ ಪ್ರಯಾಣ ಮುಂದೆ ಸಾಗಬೇಕು. ಅಹಂಕಾರ ಬರದಂತೆ ಎಚ್ಚರ ವಹಿಸಬೇಕು.
ಗುರುಗೀತೆ ಪಠಿಸುವುದರಿಂದ ದುಃಸ್ವಪ್ನಗಳು ನಾಶವಾಗುತ್ತದೆ. ದುಃಸ್ವಪ್ನಗಳು ಎಂದರೆ ನಿದ್ದೆಯಲ್ಲಿ ಬರುವುದು ಮಾತ್ರವಲ್ಲ, ಎಚ್ಚರದಲ್ಲಿದ್ದಾಗ ಬರುವ ದುರಾಲೋಚನೆಗಳು ದುಃಸ್ವಪ್ನ. ಅಂತಹ ದುರಾಲೋಚನೆಗಳು ನಾಶವಾಗುತ್ತದೆ. ಬಂಧಗಳನ್ನುಂಟು ಮಾಡುವುದು ದುಃಸ್ವಪ್ನ, ಜನ್ಮ ಕಳೆದು ಸಾಧನೆಯತ್ತ ಹೋಗುತ್ತ ಸದ್ಗುರು ಕೃಪೆಗೆ ಪಾತ್ರರಾಗುವುದು ಸುಸ್ವಪ್ನ. ಗುರುಗೀತೆ ಪಾರಾಯಣದಿಂದ ಅಂತಹ ಸುಸ್ವಪ್ನ ಉಂಟಾಗುತ್ತದೆ.
ಗುರುಗೀತೆ ಜಪಿಸುವವರಿಗೂ, ಕೇಳುವವರಿಗೂ ಕಾಮಧೇನು ಒಲಿಯುತ್ತಾಳೆ. ಅಜ್ಞಾನ ನಾಶವಾಗುತ್ತದೆ. ವಿಚಿತ್ರ ಕಾಯಿಲೆಯಿಂದ ನರಳುತ್ತಿರುವವರ ಮುಂದೆ ಗುರುಗೀತ ಪಠಿಸುವುದರಿಂದ ಅವರ ಅಜ್ಞಾನ ತೊಲಗುತ್ತದೆ ಎಂದು ಗುರುಗೀತೆಯ ಫಲಗಳನ್ನು ಅತ್ಯದ್ಭುತವಾಗಿ ಶ್ರೀ ಸ್ವಾಮೀಜಿ ಯವರು ವರ್ಣಿಸಿದ್ದಾರೆ.
( ವಿಶೇಷ ಸೂಚನೆ : ಈ ಸಂಚಿಕೆಯಲ್ಲಿ ಫಲಗಳನ್ನು ಮೂರು ಭಾರಿ ಮತ್ತೆ ಮತ್ತೆ ಅದನ್ನೇ ಹೇಳಿರುವ ಉದ್ದೇಶ ಗುರುಗೀತೆಯಿಂದ ಸಿಗುವ ಲೌಕಿಕ ಭೋಗಗಳಿಗೆ ಹೆಚ್ಚು ಗಮನ ಹರಿಸದೆ ಆತ್ಮಜ್ಞನಕ್ಕೆ ಸಂಪೂರ್ಣ ಗಮನ ಹರಿಸಬೇಕೆಂದು.)
ಜೈಗುರುದತ್ತ