ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-8

1206
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 8
ನಿನ್ನೆಯ ದಿನ ಋಷಿ ಮುನಿಗಳು ಹೇಗೆ ಯಜ್ಞ ಮಾಡಲು ತೊಡಗಿದರು ಎಂದು ಕೇಳಿಕೊಂಡೆವು. ಇಂದು….
ನಾರದ ಮಹರ್ಷಿ ಕಿವಿಗೆ ಋಷಿ ಮುನಿಗಳು ಮಾಡುತ್ತಿದ್ದ ಯಜ್ಞದ ಮಂತ್ರ ಕಿವಿಗೆ ಬಿತ್ತು. ನಾರದರಿಗೆ ಯಜ್ಞವನ್ನು ನೋಡುತ್ತಿದ್ದಂತೆ ಭಗವಂತನ ಸಂಕಲ್ಪದ ಅರಿವಾಯಿತು. ಇದಕ್ಕೆ ತಾವೂ ಏನಾದರೂ ಸಹಾಯ ಮಾಡಬೇಕೆನಿಸಿತು ನಾರದರಿಗೆ.
ನಾರದರು ಋಷಿ ಮುನಿಗಳಿರುವ ಭೂಲೋಕಕ್ಕೆ ತೆರಳಲು ನಿರ್ಧರಿಸಿದರು. ಇದರಿಂದ ನಾವು ತಿಳಿದಪಕೊಳ್ಳ ಬೇಕಾಗಿರುವ ವಿಷಯ ಭಗವಂತನ ಕಾರ್ಯ ನಡೆಯುತ್ತಿರುವುದು ತಿಳಿದರೆ ನಾವೇ ಹೋಗಿ ಭಾಗವಹಿಸಬೇಕು. ಆಹ್ವಾನವನ್ನು ಅಪೇಕ್ಷಿಸಬಾರದು. ಆಕ್ಷೇಪಿಸಲು ಬಾರದು. ಹಾಗೆ ಮಾಡುವುದು ಮಹಾಪಾಪ.
ನಾರದರು ಯಜ್ಞ ಸ್ಥಳಕ್ಕೆ ಬಂದಿದ್ದು ನೋಡಿ ಋಷಿ ಮುನಿಗಳು ಅತೀವ ಸಂತಸಗೊಂಡರು. ಏಕೆಂದರೆ ನಾರದರು ಬಂದರೆಂದರೆ ಅಲ್ಲಿ ಒಂದು ಉತ್ತಮ ಲೋಕೋದ್ಧಾರ ನಡೆಯುವುದು ಖಚಿತ.
ನಾರದರು ಉಚ್ಚರಿಸುವ ಪ್ರತಿ ನಾಮಕ್ಕೂ ಒಂದು ಅರ್ಥವಿರುತ್ತದೆ. ಇದು ತಿಳಿದಿತ್ತು ಋಷಿ ಮುನಿಗಳಿಗೆ. ಹಾಗಾಗಿ ನಾರದರು ಎರೆಡಾವರ್ತಿ ನಾರಾಯಣ ನಾರಾಯಣ ಎಂದು ಹೇಳಿ ನಿಲ್ಲಿಸಿದಾಗ ತಮ್ಮ ಯಜ್ಞದಲ್ಲಿ ಏನೋ ಲೋಪವಿದೆ ಎಂಬುದರಿವಾಯಿತು.
ಋಷಿ ಮುನಿಗಳಿಗೆ ಆತಂಕವಾರಂಭವಾಯಿತು. ಯಾವುದಾದರೂ ಕೆಲಸ ಮಾಡುವ ಮುನ್ನ ಒಂದು ಸಂಕಲ್ಪ ಮತ್ತು ಗುರಿ ಇರಬೇಕು ಆಗ ಸಾಧನೆ ಸಫಲವಾಗುತ್ತದೆ ಎಂದು ಚಮತ್ಕಾರವಾಗಿ ಹೇಳಿ ಧೈರ್ಯ ಹೇಳಿದರು. ಆಗ ಋಷಿ ಮುನಿಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಶ್ರೀ ಸ್ವಾಮೀಜಿಯವರು ಇಂದಿನ ಕಥಾಭಾಗವನ್ನು ಅತಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ ಹಾಗೂ ಮನುಷ್ಯನ ನಡವಳಿಕೆ ಬಗ್ಗೆ ಹಾಸ್ಯವಾಗಿ ಆದರೆ ತಿಳಿದುಕೊಳ್ಳ ಬೇಕಾಗಿರುವ ವಿಷಯವನ್ನು ತಿಳಿಸಿದ್ದಾರೆ. ಎಲ್ಲರೂ ನೋಡಿ ಹಾಗೂ ಶೇರ್ ಮಾಡಿ.
ಇಂದಿನ ಕಥೆ ಕೇಳುತ್ತಿದ್ದರೆ ಶ್ರೀ ಸ್ವಾಮೀಜಿಯವರ ಈ ಕೆಳಗಿನ ಕೀರ್ತನೆ ನೆನಪಾಗುತ್ತದೆ.
” ಬ್ರಹ್ಮ ವಿಷ್ಣು ಮಾಹೇಶ್ವರ
ಮೂರು ಮೂರ್ತಿ ರೂಪವದು “.
( ಸಶೇಷ )

  • ಭಾಲರಾ
    ಬೆಂಗಳೂರು.

ಜೈಗುರುದತ್ತ.


Share