ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಭಾಗ -24

977
Share

ಶ್ರೀ ಗುರು ಗೀತ – ಭಾಗ 24
ಇಂದು ಮೊದಲಿಗೆ ಸ್ವಲ್ಪ ಹಿಂದಿನ ಸಂಚಿಕೆಯ ವಿಷಯವನ್ನೇ ಮತ್ತೆ ಪುನರುಚ್ಚರಿಸಿದ್ದಾರೆ. ಮುಂದುವರೆಯುತ್ತ ಗುರುಗೀತೆಯು ಅಂತರ್ ಶತ್ರುಗಳನ್ನು ನಾಶಮಾಡುತ್ತದೆ. ಲೌಕಿಕ ಕಾಮನೆಗಳು ಈಡೇರುವುದು ಮೊದಲಿಗೆ ಒಂದು ಆಕರ್ಷಣೆ ಅಷ್ಟೆ. ಗುರು ಗೀತೆಯ ನಿಜವಾದ ಫಲ ಆತ್ಮಜ್ಞಾನ ಪಡೆದುಕೊಳ್ಳುವುದು.
ಗುರುಗೀತೆಯ ಒಂದೊಂದು ಶ್ಲೋಕವು ಒಂದೊಂದು ಸಿದ್ಧಿಯನ್ನು ನೀಡುತ್ತದೆ.
ಭಕ್ತಿ ಯಿಂದ ಜಪಿಸಿದಲ್ಲಿ ಮೋಕ್ಷವೇ ಅತಿ ಪ್ರಧಾನವಾದ ಫಲ. ಯಾರಾದರೂ ಸಿದ್ಧಿಯಲ್ಲಿ ತೊಡಗಿ ಮಧ್ಯದಲ್ಲಿ ಭ್ರಷ್ಟನಾದರೆ ಗುರುವು ಅಂತವನನ್ನು ಕೈ ಹಿಡಿದು ಮೇಲೆತ್ತುತ್ತಾರೆ. ಗುರುಗೀತೆ ಪಾರಾಯಣದಿಂದ ಮೋಕ್ಷವು ಲಭಿಸುತ್ತದಲ್ಲದಂ ಐಹಿಕ ಕಾಮನೆಗಳಾದ ಐಶ್ವರ್ಯ, ಸಂತಾನವು ಲಭಿಸುತ್ತದೆ. ಸ್ತ್ರೀಯರು ನಿತ್ಯ ಪಠಿಸುವುದರಿಂದ ಸೌಮಂಗಲ್ಯವು ಲಭಿಸುತ್ತದೆ. ವಿಧವೆಯರು ಸಕಾಮದಿಂದ ಪಠಿಸಿದಲ್ಲಿ ಸೌಮಂಗಲ್ಯವು, ನಿಷ್ಕಾಮದಿಂದ ಪಠಿಸಿದಲ್ಲಿ ಮೋಕ್ಷವನ್ನು ಮುಂದಿನ ಜನ್ಮದಲ್ಲಿ ಪಡೆಯುತ್ತಾಳೆ.
ಗುರುಗೀತೆ ಸರ್ವದೇವಸ್ವರೂಪಿ.
ಹೀಗೆ ಸ್ವಾಮೀಜಿ ಯವರು ಗುರುಗೀತೆಯಿಂದ ಸಿಗುವವಲೌಕಿಕ ಹಾಗೂ ಆಧ್ಯಾತ್ಮಿಕ ಫಲಗಳನ್ನು ಎಳೆ ಎಳೆಯಾಗಿ ಬಿಡಿಸಿ ಮನದಟ್ಟಾಗುವುಂತೆ ಭೋದಿಸಿದ್ದಾರೆ.
ಜೈಗುರುದತ್ತ


Share