ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-4

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 4
ಬ್ರಹ್ಮ ಪುರಾಣದ ವರಾಹ ಸ್ವಾಮಿಯ ಕಥೆಯನ್ನು ನಿನ್ನೆಯ ಸಂಚಿಕೆಯಲ್ಲಿ ಕೇಳಿದೆವು. ಇಂದು?
ಪದ್ಮ ಪುರಾಣದ ಪ್ರಕಾರ ವರಾಹ ಸ್ವಾಮಿಯ ಕಥೆಯನ್ನು ಆರಂಭಿಸಿದ್ದಾರೆ.
ಬೇರೆ ಯುಗಗಳಲ್ಲಿ ಶ್ರೀ ಹರಿಯನ್ನು ಪ್ರತ್ಯಕ್ಷವಾಗಿ ದರ್ಶನ ಮಾಡಿರುವೆವು. ಆದರೆ ಕಲಿಯುಗದಲ್ಲಿ ಮಾತ್ರ ಅವನ ಚರಿತ್ರೆ ಮೂಲಕವೇ ಅವನನ್ನು ದರ್ಶಿಸಬೇಕು.
ಪಂಚಭೂತಗಳು ಒಂದೇ ಸಮನಾಗಿ ಬರುವಂತಹುದು ಭೂಲೋಕದಲ್ಲಿ ಮಾತ್ರ. ಪಂಚಭೂತದಲ್ಲೆ ಐಕ್ಯವಾಗಿರುವವರು ರಾಕ್ಷಸರು, ಪಂಚಭೂತವನ್ನೇ ಗೆದ್ದಿರುವವರು ದೇವತೆಗಳು. ಇಂತಹ ಭೂಲೋಕದಲ್ಲಿ ನಿವಸಿಸಬೇಕೆಂದು ಸಂಕಲ್ಪ ಮಾಡಿದಾಗ ಶ್ರೀ ಹರಿಗೆ ಕಂಡದ್ದು ವೆಂಕಟಾದ್ರಿ. ಈ ಸಪ್ತಗಿರಿ ಒಂದು ದೊಡ್ಡ ಸಾಲಿಗ್ರಾಮವಿದ್ದಂತೆ. ಈ ಕ್ಷೇತ್ರದಲ್ಲಿ ಮಂಚದ ಮೇಲೆ ಮಲಗಬಾರದು, ಇಲ್ಲಿ ಚಪ್ಪಲಿ ತೊಟ್ಟು ಓಡಾಡಬಾರದು. ವೆಂಕಟೇಶ್ವರನ ದರ್ಶನಕ್ಕೆ ಹೋದಾಗ ನಮ್ಮ ಒಳ್ಳೆಯದು, ಕೆಟ್ಟದ್ದು ಮಾತ್ರ ನಮ್ಮೊಡನೆ ಬರುವುದು.
ಈ ಪವಿತ್ರ ಕ್ಷೇತ್ರದ ಮತ್ಕೊಂದು ಕಥೆಯಲ್ಲಿ ಕಿನ್ನರರು ಏತಕ್ಕಾಗಿ ಶಾಪಗ್ರಸ್ತರಾದರು ಎಂಬ ಕಥೆಯನ್ನು ಇಂದು ನೋಡೋಣ.
” ಸಪ್ತಗಿರಿ ವಾಸನೇ ವೆಂಕಟೇಶ ವಂದನೆ
ಶ್ರೀನಿವಾಸ ದೇವನೆ ಪಾಪಗಳ ನಾಶನೇ “
ಎಂಬ ಸ್ವಾಮೀಜಿಯವರ ಕೀರ್ತನೆಯನ್ನು ಸ್ಮರಿಸುತ್ತ ಇಂದಿನ ಸಂಚಿಕೆಯನ್ನು ತಪ್ಪದೇ ವೀಕ್ಷಿಸಿ ಮತ್ತು ನಿಮ್ಮ ಬಂಧು ಬಾಂಧವರಿಗೂ ವೀಕ್ಷಿಸಲು ತಿಳಿಸಿ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.