ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-6

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 6
ವರಾಹ ಸ್ವಾಮಿಯ ದೇವಾಲಯ ವನ್ನು ರಾಜನು ಹೇಗೆ ನಿರ್ಮಿಸಿದನಂಂದು ನಿನ್ನೆಯ ಸಂಚಿಕೆಯಲ್ಲಿ ಕೇಳಿದೆವು. ಇಂದು
ವೆಂಕಟೇಶ್ವರ ಕಥೆಯಲ್ಲಿ ವರಾಹನ ಕಥೆ ಏಕೆ ಎಂಬ ಸಂದೇಹವೆ?
ಕೃಷ್ಣ-ಬಲರಾಮರು, ಶ್ರೀರಾಮ-ಪರಶುರಾಮರು ಒಟ್ಟಿಗೆ ಅವತಾರ ಎತ್ತಿದಂತೆ ಭಕ್ತರ ರಕ್ಷಣೆಗಾಗಿ ವರಾಹ-ವೆಂಕಟೇಶ್ವರರು ಒಟ್ಟಿಗೆ ಅವತಾರ ಎತ್ತುತ್ತಾರೆ. ಯಾವುದಾದರೂ ಕಾರ್ಯನಿಮಿತ್ತವಾಗಷ್ಟೆ ಭಗವಂತನು ಅವತಾರ ಎತ್ತುವುದು. ಒಬ್ಬ ಮನುಷ್ಯನಿಗೆ ಒಂದೇ ರೂಪ. ಆದರೆ ಭಗವಂತನ ಧರ್ಮ ಸ್ಥಾಪನೆಗಾಗಿ, ಭಕ್ತನ ಸಂರಕ್ಷಣೆಗಾಗಿ ಎಷ್ಟು ರೂಪವನ್ನಾದರೂ ತೆಗೆದುಕೊಳ್ಳುತ್ತಾನೆ.
ಶರಣಾದವರನ್ನು ರಕ್ಷಿಸುತ್ತಾನೆ ಶ್ರೀ ಹರಿ. ಭಕ್ತರು ಶ್ರೀ ಹರಿಯನ್ನು ಸ್ಮರಿಸಲು ಸಮಯಾಸಮಯವಿಲ್ಲ.
ನನ್ನ ಒಂದು ಬಾರಿ ಶರಣು ಕೋರಿದರೆ ಅವರಿಗೆ ಅಭಯವನ್ನು ಕೊಡುವುದೇ ನನ್ನ ವ್ರತ ಎಂಬ ಪ್ರತಿಜ್ಞೆ ಗೈದಿದ್ದಾನೆ ಶ್ರೀ ಹರಿ. ಇದಕ್ಕೆ ಉದಾಹರಣೆ ರಾಮ-ಕೃಷ್ಣರ ಅವತಾರಗಳು. ಆದರೆ ತನ್ನ ಪ್ರತಿಜ್ಞೆ ಈಡೇರಿದ ಮೇಲೆ ವೈಕುಂಠ ಸೇರುವುದು ಶ್ರೀ ಹರಿಯ ಪ್ರತೀತಿ. ಈ ಭಾರಿ ನಿರಂತರವಾಗಿ ತನ್ನ ಭಕ್ತರನ್ನುದ್ಧರಿಸಲು ಭೂಲೋಕದಲ್ಲಿ ನೆಲೆಸಲು ನಿರ್ಧರಿಸಿದ್ದಾನೆ. ವೈಕುಂಠ ಬಿಡುವೆನು ಆದರೆ ತನ್ನ ಭಕ್ತರ ರಕ್ಷಣೆ ಬಿಡಲೊಲ್ಲೆನು ಎನ್ನುತ್ತಾನೆ ಶ್ರೀ ಹರಿ. ಅದರಿಂದ ಭೂಮಿಯ ಮೇಲೆ ವರಾಹ ಸ್ವಾಮಿ ನೆಲೆಸಿರುವ ಪ್ರಶಾಂತ ಸ್ಥಳ ವೆಂಕಟಾದ್ರಿಯನ್ನು ಆಯ್ಕೆ ಮಾಡಿಕೊಂಡನು ವೇಂಕಟೇಶ.
” ನಾಮಕೆ ಒಲಿವೆ
ಕರೆದರೆ ಬರುವೆ”
ಎಂಬ ಶ್ರೀ ಸ್ವಾಮೀಜಿಯವರ ಕೀರ್ತನೆಯಂತೆ ಶ್ರೀ ಹರಿಯು ಭಕ್ತರ ರಕ್ಷಣೆಗಾಗಿ ಭೂಲೋಕದಲ್ಲಿ ನೆಲೆಸಲು ಮಾಡುವ ನಿರ್ಧಾರದ ಬಗ್ಗೆ ಇಂದಿನ ಸಂಚಿಕೆಯಲ್ಲಿ ಕೇಳಿರಿ, ತಪ್ಪದೇ ಸಮಮನಸ್ಕರೊಂದಿಗೆ ಹಂಚಿಕೊಳ್ಳಿ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.