ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-9

Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 9
ನಿನ್ನೆಯ ಸಂಚಿಕೆಯಲ್ಲಿ ನಾರದರು ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ದೊಡ್ಡವರಾರೆಂದು ಕೇಳಿ ಋಷಿ ಮುನಿಗಳ ಮನಸ್ಸಿನಲ್ಲಿ ಸಂದೇಹದ ಬೀಜವನ್ನು ಬಿತ್ತಿದ್ದರು. ನಂತರ ಏನಾಯಿತೆಂದು ಇಂದು ನೋಡೋಣ.
ನಾರದರಿಗೇನೋ ತಾವು ಮಾಡಿದ ಕೆಲಸದಿಂದ ತೃಪ್ತಿಯಾಯಿತು. ಆದರೆ ಋಷಿ ಮುನಿಗಳ ಮಧ್ಯೆ ಚರ್ಚೆ ಆರಂಭವಾಯಿತು ತ್ರಿಮೂರ್ತಿಗಳಲ್ಲಿ ಯಾರು ದೊಡ್ಡವರೆಂದು. ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ಎಲ್ಲರ ಗಮನವೂ ಮೌನವಾಗಿ ಕುಳಿತಿದ್ದ ಭೃಗು ಮಹರ್ಷಿ ಗಳತ್ತ ಹೋಯಿತು. ಆದರೆ ಭೃಗು ಮಹರ್ಷಿ ಗಳು ತಮಗಿಂತ ದೊಡ್ಡವರು ಬೇರೆ ಯಾರಿರಲು ಸಾಧ್ಯ ಎಂದು ಒಳಗೊಳಗಂ ಬೀಗುತ್ತಿದ್ದರು. ಎಲ್ಲರು ಭೃಗುವಲ್ಲಿ ಮೂವರಲ್ಲಿ ದೊಡ್ಡವರಾರು ಎಂದು ಕೇಳಲಾಗಿ ತಾವೇ ಖುದ್ದಾಗಿ ಮೂರು ಲೋಕಗಳಿಗೂ ಹೋಗಿ ನೋಡಿ ಬಂದು ನಿರ್ಧರಿಸುವುದಾಗಿ ಮೊದಲಿಗೆ ಬ್ರಹ್ಮ ಲೋಕಕ್ಕೆ ತೆರಳಿದರು.
ಅಲ್ಲಿಯ ವಾತಾವರಣ, ಬ್ರಹ್ಮ ಸರಸ್ವತಿಯರು ಹೇಗಿದ್ದರು, ಭೃಗು ಮಹರ್ಷಿಯ ನಡವಳಿಕೆ ಹೇಗಿತ್ತು ಇವೆಲ್ಲವನ್ನು ಶ್ರೀ ಸ್ವಾಮೀಜಿಯವರ ಅಮೃತವಾಣಿಯಲ್ಲೇ ಕೇಳಲು ಚಂದ. ಮತ್ತೆ ತಡವೇಕೆ ಬನ್ನಿ ಕೇಳೋಣ, ನಮ್ಮ ಬಂಧು ಬಾಂಧವರಿಗೂ ಕೇಳಲು ತಿಳಿಸೋಣ.
ಹಾ ಇಂದಿನ ಕಥೆ ಕೇಳುತ್ತಿದ್ದರೆ ” ಅಹಂಕಾರಕ್ಕೆ ಉದಾಸೀನವೇ ಮದ್ದು” ಎಂಬ ಗಾದೆ ಮಾತು ನೆನಪಿಗೆ ಬರುತ್ತದೆ.
( ಸಶೇಷ )

  • ಭಾಲರಾ
    ಬೆಂಗಳೂರು.

ಜೈಗುರುದತ್ತ.


Share